ಕೋಲಾರ:ದೃಶ್ಯ ಕಲಾ ಕಾಲೇಜು ಪ್ರವೇಶಕ್ಕೆ ಅರ್ಜಿಗಳ ಆಹ್ವಾನ

Source: shabbir | By Arshad Koppa | Published on 28th May 2017, 3:55 PM | State News |


ಕೋಲಾರ, ಮೇ 27 :    ಮೈಸೂರಿನಲ್ಲಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ಪ್ರಥಮ ಮೂಲ ತರಗತಿಗಳ ಪ್ರವೇಶಾತಿಗಾಗಿ 2017-18 ನೇ ಸಾಲಿನ ಶೈಕ್ಷಣ ಕ ವರ್ಷಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 
    ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಹಾಗೂ 22 ವರ್ಷದೊಳಗಿನವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಪ್ರವೇಶದ ಬಗ್ಗೆ ಅರ್ಜಿ ಮತ್ತು ವಿವರಣ ಪತ್ರಿಕೆಯನ್ನು 230 ರೂಗಳನ್ನು ನಗದಾಗಿ ಪಾವತಿಸಿ ಅಥವಾ 270 ಡಿ.ಡಿ.ಯನ್ನು ಡೀನ್, ಕಾವಾ, ಮೈಸೂರು ಇವರ ಹೆಸರಿನಲ್ಲಿ ಪಡೆದು ಅಂಚೆ ಮೂಲಕ ಕಳುಹಿಸಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಕಾಲೇಜಿನ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ. 
    ಅರ್ಜಿಗಳನ್ನು ಸಲ್ಲಿಸಲು ಜು.08 ಕೊನೆ ದಿನವಾಗಿದೆ. ನಂತರ ಜೂ.09 ರಂದು ಬೆಳಗ್ಗೆ 11 ಗಂಟೆಗೆ ಅರ್ಹತಾ ಪರೀಕ್ಷೆಯನ್ನು ಹಾಗೂ ಮಧ್ಯಾಹ್ನ 02 ಗಂಟೆಗೆ ವೈಯಕ್ತಿಕ ಸಂದರ್ಶನವನ್ನು ನಡೆಸಲಾಗುತ್ತದೆ. ಶುಲ್ಕವನ್ನು ಪಾವತಿಸಲು ಜೂ.13 ಕೊನೆಯ ದಿನವಾಗಿದೆ. ತರಗತಿಗಳು ಜೂ.19 ರಿಂದ ಪ್ರಾರಂಭವಾಗಲಿದೆ. ಪರೀಕ್ಷೆಯು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು, ಭಾರತ ಸರ್ಕಾರ ಪಠ್ಯಪುಸ್ತಕ ಮುದ್ರಣಾಲಯದ ಆವರಣ, ಸಿದ್ದಾರ್ಥ ನಗರ, ಮೈಸೂರು ಇಲ್ಲಿ ನಡೆಯುತ್ತದೆ. ಸಂದರ್ಶನಕ್ಕೆ ಹಾಜರಾಗುವವರು ಮೂಲ ದಾಖಲೆಗಳನ್ನು ಹಾಗೂ ಸಂದರ್ಶನಕ್ಕೆ ರಚಿಸಿರುವ ಕಲಾಕೃತಿಗಳನ್ನು ಹಾಜರುಪಡಿಸಬೇಕು ಎಂದು ಡೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಬಂಗಾರಪೇಟೆ ಶಾಸಕರ ಪ್ರವಾಸ ಕಾರ್ಯಕ್ರಮ 
ಕೋಲಾರ, ಮೇ 27 :    ಬಂಗಾರಪೇಟೆ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಕೆ.ಎಂ. ರವರು ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೋಲಾರ ತಾಲ್ಲೂಕಿನ ಹುತ್ತೂರು ಹೋಬಳಿಯ ಹರಟಿ ಮತ್ತು ಶಾಪೂರ್ ಗ್ರಾಮ ಪಂಚಾಯಿತಿಗಳಲ್ಲಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕುಂದುಕೊರತೆಗಳನ್ನು ವಿಚಾರಿಸುವರು.   ಮೇ.29 ರಂದು ಮತ್ತು 30 ರಂದು ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
    ಮೇ. 29 ರಂದು ಶಿಳ್ಳಂಗೆರೆ, ಕೆಂಚಾಪುರ, ಹೆಚ್.ಮಲ್ಲಂಡಹಳ್ಳಿ, ಹರಟಿ, ಕೋಟಿಗಾನಹಳ್ಳಿ, ಚಾಮರಹಳ್ಳಿ, ಪಟ್ನಾ, ಅಲ್ಲಿಕುಂಟೆ, ಗಂಗಾಪುರ, ಹರಳಕುಂಟೆ, ಚಂಗಮಬಸಾಪುರ, ಭಟ್ರಹಳ್ಳಿ, ನಡಪಳ್ಳಿ. ಹಾಗೂ 
    ಮೇ. 30 ರಂದು ಅಬ್ಬಣ , ದೊಡ್ನಹಳ್ಳಿ, ತಿಪ್ಪಸಂದ್ರ, ಹೊಲ್ಲಂಬಳ್ಳಿ, ಹಳೇಸೋಮರನಹಳ್ಳಿ, ಯಾರಂಘಟ್ಟ, ಶಾಪೂರು, ಸಿರೇಸಂದ್ರ, ನೀಲಕಂಠಪುರ, ಅಗ್ರಹಾರ ಸೋಮರಸನಹಳ್ಳಿ, ನಂದಂಬಳ್ಳಿ ಈ ಗ್ರಾಮಗಳಲ್ಲಿ ಕುಂದುಕೊರತೆ ವಿಚಾರಿಸಲಿದ್ದಾರೆ. ಸಾರ್ವಜನಿಕರು ಕುಂದುಕೊರತೆಗಳನ್ನು ನಿವೇದಿಸಿಕೊಳ್ಳಲು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕೋರಿದೆ. 
    

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...