ಮಾರ್ಚ್ 21- ವರೆಗೆ ಜಿಲ್ಲಾಧಿಕಾರಿ ಸಿಂಧೂರಿ ಮುಂದುವರಿಕೆ(ಜಿಲ್ಲಾ ಸಂಕ್ಷಿಪ್ತ ಸುದ್ದಿಗಳು)

Source: sonews | By Staff Correspondent | Published on 15th March 2018, 12:33 AM | State News | Don't Miss |

ಹಾಸನ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಹಿನ್ನೆಲೆ ತಡೆ ಮುಂದುವರಿಸಿದ ಸಿಎಟಿ ಮಾ- 21 ವರೆಗೆ ಆದೇಶ ಕಾಯ್ದಿರಿಸಿದ ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ ಅವಧಿಗೂ ಮುನ್ನ ವರ್ಗಾವಣೆ ಆದೇಶ ಪ್ರಶ್ನಿಸಿ ಮಾ 8 ರಂದು ಸಿಎಟಿ ಮೊರೆ ಹೋಗಿದ್ದ ರೋಹಿಣಿ ಇಂದು ವಿಚಾರಣೆ ಕಾಯ್ದಿರಿಸಿದ್ದ ಕೆಎಟಿ, ಮಾರ್ಚ್ 21- ವರೆಗೆ ಜಿಲ್ಲಾಧಿಕಾರಿ ಸಿಂಧೂರಿ ಮುಂದುವರಿಕೆ.

ಮಾ.15 ರಂದುಬೃಹತ್ ಕಂದಾಯ ಅದಾಲತ್

ಹಾಸನ: ಪಹಣಿಯಲ್ಲಿರುವ ವಿವಿಧ ರೀತಿಯ ದೋಷಗಳಿಂದಾಗಿ ರೈತರಿಗೆ 11- ಸ್ಕೆಚ್, ವ್ಯವಸಾಯಗಾರರ ದೃಢೀಕರಣ ಪತ್ರ, ಹಿಡುವಳಿ ಪತ್ರ, ಬ್ಯಾಂಕ್ ಸಾಲ ಪಡೆಯಲು ಹಾಗೂ ಖಾತೆ ಬದಲಾವಣೆ ಮಾಡಿಕೊಳ್ಳಲು ತೊಂದರೆಯಾಗುತ್ತಿದ್ದು ಸಾರ್ವಜನಿಕರ ಕೋರಿಕೆ ಮೇರೆಗೆ ಹಾಸನ ತಾಲ್ಲೂಕು ಶಾಂತಿಗ್ರಾಮ ಹೋಬಳಿಗೆ ಸಂಬಂಧಪಟ್ಟಂತೆ ನಾಡಕಛೇರಿ ಆವರಣದಲ್ಲಿ ಮಾ.15 ರಂದು ಬೆಳಿಗ್ಗೆ 11 ಗಂಟೆಗೆಬೃಹತ್ ಕಂದಾಯ ಅದಾಲತ್ಅನ್ನು ಏರ್ಪಡಿಸಲಾಗಿದೆ.

ರೈತಬಾಂಧವರು ಮುಂಚಿತವಾಗಿಯೇ ಗ್ರಾಮಲೆಕ್ಕಾಧಿಕಾರಿಗಳ ಬಳಿ ಅರ್ಜಿ ಸಲ್ಲಿಸಲು ತಿಳಿಸಿದೆ ಹಾಗೂ ಕಂದಾಯ ಅದಾಲತ್ನಲ್ಲಿ ಹಾಜರಾಗಿ ಸದಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹಾಸನ ಉಪವಿಭಾಗಾಧಿಕಾರಿ ಡಾ:ಹೆಚ್.ಎಲ್. ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೈಕ್ ಗೆ ಕಾರು ಡಿಕ್ಕಿ; ಬೈಕ್ ಸವಾರ ಮೃತ

ಹಾಸನ - ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಚನ್ನರಾಯಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.ಚಾಮಡಿಹಳ್ಳಿಯ ನಿವಾಸಿ ಮಧು ಮೃತ ಬೈಕ್ ಸವಾರ ಬೈಕ್ ನಲ್ಲಿ ಹೋಗುವ ಸಮಯದಲ್ಲಿ ಹಿಂಬದಿಯಿಂದ ಕಾರ್ ಡಿಕ್ಕಿ ಹೊಡೆದು ತೀವ್ರ ವಾಗಿ ಗಾಯಗೊಂಡರು.ತಕ್ಷಣ ಚಿಕಿತ್ಸಗೆ ಹಾಸನ ಸಕಾ೯ರಿ ಆಸ್ಪತ್ರೆಗೆ ಸೇರಿಸಿದರು ಚಿಕಿತ್ಸೆ ಫಲಕಾರಿಯಾಗದೆ ಸವಾನ್ನಪ್ಪಿದ್ದಾರೆ. ಚನ್ನರಾಯಪಟ್ಟಣ ಸಂಚಾರಿ ಪೋಲೀಸರು ಪ್ರಕರಣ ದಾಖಲಿಸಿಕೂಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ

ಹಾಸನ: ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ, ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಹೆಮ್ಮೆಯನ್ನು ಎತ್ತಿ ಹಿಡಿಯೋಣ ವಿವೇಚನೆಯಿಂದ ಹಾಕಿದ ಮತ ದೇಶದ ಜನರಿಗೆ ಹಿತ, ಎಂಬ ಘೋಷಣೆಯೊಂದಿಗೆ ಪ್ರತಿಯೊಬ್ಬರು ಮತ ಚಲಾಯಿಸೋಣ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ:ಕೆ.ಎಂ ಜಾನಕಿ ಅವರು ಹೇಳಿದರು.

ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ(ಸ್ವಾಯತ್ತ) ಕಾಲೇಜಿನ ಆವರಣದಲ್ಲಿ ಸ್ವೀಪ್ ಸಮಿತಿ ವತಿಯಿಂದ ಮತದಾನದ ಕುರಿತು ಅರಿವು ಮೂಡಿಸುವ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

 

18 ವರ್ಷ ಮೇಲ್ಪಟ್ಟ ಪ್ರತಿ ಮತದಾರರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡು ಸಮಾನತೆಯ ಸಾಧನ ನಿಮ್ಮ ಮತದಾನ ಹೆಮ್ಮೆಯಿಂದ ಚಲಾಯಿಸಿ ಎಂದರಲ್ಲದೆ ಮತದಾನಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿಗಾಗಿ ಟೋಲ್ ಫ್ರೀ ನಂ. 1950ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ತಮ್ಮ ನೆರೆ-ಹೊರೆಯವರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಮೂಲಕ ಮತದಾರರು ಮತಗಟ್ಟೆಗಳಿಗೆ ಬಂದು ಮತ ಚಲಾಯಿಸುವಂತೆ ಪ್ರೇರೆಪಿಸಲು ಸಲಹೆ ನೀಡಿದರು.

ಆನ್ಲೈನ್ ಹೆಸರು ನೋಂದಣಿ/ತಿದ್ದುಪಡಿ ಮತ್ತು ಹೆಸರು ತೆಗೆದು ಹಾಕಲು ಅರ್ಜಿ ಸಲ್ಲಿಸಬಹುದು,  ವೆಬ್ಸೈಟ್ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿರುತ್ತದೆ ಹಾಗೂ ಏಂಇಎಲ್ಅ ಎಂದು ಟೈಪ್ ಮಾಡಿ ಸ್ಪೇಸ್ ನೀಡಿ ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು 9731979899 ಸಂಖ್ಯೆಗೆ ಎಸ್ಎಂ.ಎಸ್ ಕಳುಹಿಸಿ ಮತಗಟ್ಟೆಯ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ:ಡಿ.ಜಿ.ಕೃಷ್ಣೇಗೌಡ ಕಾಲೇಜಿನ ಎಲ್ಲಾ ಅಧ್ಯಾಪಕವೃಂದ, ಸಿಬ್ಬಂದಿ ವರ್ಗ , ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

 

 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...