ದ್ರಾಕ್ಷಾರಸ ಉತ್ಸವಕ್ಕೆ ಕಾರವಾರ ಸಜ್ಜು 

Source: sonews | By Staff Correspondent | Published on 23rd November 2017, 11:00 PM | Coastal News | State News | Don't Miss |

ಕಾರವಾರ:  ನಾಳೆಯಿಂದ ಮೂರು ದಿನಗಳವರೆಗೆ ಜಿಲ್ಲಾಡಳಿತ, ಜಿಲ್ಲಾ ತೋಟಗಾರಿಕೆ ಇಲಾಖೆ, ದ್ರಾಕ್ಷಾರಸ ಮಂಡಳಿ ಹಾಗೂ ಕಾಳಿ ರಿವರ್ ಗಾರ್ಡನ್ ಸಹಯೋಗದಲ್ಲಿ ನಡೆಯುವ ಕಾರವಾರ ದ್ರಾಕ್ಷಾರಸ ಉತ್ಸವಕ್ಕೆ ಕಡಲನಗರಿ ಕಾರವಾರ ಸಜ್ಜುಗೊಂಡಿದೆ. 
ನಗರದ ಕೋಡಿಬಾಗ ಕಾಳಿ ರಿವರ್ ಗಾರ್ಡನ್‍ನಲ್ಲಿ ವೇದಿಕೆ ಮತ್ತು ಆಸನಗಳ ಜೋಡಣೆ ಭರದಿಂದ ಸಾಗುತ್ತಿದ್ದು ಜಿಲ್ಲಾಧಿಕಾರಿ ಎಸ್.ಎಸ್.ನಕು¯ ಅವರು ಗುರುವಾರ ಸಿದ್ಧತೆಗಳನ್ನು ಪರಿಶೀಲಿಸಿದರು. 
ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಮಾದ್ಯಮದವರೊಂದಿಗೆ ಮಾತನಾಡಿ ದ್ರಾಕ್ಷಾರಸ ಉತ್ಸವವನ್ನು ಪ್ರಥಮ ಬಾರಿಗೆ ಕಾರವಾರ ನಗರದಲ್ಲಿ ಆಯೋಜಿಸಲಾಗುತ್ತಿದ್ದು ನಗರದ ನಾಗರಿಕರಿಗೆ ಹೊಸ ಅನುಭವ ನೀಡಲಿದೆ. ಉತ್ಸವದಲ್ಲಿ ವೈವಿದ್ಯ  ವೈನರಿಗಳು ದೊರೆಯಲಿವೆ.
ಕೆಂಪು ದ್ರಾಕ್ಷಾರಸವು ಹೃದಯಕ್ಕೆ ಆರೋಗ್ಯಕರವಾಗಿದ್ದು ವಯಸ್ಕರರು ಸೇವಿಸಬಹುದಾಗಿದೆ ಎಂದು ಹೇಳಿದರು. 
ನ.24 ರಿಂದ 26 ರವರೆಗೆ ಮೂರುದಿನಗಳ ಕಾಲ ಕಾಳಿ ರಿವರ್ ಗಾರ್ಡನ್‍ನಲ್ಲಿ ದ್ರಾಕ್ಷಿ ಬೆಳೆಯುವ ರೈತರನ್ನು ಪ್ರೋತ್ಸಾಯಿಸುವ ನಿಟ್ಟಿನಲ್ಲಿ ವೈನ್ ಮೇಳ ಆಯೋಜಿಸಲಾಗಿದೆ ಎಂದು ಕರ್ನಾಟಕ ದ್ರಾಕ್ಷಾರಸ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು ಹೇಳಿದರು. 
ಗುರುವಾರ ಸದಾಶಿವಗಡ ಯಾತ್ರಿ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ವೈನ ಮೇಳದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದಿಂದ ಸುಮಾರು 8 ರಿಂದ 10 ವೈನರಿಗಳು ಭಾಗವಹಿಸಿ ಸುಮಾರು 150ಕ್ಕೂ ಹೆಚ್ಚು ಬ್ರಾಂಡಗಳನ್ನು ಪ್ರದರ್ಶಿಸಲಾಗುವದು ಹಾಗೂ ಹಳೆಯ ವೈನ ಪ್ರದೇಶಗಳಾದ ಯುರೋಪ ಖಂಡ ಮತ್ತು ಹೊಸ ವೈನ ಪ್ರದೇಶಗಳಾದ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಚಿಲ್ಲಿ ಮತ್ತು ಅಮೇರಿಕಾ ಹಾಗೂ ಇತರೆ ದೇಶಗಳ ವೈನ್ ಪ್ರದರ್ಶನ ಮತ್ತು ಮಾರಾಟ ಮಾಡಲಾಗುವುದು ಎಂದು ಮಾಹಿತಿ ನೀಡಿದರು. 
ಕರ್ನಾಟಕದಲ್ಲಿ ವೈನ್ ಉತ್ಪಾದನೆಗೆ ಸೂಕ್ತವಾದ ದ್ರಾಕ್ಷಿ ತಳಿಗಳನ್ನು ಬೆಳೆಯಲು ಹಾಗೂ ರಾಜ್ಯದ ವೈನ್ ತಯಾರಿಕರಿಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆ ಪರಿಚಯಿಸಲು ಮತ್ತು ರಾಜ್ಯದಲ್ಲಿ ಆರೋಗ್ಯಕರ ವೈನ್ ಬಳಕೆ ಹೆಚ್ಚಿಸಲು ಅನುವು ಮಾಡಿಕೊಡುವ ಸಲುವಾಗಿ ಕಾರವಾರ ದ್ರಾಕ್ಷಾರಸ ಉತ್ಸವ-17 ಆಯೋಜಿಸಲಾಗಿದ್ದು ಎಲ್ಲಾ ವೈನ್ ಬ್ರಾಂಡ ಮಾರಾಟಗಳ ಮೇಲೆ ಶೇ. 10 ರಷ್ಟು ರಿಯಾತಿಯನ್ನು ವೈನ್ ಮೇಳದಲ್ಲಿ ನೀಡಲಾಗುತ್ತಿದೆ ಮತ್ತು ವೈನ ಬಳಕೆಯನ್ನು ಉತ್ತೇಜಿಸುವ ದಿಸೆಯಲ್ಲಿ ವೈನ್ ದ್ರಾಕ್ಷಿ ಬೆಳೆಯುವ ಹಾಗೂ ವೈನ್ ತಯಾರಿಕೆ ಬಗ್ಗೆ ತರಬೇತಿ ಮತ್ತು ವೈನ್ ತಯಾರಿಕರ ಹಾಗೂ ಸಾರ್ವಜನಿಕರ ನಡುವೆ ಪರಸ್ಪರ ವಿಚಾರ ವಿನಿಮಯ ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ವೈನ್ ಸ್ವಾದಿಸುವಾಗ ಬಳಸುವ ಸೂಕ್ತ ಆಹಾರಗಳ, ತಿನಿಸುಗಳ ಮಳಿಗೆಗಳು ಪಾಲ್ಗೊಳ್ಳಲಿದ್ದು ಸಂಗೀತ ಹಾಗೂ ಮನರಂಜನೆಯ ಕಾರ್ಯಕ್ರಮಗಳನ್ನು ನ.24 ರಂದು ಶಿವಮೊಗ್ಗದ ಸಮನ್ವಯ ತಂಡದಿಂದ, 25 ರಂದು ಜಾಯ್ಸ ತಂಡ ಮತ್ತು 26 ರಂದು ಝೇಹನ್ ತಂಡದಿಂದ ಆಯೋಜಿಸಲಾಗುತ್ತಿದೆ ಎಂದು ಹೇಳಿದರು. 
                       
 ನ.24 ರಿಂದ ವೈನ ಮೇಳ  
ಕಾರವಾರ: ಜಿಲ್ಲಾಡಳಿತ, ಜಿಲ್ಲಾ ತೋಟಗಾರಿಕಾ ಇಲಾS,É ಕರ್ನಾಟಕ ದ್ರಾಕ್ಷಾರಸ ಮಂಡಳಿ ಹಾಗೂ ಕಾಳಿ ರಿವರ್ ಗಾರ್ಡನ್ ಕಾರವಾರ ಇವರ ಸಂಯುಕ್ತಾಶ್ರಯದಲ್ಲಿ  ನ 24 ರಿಂದ 26 ರವರೆಗೆ ಕೊಡಿಬಾಗ ಕಾಳಿ ರಿವರ್ ಗಾರ್ಡನನಲ್ಲಿ ವೈನ ಮೇಳವನ್ನು ಆಯೋಜಿಸಲಾಗಿದೆ. 

ಬೃಹತ್ ಮತ್ತು ಮದ್ಯಮ ಕೈಗಾರಿಕೆಗಳ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ.ವಿ.ದೇಶಪಾಂಡೆ ಅವರು ಮೇಳವನ್ನು ಉದ್ಘಾಟಿಸುವರು. ಶಾಸಕ ಸತೀಶ ಶೈಲ್ ಅಧ್ಯಕ್ಷತೆ ವಹಿಸುವರು. ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ದ್ರಾಕ್ಷಾರಸ ಮಳಿಗೆಗಳನ್ನು ಉದ್ಘಾಟಿಸುವರು. 
  
ಡಿಸೆಂಬರ 16 ರಂದು ವಿಜಯ ದಿವಸ ಆಚರಣೆ 
ಕಾರವಾರ: ಜಿಲ್ಲಾಡಳಿತ ಮತ್ತು ಜಿಲ್ಲಾ ಸೈನಿಕ ಮತ್ತು ಪುನರ್ವಸತಿ ಇಲಾಖೆ ಸಹಯೋಗದಲ್ಲಿ ಡಿಸೆಂಬರ 16 ರಂದು ರವೀಂದ್ರನಾಥ ಟ್ಯಾಗೂರ ಕಡಲ ತೀರದ ನೌಕಾ ಯುದ್ಧ ಸ್ಮಾರಕದ ಆವರಣದಲ್ಲಿ ವಿಜಯ ದಿವಸ ಆಚರಿಸಲಾಗುವುದು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮುಂಜಾನೆ 10 ಗಂಟೆಗೆ 1971 ರ ಭಾರತ ಮತ್ತು ಪಾಕಿಸ್ತಾನದ ಯುದ್ಧದಲ್ಲಿ ವೀರ ಮರಣ ಹೊಂದಿದ ಹಾಗೂ ಗಾಯಗೊಂಡ ಯೋಧರ ನೆನಪಿನ ಗೌರವಾರ್ತವಾಗಿ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ, ಹಾಗೂ ಅದೇ ದಿನ ಸಶಸ್ತ್ರ ಪಡೆಯ 2017ರ ಸಾಂಕೇತಿಕ ಧ್ವಜ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಾರ್ಯಲಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಹಾಗೂ ದೂರವಾಣಿ ಸಂಖ್ಯೆ 08382-226538 ನ್ನು ಸಂಪರ್ಕಿಸಬಹುದಾಗಿದೆ. ವಿಜಯ ದಿವಸದಂದು  ಜಿಲ್ಲೆಯ ನಾಗರಿಕರು, ಮಾಜಿ ಸೈನಿಕರು ಹಾಗೂ ಅವರ ಅವಲಂಭಿತರು ಮತ್ತು ಯುದ್ಧದ ಕಾರ್ಯಚರಣೆಯಲ್ಲಿ ಮಡಿದ ಯೋಧರ ಅವಲಂಭಿತರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸುವಂತೆ ಜಿಲ್ಲಾ ಸೈನಿಕ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರಾದ ಕಮಾಂಡರ ಇಂದುಪ್ರಭಾ ವ್ಹಿ ಕೋರಿದ್ದಾರೆ.
ಹಿಂಗಾರು/ಬೇಸಿಗೆ ಬೆಳೆಗಳಿಗೆ ಫಸಲ ವಿಮಾ ಸೌಲಭ್ಯ ಮುಂದುವರಿಕೆ
ಕಾರವಾರ : ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯ ಪ್ರಸ್ತಕ ಸಾಲೀನ ಹಿಂಗಾರು/ಬೇಸಿಗೆ ಹಂಗಾಮಿನಲ್ಲಿಯ ನೀರಾವರಿ ಭತ್ತ, ಮಳೆಯಾಶ್ರಿತ ಶೇಂಗಾ, ಹೆಸರು, ಹುರುಳಿ, ಬೆಳೆಗಳಿಗೆ ಮಾತ್ರ ವಿಮಾ ಸೌಲಭ್ಯ ಮುಂದುವರೆಸಲಾಗಿದೆ. 

 ಹಿಂಗಾರು ಹಂಗಾಮು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿಯಲ್ಲಿ ಅಧಿಸೂಚಿತ ಆಯಾ ತಾಲೂಕಿನ ಹೋಬಳಿ ಬೆಳೆಗಳ ಪಟ್ಟಿ ಹೀಗಿದೆ. ಅಂಕೋಲಾ ತಾಲೂಕಿನ ಅಂಕೋಲಾ, ಬೆಲೆಕೇರಿ, ಬಳಲೆ ಮತ್ತು ಬಾಸಗೋಡ ಹಾಗೂ ಹೊನ್ನಾವರ ತಾಲೂಕಿನ ಹೊನ್ನಾವರ ಮತ್ತು ಮಂಕಿ ಹೋಬಳಿ, ಭಟ್ಕಳ ತಾಲೂಕಿನ ಮಾವಳ್ಳಿ ಹೋಬಳಿ, ಕುಮಟಾ ತಾಲೂಕಿನ ಕುಮಟಾ, ಕೂಜಳ್ಳಿ ಮತ್ತು ಗೋಕರ್ಣ ಹೋಬಳಿಗಳ ವ್ಯಾಪ್ತಿಯಲ್ಲಿ ಬೆಳೆದ ಮಳೆಯಾಶ್ರಿತ ನೆಲಗಡಲೆ/ಶೇಂಗಾ ಬೆಳೆಗೆ ವಿಮಾ ಯೋಜನೆ ನೀಡಲಾಗುವುದು. ಹೊನ್ನಾವರ ತಾಲೂಕಿನ ಹೊನ್ನಾವರ ಮತ್ತು ಮಂಕಿ ಹೊಬಳಿ ಹಾಗೂ ಭಟ್ಕಳ ತಾಲೂಕಿನ ಕೂಜಳಿ ಮತ್ತು ಮಿರ್ಜಾನ ವ್ಯಾಪ್ತಿಯಲ್ಲಿ ಬೆಳೆದ ನೀರಾವರಿ ಆಶ್ರಿತ ಭತ್ತಕ್ಕೆ, ಹಳಿಯಾಳ ತಾಲೂಕಿನ ಮುರ್ಕವಾಡ ಹೊಬಳಿ ವ್ಯಾಪ್ತಿಯಲ್ಲಿ ಬೆಳೆದ ಮಳೆಯಾಶ್ರಿತ ಹೆಸರು ಮತ್ತು ಹುರುಳಿ ಬೆಳೆ. ಮಳೆಯಾಶ್ರಿತ ಶೇಂಗಾ ಬೆಳೆಗೆ ಪ್ರತಿ ಹೆಕ್ಟೇರ್‍ಗೆ ಸಾಮಾನ್ಯ ವಿಮಾ ಮೊತ್ತ ರೂ 45 sಸಾವಿರದಂತೆ ಇದ್ದು,  ರೈತರು ಪಾವತಿಸಬೇಕಾದ  ವಿಮಾ ಕಂತು ರೂ. 675 ಆಗಿರುತ್ತದೆ. ನೀರಾವರಿ ಆಶ್ರಿತ ಭತ್ತಕ್ಕೆ ಪ್ರತಿ ಹೆಕ್ಟೇರ್‍ಗೆ 85 ಸಾವಿರದಂತಿದ್ದು ರೈತರು ರೂ 1275 ಪಾವತಿಸಬೇಕು. ಮಳೆಯಾಶ್ರಿತ ಹುರುಳಿ ಬೆಳೆ ಪ್ರತಿ ಹೆಕ್ಟೇರಗೆ ವಿಮಾ ಮೊತ್ತ 17 ಸಾವಿರದಂತಿದ್ದು ವಿಮಾ ಕಂತು 255 ಪಾವತಿಸವತಿಸಬೇಕು. ಮಳೆಯಾಶ್ರಿತ ಹೆಸರು ಬೆಳೆಗೆ ವಿಮಾ ಮೊತ್ತ ರೂ.28 ಸಾವಿರದಂತಿದ್ದು ವಿಮಾ ಕಂತು ರೂ.420 ಆಗಿರುತ್ತದೆ. ಹಿಂಗಾರು ಹಂಗಾಮು ಬೆಳೆ ಸಾಲ ಪಡೆಯದ ಮತ್ತು ಪಡೆಯುವ  ರೈತರು ಬ್ಯಾಂಕುಗಳಿಗೆ ಘೋಷಣೆ ಸಲ್ಲಿಸಲು ಡಿಸೆಂಬರ 30 ಕೊನೆಯ ದಿನವಾಗಿರುತ್ತದೆ.
ಬೇಸಿಗೆ ಹಂಗಾಮು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿಯಲ್ಲಿ ಅಧಿಸೂಚಿತ ಆಯಾ ತಾಲೂಕಿನ ಗ್ರಾಮ ಪಂಚಾಯತ್ ಮಟ್ಟದ ಬೆಳೆಗಳ ಪಟ್ಟಿ ಹೀಗಿದೆ,  ಹೊನ್ನಾವರ ತಾಲೂಕಿನ ನಗರಬಸ್ತಿಕೇರಿ, ಕುದ್ರಗಿ, ಮಾವಿನ ಕುರ್ವೆ ಮತ್ತು ಜಲವಳ್ಳಿ, ಹೆರಂಗಡಿ. ಸಿದ್ದಾಪೂರ ತಾಲೂಕಿನ ಹಲಗೇರಿ ಮಾತ್ರ. ಮುಂಡಗೋಡ ತಾಲೂಕಿನ ಹುನಗುಂದ, ಇಂದೂರ ಮತ್ತು ಚಿಗಳ್ಳಿ. ಜೊಯಿಡಾ ತಾಲೂಕಿನ ಕ್ಯಾಸಲರಾಕ್ ವ್ಯಾಪ್ತಿಯಲ್ಲಿ ಬೆಳೆದ  ನೀರಾವರಿ ಭತ್ತದ ಬೆಳೆಗೆ ಪ್ರತಿ ಹೆಕ್ಟೇರ್‍ಗೆ ಸಾಮಾನ್ಯ ವಿಮಾ ಮೊತ್ತ ರೂ 85 ಸಾವಿರದಂತಿದ್ದು ರೈತರು ಪಾವತಿಸಬೇಕಾದ  ವಿಮಾ ಕಂತು ರೂ. 1275 ಆಗಿರುತ್ತದೆ. 
 ಬೇಸಿಗೆ ಹಂಗಾಮು ಬೆಳೆ ಸಾಲ ಪಡೆಯದ ಮತ್ತು ಪಡೆಯುವ ರೈತರು ಬ್ಯಾಂಕುಗಳಿಗೆ ಘೋಷಣೆ ಸಲ್ಲಿಸಲು 28 ಫೆಬ್ರುವರಿ 2018 ಕೊನೆಯ ದಿನವಾಗಿರುತ್ತದೆ ಎಂದು ಕಾರವಾರ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
                           
                        ನ.24 ರಿಂದ ಸರ್ವಿಸ ಕ್ಯಾಂಪ್ 
ಕಾರವಾರ: ಜಿಲ್ಲೆಯಲ್ಲಿ  ಪ್ರಸ್ತುತ ಜಿ.ಪಿ.ಎಸ್. ಸಾದನಗಳನ್ನು ಅಳವಡಿಸಿಕೊಂಡು ಮರಳು ಸಾಗಿಸುತ್ತಿರುವ ಎಲ್ಲಾ  ವಾಹನಗಳ ಮಾಲೀಕರು ತಮ್ಮ ವಾಹನ ಹಾಗೂ ಜಿ.ಪಿ.ಎಸ್ ಸಾದನಗಳೊಂದಿಗೆ T4U ಸಂಸ್ಥೆಯವರು ನವ್ಹಂಬರ 24 ರಿಂದ ಡಿಸೆಂಬರ 4 ರವರೆಗೆ ಆಯೋಜಿಸಿರುವ “ ಸರ್ವಿಸ್ ಕ್ಯಾಂಪ್ “ ಗೆ ಕಡ್ಡಾಯವಾಗಿ ಹಾಜರಾಗುವಂತೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ನ.24 ರಿಂದ 26 ರವರೆಗೆ ಹೊನ್ನಾವರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ, 27 ರಿಂದ 29 ರವರೆಗೆ ಕುಮಟಾ ಮಣಕಿ ಮೈದಾನ ಮತ್ತು ಅಂಕೋಲಾ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ,ನ. 30 ರಿಂದ ಡಿಸೆಂಬರ 2 ರವರೆಗೆ ಕಾರವಾರ ಆರ್.ಟಿ.ಒ ಕಚೇರಿ ಆವರಣದಲ್ಲಿ ಹಾಗೂ ಡಿಸೆಂಬರ 3 ಮತ್ತು 4 ರಂದು ಯಲ್ಲಾಪುರ, ಶಿರಸಿ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸರ್ವಿಸ ಕ್ಯಾಂಪ್ ನಡೆಸಲಾಗುವದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9731076554 ಸಂಪರ್ಕಿಸಲು ಕೋರಲಾಗಿದೆ.   


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...