ಕೋಲಾರ:  ದೇಶದ ಮೊದಲ ಪ್ರಧಾನಿ ಚಾಚಾನೆಹರು ಹುಟ್ಟುಹಬ್ಬ ಆಚರಣೆ

Source: shabbir | By Arshad Koppa | Published on 15th November 2017, 8:36 AM | State News |

ಕೋಲಾರ,ನ.14: ದೇಶದ ಮೊದಲ ಪ್ರಧಾನಿ ಚಾಚಾನೆಹರು ಹುಟ್ಟುಹಬ್ಬ(ಮಕ್ಕಳದಿನಾಚರಣೆ)ಯನ್ನು ಕೋಲಾರ ಯುವ ಕಾಂಗ್ರೆಸ್ ವತಿಯಿಂದ ನಗರದ ಹೊರವಲಯದಲ್ಲಿರುವ ಅಂತರಗಂಗೆ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಕೇಕ್ ಕತ್ತರಿಸುವುದು, ಹಣ್ಣು ಸಿಹಿ ವಿತರಣೆ ಹಾಗೂ ಕ್ರೀಡೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡುವ ಅರ್ಥಪೂರ್ಣವಾಗಿ ಆಚರಿಸಲಾಯಿತು.
    ಕೆಪಿಸಿಸಿ ಮಾದ್ಯಮ ವಕ್ತಾರರಾದ ಮಹ್ಮದ್ ಅಕ್ರಂ ಅಧ್ಯಕ್ಷತೆ ವಹಿಸಿದ್ದ ಮಕ್ಕಳಿಗೆ ಕೇಕ್ ತಿನ್ನಿಸಿದ ನಂತರ ಅವರು ಮಾತನಾಡುತ್ತಾ, ಆರೋಗ್ಯವಂತೆ ಹಾಗೂ ಒಂದು ಮಟ್ಟಕ್ಕೆ ಸ್ಥಿತಿವಂತರಾದ ಜನರು ಬುದ್ದಿಮಾದ್ಯ ಮಕ್ಕಳ ಬಗ್ಗೆ ಯಾರೂ ಯೋಚನೆ ಮಾಡುವುದಿಲ್ಲ. ತಂದೆ-ತಾಯಿ ಮತ್ತು ಸಮಾಜದಿಂದ ತಿರಸ್ಕಾರ ಮಾಡಿ ದೂರ ತಳ್ಳಿದ ಮಕ್ಕಳಿಗೆ ವಸತಿ ಶಾಲೆ ತೆರೆದು ಅವರಿಗೆ ಬದುಕು ಕಟ್ಟಿಕೊಳ್ಳುವ ಮಾನವೀಯ ದೃಷ್ಟಿಯನ್ನು ಹೊಂದಿರುವ ಸದರಿ ಶಾಲೆಯ ಅಧ್ಯಕ್ಷ ಶಂಕರ್ ರವರನ್ನು ಅಭಿನಂದಿಸಿದರು.
    ಹುಟ್ಟುಹಬ್ಬಗಳು ಮತ್ತು ನಾಡಹಬ್ಬಗಳನ್ನು ಇಂತಹ ಶಾಲೆಯಲ್ಲಿ ಆಚರಣೆ ಮಾಡಿಕೊಳ್ಳುವ ಮನೋಭಾವನೆ ಸಮಾಜದಲ್ಲಿ ಬೆಳೆಯಬೇಕೆಂದು ಮನವಿ ಮಾಡಿದರು. ಸದರಿ ಶಾಲೆಯಲ್ಲಿ ಕೊಠಡಿಗಳ ಕೊರೆತೆಯಿದ್ದು, ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.


    ಕೆ.ಪಿ.ಸಿ.ಸಿ ಉಪಾಧ್ಯಕ್ಷ ಜೆ.ಕೆ. ಜಯರಾಂ ಮಾತನಾಡುತ್ತಾ ಬುದ್ಧಿ ಮಾಂಧ್ಯರಿಗೆ ನಿಜಾರ್ಥದಲ್ಲಿ ಬುದ್ಧಿ ಇದೆ. ಸಮಾಜದಲ್ಲಿ ಎಲ್ಲಾ ಅಂಗಗಳನ್ನು ಹೊಂದಿರುವ ಜನರಿಗೆ ಬುದ್ಧಿ ಇಲ್ಲ. ಎಂಬಂತಾಗಿದೆ. ವಿಕಲಚೇತನರಲ್ಲಿ ಯಾವುದೇ ಗರ್ವ, ಅಹಂಕಾರ, ಸ್ವಾರ್ಥ ಇರುವುದಿಲ್ಲ. ನಮ್ಮಲ್ಲಿ ಇಂತಹ ಎಲ್ಲಾ ಅಂಶಗಳಿದ್ದು, ನಾನಾ ದು:ಖ ದುಮ್ಮಾನಗಳಿಂದ ನೆಮ್ಮದಿ ಇಲ್ಲದೆ ಜೀವನ ನಡೆಸುತ್ತಿರುತ್ತೇವೆ. ಇಂತಹ ಬುದ್ಧಿಮಾಂಧ್ಯ ಮಕ್ಕಳ ಸೇವೆ ಮಾಡುವುದರ ಮೂಲಕ ನಮಗೂ ಉತ್ತಮ ಬುದ್ಧಿ ಬಂದಂತಾಗುತ್ತದೆ ಎಂದರು.
    ಎಲ್ಲಾ ಮಕ್ಕಳಿಗೂ ಜಯರಾಂ ರವರು ಜಮ್ಮಖಾನೆ ಮತ್ತು ಬೆಡ್ ಶೀಟ್‍ಗಳನ್ನು ಎರಡೂ ದಿವಸಗಳಲ್ಲಿ ವಿತರಣೆ ಮಾಡುವುದಾಗಿ ಘೋಷಿಸಿದರು.
    ಬುಧ್ಧಿಮಾಂಧ್ಯ ವಸತಿ ಶಾಲೆಯ ಅಧ್ಯಕ್ಷ ಶಂಕರ್ ಮಾತನಾಡಿ ಸರ್ಕಾರವು ಬುದ್ಧಿಮಾಂಧ್ಯ ಮಕ್ಕಳಿಗೆ ಶೇ. 1ರಷ್ಟು ಸರ್ಕಾರಿ ಉದ್ಯೋಗದಲ್ಲಿ ಮೀಸಲು ಇಡುವ ಆದೇಶವನ್ನು ಜಾರಿ ಮಾಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಮಾಜದಿಂದ ಕಡೆಗಣಿಸಲ್ಪಟ್ಟಿದ್ದ ಬುದ್ಧಿಮಾಂದ್ಯ ಮಕ್ಕಳಿಗೆ ಉದ್ಯೋಗಾವಕಾಶವು ಲಭಿಸಲಿದೆ ಎಂದರು.
    ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ತ್ಯಾಗರಾಜ್, ಕಾಂಗ್ರೇಸ್ ಮುಖಂಡರಾದ ರಾಜೇಶ್‍ಸಿಂಗ್, ಬಷೀರ್ ಅಹಮದ್, ವಾಜೀದ್, ಅಹಮದ್ ಸಿಂಯಾಜ್, ಸಮಾಜ ಸೇವಕ ಎಂ.ಎಸ್.ನಾಗೇಂದ್ರ, ನಹೀದ್, ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 
    ಶಿಕ್ಷಕಿ ಪ್ರಜ್ಞಾ ಪ್ರಾರ್ಥಿಸಿ, ವಿದ್ಯಾರ್ಥಿ ಶರತ್ ಮಕ್ಕಳ ದಿನಾಚರಣೆ ಬಗ್ಗೆ ಕಿರು ಭಾಷಣ, ಹಾಡು ಹಾಡಿದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.
  

Read These Next

ವಿವಾಹಿತ ಮಹಿಳೆ ಆತ್ಮಹತ್ಯೆ

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಬುಧವಾರ ರಾತ್ರಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ...