ಕೆ.ಸಿ.ವ್ಯಾಲಿ ನೀರು ಮೂರು ಬಾರಿ ಶುದ್ದೀಕರಿಸಿ ಹರಿಸಿ ನೀಡಿ, ಇಲ್ಲವಾದರೆ ಬದುಕಲು ಬೇರೆ ಸ್ಥಳವನ್ನು ನೀಡಿ

Source: sonews | By sub editor | Published on 28th July 2018, 11:31 PM | State News | Don't Miss |

ಕೋಲಾರ :  ಕೆ.ಸಿ.ವ್ಯಾಲಿ ನೀರನ್ನು ಒಂದು ಬಾರಿಯೂ ಶುದ್ಧೀಕರಿಸಿದೆ ಕೆರೆಗಳಿಗೆ ಹರಿಸುತ್ತಿದ್ದು, ಈ ನೀರು ವಿಷಪೂರಿತ ನೊರೆಯಾಗಿದ್ದು, ಈ ನೀರನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ನರಸಾಪುರ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
    
ನರಸಾಪುರ ಗ್ರಾಮಸ್ಥರು ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಕೆ.ಸಿ.ವ್ಯಾಲಿಯ ನೀರು ಈ ಜಿಲ್ಲೆಗೆ ಕೊಟ್ಟಿರುವುದು ಸಂತಸ. ಆದರೆ ಈ ನೀರು ಬಹಳ ವಿಷಯುಕ್ತ ಖನಿಜಾಂಶಗಳುಳ್ಳ ನೀರಾಗಿದ್ದು, ಕೇವಲ ಎರಡು ಬಾರಿ ಶುದ್ದೀಕರಿಸಿ ಕೊಡುವ ನೀರಾಗಿದ್ದು, ಆದರೆ ಇತ್ತೀಚೆಗೆ ಬಂದ ನೊರೆ ಈ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿತ್ತು. ಇದನ್ನು ಒಂದು ಬಾರಿಯು ಸಹ ಶುದ್ದೀಕರಿಸದೇ ನೇರವಾಗಿ ಸುತ್ತಮುತ್ತಲಿನ ಕೆರೆಗೆ ಹರಿಸಿದ್ದಾರೆ ಎಂದು ದೂರಿದರು. 

ಅಲ್ಲದೆ ಇದರ ಪರಿಣಾಮ ಸುತ್ತಮುತ್ತಲಿನ ಪ್ರದೇಶ ವಾಸನೆಯುಕ್ತ ಪ್ರದೇಶವಾಗಿದೆ. ಇಲ್ಲಿನ ಜನರು ದುರ್ವಾಸನೆಯಿಂದ ತುಂಬಾ ನೊಂದಿದ್ದಾರೆ. ಜೊತೆಗೆ ಪ್ರಾಣಿ ಪಕ್ಷಿಗಳು ಈ ವಿಷಯುಕ್ತ ನೀರನ್ನು ಕುಡಿಯುತ್ತಿರುವುದರಿಂದ ಜೀವರಾಶಿಗಳಿಗೆ ಮುಂದಿನ ದಿನಗಳಲ್ಲಿ ರೋಗ ರುಜನೆಗಳು ಬರುವ ಸಾಧ್ಯತೆ ಇದ್ದು, ಇತ್ತೀಚೆಗೆ ಕೆಲವು ಹಾವುಗಳು ಈ ನೀರಿನಲ್ಲಿ ಸತ್ತಿದ್ದು ಕಂಡುಬಂದಿದ್ದು, ಸುತ್ತಲಿನ ಗ್ರಾಮಸ್ಥರು ಕಂಗಾಲಾಗಿದ್ದಾರೆ.
    
ಜಿಲ್ಲಾಧಿಕಾರಿಗಳು ತಕ್ಷಣವೇ ತಮ್ಮ ಮುಖಾಂತರ ಸರ್ಕಾರಕ್ಕೆ ಈ ಕೆ.ಸಿ.ವ್ಯಾಲಿ ನೀರನ್ನು ಮೂರು ಬಾರಿ ಶುದ್ದೀಕರಿಸಿಕೊಡಬೇಕು ಇಲ್ಲವಾದಲ್ಲಿ ನಮಗೆ ಬದುಕಲು ಬೇರೆ ಸ್ಥಳಗಳನ್ನು ಆಯ್ಕೆ ಮಾಡಿಕೊಡಬೇಕೆಂದು ಒತ್ತಾಯಿಸಿದರು.
    
ಈ ಸಂದರ್ಭದಲ್ಲಿ ನರಸಾಪುರ ನಾರಾಯಣಸ್ವಾಮಿ, ಸೋಮಣ್ಣ, ನಂದೀಶಯ್ಯ, ರಾಮಸಂದ್ರ ರವಿಕುಮಾರ್, ಕಲ್ವಮಂಜಲಿ ನರಸಿಂಹ, ರೈತ ಸಂಘದ ಕಲ್ವಮಂಜಲಿ ರಾಮುಶಿವಣ್ಣ, ಜಿ. ನಾರಾಯಣಸ್ವಾಮಿ, ನಗರ ಸಂಚಾಲಕ ಅಬೀದ್ ಖಾನ್, ಫಿರ್ದೋಸ್, ಡಾ|| ಶಿವಣ್ಣ (ಎಸ್.ಎನ್.ಆರ್), ಹೂಹಳ್ಳಿ ಪ್ರಕಾಶ್,  ಕುರುಬರಪೇಟೆ ವೆಂಕಟೇಶ್, ಅಹಿಂದ ಮಂಜುನಾಥ್, ಚಿನ್ನಿ ಶ್ರೀನಿವಾಸ್, ಬಾಬು, ಮುನಿರಾಜು, ಮೂರ್ತಿ, ಪ್ರಕಾಶ್, ಸತೀಶ್ ಮತ್ತಿತರರು ಉಪಸ್ಥಿತರಿದ್ದರು

                                    
 

Read These Next