ಬಾಗಲಕೋಟೆ:ಅಂಗನವಾಡಿ ಮಕ್ಕಳ ಆಹಾರ; ಅಕ್ರಮ ಮಾರಾಟ

Source: so news | By Manju Naik | Published on 17th June 2018, 7:30 PM | State News |

ಬಾಗಲಕೋಟೆ: ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರದ ಸಾಮಗ್ರಿಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿರುವ ಘಟನೆ ಬಾಗಲಕೋಟೆ ಜಿಲ್ಲೆ ಬೀಳಗಿಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಸವಹಂಚನಾಳ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶಾಂತವ್ವ ಬಡಿಗೇರ ಎಂಬುವರ ಮಗ ಬೀಳಗಿ ಬಸ್ ನಿಲ್ದಾಣದಲ್ಲಿ ಅಕ್ರಮವಾಗಿ ಆಹಾರ ಸಾಮಾಗ್ರಿ ಮಾರಾಟಕ್ಕೆ ಯತ್ನಿಸಿದ್ದಾನೆ. ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರ ಸಾಮಗ್ರಿಗಳಾಗಿರುವ ಅಕ್ಕಿ,ರವೆ, ಶೇಂಗಾ,ತೊಗರಿ ಬೇಳೆ ಸೇರಿದಂತೆ ಸಾವಿರಾರು ರೂಪಾಯಿಗಳ ಆಹಾರ ಸಾಮಗ್ರಿಗಳನ್ನು ಸ್ಥಳೀಯ ಜನರೇ  ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ‌.
ಘಟನೆ ನಡೆದ ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರು ಪ್ರತಿಭಟನೆ ಆರಂಭಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳವವರೆಗೆ ಹೋರಾಟದ ಹಾದಿ ಹಿಡಿಯಲು ಮುಂದಾದಾಗ,  ಪರಿಸ್ಥಿತಿ ಅರಿತ ತಹಶೀಲ್ದಾರರು ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಮುಖಂಡ ಶ್ರೀಶೈಲ ಸೂಳಿಕೇರಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

Read These Next

ಭ್ರಷ್ಟಾಚಾರ ನಿರ್ಮೂಲನೆಗೆ ನಾಗರಿಕರು ಸಹಕರಿಸಬೇಕು- ಪ್ರಧಾನ ಸಿವಿಲ್‌ ನ್ಯಾಯಾಧೀಶ ಮಹಮದ್‌ ರೋಷನ್‌ ಷಾ

ಶ್ರೀನಿವಾಸಪುರ: ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ನಾಗರಿಕರು ಸಹಕರಿಸಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್‌ ...