ಕೋಲಾರ: ಅಪರಿಚಿತ ವ್ಯಕ್ತಿಯ ಶವ ಪತ್ತೆ

Source: shabbir, | By Arshad Koppa | Published on 15th November 2017, 8:25 AM | State News |

ಕೋಲಾರ, ಮಾಲೂರಿನ ಜಿಗ್ – ಜಾಗದ ಬಳಿ ದಿನಾಂಕ: 08-11-2917 ರಂದು ಸಂಜೆ 3-30 ಗಂಟೆಯ ಸಮಯದಲ್ಲಿ ಸುಮಾರು 56 ವರ್ಷದ ಅಪರಿಚಿತ ಗಂಡಸು  ಕುಸಿದು ಬಿದ್ದ ಪರಿಣಾಮ ಚಿಕಿತ್ಸೆಗಾಗಿ ಆತನನ್ನು ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ದಾಖಲಿಸಿದ್ದರೂ ವ್ಯಕ್ತಿ ಮೃತಪಟ್ಟಿರುತ್ತಾನೆ. ಮೃತರ ವಾರಸುದಾರರು ಇನ್ನೂ ಪತ್ತೆಯಾಗಿರುವುದಿಲ್ಲ ಎಂದು ಕೋಲಾರ ನಗರ ಪೊಲೀಸ್ ಠಾಣೆ ಆರಕ್ಷಕ ಉಪನಿರೀಕ್ಷಕರು ತಿಳಿಸಿದ್ದಾರೆ.
    ಅಪರಿಚಿತ ಮೃತ ವ್ಯಕ್ತಿಯ ಹೆಸರು ವಿಳಾಸದ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ. ಸುಮಾರು 56 ವರ್ಷ ವಯಸ್ಸು ಎಂದು ಅಂದಾಜಿಸಿದ್ದು ಕೋಲು ಮುಖ, ತಲೆಯಲ್ಲಿ ಬಿಳಿ-ಕಪ್ಪು ಕೂದಲಿದ್ದು ಬಿಳಿ ಷರ್ಟು ಮತ್ತು ಸಿಮೆಂಟ್ ಬಣ್ಣದ ಚಡ್ಡಿ ಧರಿಸಿರುತ್ತಾನೆ ಎಂದು ಪೊಲೀಸ್ ಪ್ರಕಟಣೆ ಸ್ಪಷ್ಟಪಡಿಸಿದೆ.
    ಮೇಲ್ಕಂಡ ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಿದರೆ ಕೋಲಾರ ಜಿಲ್ಲೆ ಪೊಲೀಸ್ ಅಧೀಕ್ಷಕರು, ಪೋನ್ ನಂ-08152-243966, 9480802601/02 ಡಿ.ವೈ.ಎಸ್.ಪಿ 9480802620 ಕೋಲಾರ ಉಪ-ವಿಭಾಗ ಪೋನ್ ನಂ – 08152 – 225824, ಸಿ.ಪಿ.ಐ, ನಗರ ವೃತ್ತ – 08152 – 224488, ಸಿ.ಪಿ.ಐ 9480802647 ಕೋಲಾರ ನಗರ ನಂ 08152 – 222024 9480802645 ರವರಿಗೆ ಮಾಹಿತಿ ನೀಡಲು ಕೋರಿದೆ.

Read These Next

ವಿವಾಹಿತ ಮಹಿಳೆ ಆತ್ಮಹತ್ಯೆ

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಬುಧವಾರ ರಾತ್ರಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ...