ಹುಬ್ಬಳ್ಳಿಯಲ್ಲಿ ಮತ್ತೆ ಹೆಚ್ಚಿದ ನಾಯಿಯ ದಾಳಿ

Source: so english | By Arshad Koppa | Published on 19th August 2017, 8:28 AM | State News | Guest Editorial |

ಹುಬ್ಬಳ್ಳಿ- ಧಾರವಾಡ  ಮಹಾನಗರ ಪಾಲಿಕೆ ವಾರ್ಡ್ ನಂಬರ್ ೬೬ ರ ವ್ಯಾಪ್ತಿಯಲ್ಲಿ ಬರುವ ಜವಳಿ ಪ್ಲಾಟ್ ನಲ್ಲಿ ಹುಚ್ಚು ನಾಯಿಯೊಂದು ೬ ಜನ ಮಕ್ಕಳು ಸೇರಿದಂತೆ ೧೦ ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದೆ . ಮಕ್ಕಳು  ಮನೆಯ ಮುಂದೆ ಆಟ ಆಡುತ್ತಿದ್ದ ಸಂದರ್ಭದಲ್ಲಿ ಹುಚ್ಚು ನಾಯಿ ಮಕ್ಕಳ ಮೇಲೆ ಏಕಾಏಕಿ ದಾಳಿ ಮಾಡಿದೆ . ಇದನ್ನು ಕಂಡ ಅಲ್ಲಿನ ಜನ ನಾಯಿ ದಾಳಿಯನ್ನು ತಡೆಯಲು ಬಂದಿದ್ದಾರೆ . ಆಗ ಹುಚ್ಚು ನಾಯಿ ಅವರ ಮೇಲೆಯೂ ದಾಳಿ ಮಾಡಿದೆ ಹೀಗಾಗಿ ೬ ಜನ ಮಕ್ಕಳು ಸೇರಿದಂತೆ ೧೦ ಕ್ಕೂ ಹೆಚ್ಚು ಜನರಿಗೆ ಹುಚ್ಚು ನಾಯಿ ಕಡಿದಿದೆ . ಪರಿಣಾಮ ಗಾಯಾಳುಗಳನ್ನು ನಗರದ ಚಿಟಗುಬ್ನಿ ಆಸ್ಪತ್ರೆ ಮತ್ತು ಗಂಭೀರವಾಗಿ ಗಾಯಗೊಂಡವರನ್ನು ಕಿಮ್ಸ್ ದಾಖಲು ಮಾಡಲಾಗಿದೆ . ಇನ್ನು ನಗರದಲ್ಲಿ ಪದೆ ಪದೆ ನಾಯಿ ಹಾವಳಿ ಹೆಚ್ಚಾಗಿದ್ದು ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ‘ಸೇ ನೋ ಚೀನಾ ಪ್ರಾಡಕ್ಟ್ ಆಂಧೋಲನ’ 
ಹುಬ್ಬಳ್ಳಿ ಆ.17- ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ‘ಸೇ ನೋ ಚೀನಾ ಪ್ರಾಡಕ್ಟ್ ಆಂಧೋಲನವನ್ನು ಆ.23 ಮತ್ತು 24 ರಂದು ಸಂಜೆ 5 ಗಂಟೆಗೆ ನಗರದ ಇಂದಿರಾ ಗ್ಲಾಸ್‍ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕ ಮತ್ತು ಹುಬ್ಬಳ್ಳಿ ನಿವಾಸಿ ಶ್ರೀನಿವಾಸ ಮಟ್ಟಿ ತಿಳಿಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಬ್ಬಗಳು ಹತ್ತಿರ ಬರುತ್ತಿರುವುದರಿಂದ ಮಾರುಕಟ್ಟೆಗೆ ಚೀನಾ ವಸ್ತುಗಳು ಲಗ್ಗೆಯಿಡುತ್ತವೆ. ಮಾರುಕಟ್ಟೆಗೆ ಆಗಮಿಸುವ ಜನರಿಗೆ ಚೀನಾ ವಸ್ತುಗಳನ್ನು ಕೊಳ್ಳದಿರುವಂತೆ ತಿಳುವಳಿಕೆ ನೀಡಲಾಗುವುದು ಎಂದರು.
ನಗರದ ಪ್ರತಿಷ್ಠಿತ ಮಾರುಕಟ್ಟೆ ಪ್ರದೇಶಗಳಾದ ಶಾ ಬಜಾರ, ದುರ್ಗದಬೈಲ್, ಮಾಲ್‍ಗಳಲ್ಲಿ ಹೋಗಿ ಜನರಿಗೆ ತಿಳುವಳಿಕೆ ನೀಡಲಾಗುತ್ತದೆ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ಪ್ರಚಾರ ಮತ್ತು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ 30 ರಿಂದ 40 ಜನರು ನನ್ನ ಜೊತೆ ಕೈಗೂಡಿಸಿದ್ದಾರೆ ಎಂದರು.
ಈ ಒಂದು ಆಂಧೋಲನಕ್ಕೆ ಬೆಂಬಲಿಸುವವರು ಅಂದು ಸಂಜೆ 5 ಗಂಟೆಗೆ ನಗರದ ಇಂದಿರಾ ಗ್ಲಾಸ್ ಹೌಸ್‍ಗೆ ಬರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

Read These Next

ಜಲಶಕ್ತಿ ಅಭಿಯಾನವನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಲಿ -ಜೆ.ಮಂಜುನಾಥ್

ಇಂದು ಕೋಲಾರ ತಾಲ್ಲೂಕಿನ ಮುದುವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ...

ಜಿಲ್ಲಾಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಅಶೋಕ್  ಖಜಾಂಚಿಯಾಗಿ ವಿಜಯ್, ರಾಜ್ಯಪರಿಷತ್‍ಗೆ ಡಿ.ಸುರೇಶ್‍ಬಾಬು ಆಯ್ಕೆ

ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಅಶೋಕ್ ಹಾಗೂ ಖಜಾಂಚಿಯಾಗಿ ಕೆ.ವಿಜಯ್, ರಾಜ್ಯಪರಿಷತ್ ಸದಸ್ಯರಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...