ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಜಿಲ್ಲಾ ಮಟ್ಟದ ಪ್ರಮಾಣ ಪತ್ರ ಪುರಸ್ಕಾರ ಸಮಾರಂಭ

Source: sonews | By Staff Correspondent | Published on 31st January 2019, 10:52 PM | State News | Don't Miss |

ಕೋಲಾರ: ಶಿಸ್ತುಬದ್ದ ಜೀವನ ಯಾವುದೆ ವ್ಯಕ್ತಿಯ ಯಶಸ್ಸಿಗೆ ಕಾರಣವಾಗಿರುತ್ತದೆ ಇದಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಮುಖ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪುಷ್ಪಲತ ಅವರು ಬಣ್ಣಿಸಿದರು. 

ನಗರ ಸಮೀಪದ ಮಹೇಶ್ ಪಿ.ಯು.ಕಾಲೇಜಿನಲ್ಲಿ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ, ಜಿಲ್ಲಾ ಮಟ್ಟದ ಪ್ರಮಾಣ ಪತ್ರ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತಾನಾಡುತ್ತಿದ್ದರು.
        
ವಿದ್ಯಾರ್ಥಿ ಜೀವನದಲ್ಲಿ ಗುರು ಮತ್ತು ಗುರಿ ಮುಖ್ಯವಾಗಿದೆ ಎಂದು ಒತ್ತಿ ಹೇಳಿದ ಅವರು ಸಂಸ್ಥೆಯಲ್ಲಿ ಉತ್ತಮ ತರಬೇತಿ ಪಡೆಯುವುದರೊಂದಿಗೆ ಉನ್ನತ ಶಿಕ್ಷಣ ಹಾಗೂ ಉದ್ಯೋಗವನ್ನು ಪಡೆಯುವಂತಾಗಬೇಕೆಂದು ಕಿವಿ ಮಾತು ಹೇಳಿದರು.
        
ಹಾಗೆಯೆ ಸೇವಾ ಮನೋಭಾವ, ದೇಶಭಕ್ತಿ, ಮಾನವೀಯ ಮೌಲ್ಯಗಳು, ಸಮಯ ಪ್ರಜ್ಞೆ , ಸಮಸ್ಯೆಗಳನ್ನು ಎದುರಿಸುವ ಹಾಗೂ ತುರ್ತು ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಸ್ಪಂದಿಸುವ ಕಲೆ ಹಾಗೂ ಮೌಲ್ಯಗಳನ್ನು ಈ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಪಡೆಯಬಹುದಾಗಿದೆ ಎಂದು ವಿವರಿಸಿದರು.
        
ಸಂಸ್ಥೆಯ ತರಬೇತಿ ಚಟುವಟಿಕೆಗಳಿಗೆ ಈಗಾಗಲೇ ಪ್ರಸ್ತಾವನೆ ಮಾಡಿರುವಂತೆ ಅಗತ್ಯವಿರುವ ಭೂಮಿಯನ್ನು ಮಂಜೂರಾತಿ ಮಾಡುವ ಪ್ರಕ್ರಿಯೆ ಜಿಲ್ಲಾಡಳಿತದ ವತಿಯಿಂದ ನಡೆಯುತ್ತಿದೆ ಎಂದು ತಿಳಿಸಿದರು.
        
ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತ ಹಾಗೂ ಹಿರಿಯ ವಕೀಲರು ಆಗಿರುವ ಕೆ.ವಿ.ಶಂಕರಪ್ಪ ಅವರು ಅಧ್ಯಕ್ಷೀಯ ಭಾಷಣದಲ್ಲಿ, ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್‍ನಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ಮೂಲಕ ಹಂತ ಹಂತವಾಗಿ ತರಬೇತಿ ಪಡೆಯುವುದರೊಂದಿಗೆ ಪದಕಗಳನ್ನೂ ಗಳಿಸಿಕೊಳ್ಳಬೇಕೆಂದು ಹೇಳಿದರು.
        
ಸಮವಸ್ತ್ರಕ್ಕೆ ಗೌವರ ಉಳಿಸಿಕೊಂಡು ಹೊಗುವ ರೀತಿಯಲ್ಲಿ ಬದುಕುವಂತಾಗಬೇಕೆಂದು ಹೇಳಿದ ಅವರು, ಹುಟ್ಟು ಮತ್ತು ಸಾವಿನ ನಡುವಿನ ಅಂತರದಲ್ಲಿ ಸಮಾಜದ ಋಣವನ್ನು ತೀರಿಸುವಂತಗಬೇಕೆಂದು, ಪ್ರಾಮಾಣಿಕ ಮತ್ತು ಶಿಸ್ತಿನ ಜೀವನ ಅಳವಡಿಸಿಕೊಳ್ಳಬೇಕೆಂದು, ಈ ಮೂಲಕ ಸಮಗ್ರ ವ್ಯಕ್ತಿತ್ವದ ವ್ಯಕ್ತಿಗಳಾಗಿ ಬದುಕಬೇಕೆಂದು ತಿಳಿಸಿದರು.
        
ಸ್ಕೌಟ್ಸ್ ಮತ್ತು ಗೈಡ್ಸ್‍ನ ಬೆಳವಣಿಗೆಗೆ ಶಾಲಾ-ಕಾಲೇಜುಗಳ ಶಿಕ್ಷಕ ಸಮುದಾಯದ ಸಹಕಾರವೇ ಸಂಸ್ಥೆಯು ಉನ್ನತ ಮಟ್ಟದಲ್ಲಿ ಬೆಳೆಯಲು ಕಾರಾಣವಾಗಿದ್ದು, ಇದು ಮತ್ತಷ್ಟು ಹೆಚ್ಚಾಗುವ ಮೂಲಕ ಇಡೀ ರಾಜ್ಯದಲ್ಲಿ ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್‍ನ ಘಟಕಗಳ ಪ್ರಾರಂಭಕ್ಕೆ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಯವರು ಮುಂದಾಗಬೇಕೆಂದು ಮನವಿ ಮಾಡಿದರು.
        
ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎಂ.ವಿ. ಜನಾರ್ದನ್ ಅವರು ಪ್ರಾಸ್ತಾವಿಕವಾಗಿ ಮಾತಾನಾಡಿ ಜಿಲ್ಲೆಯಲ್ಲಿ ಸಂಸ್ಥೆಯ ಘಟಕಗಳ ಸ್ಥಾಪನೆ, ನಿರಂತರ ಚಟುವಟಿಕೆ ಹಾಗೂ ಹಲವು ಮಹತ್ವದ ಸಾಧನೆಗಳ ಮೂಲಕ ಜಿಲ್ಲೆಯ ಆನೇಕ ಶಾಲಾ ಘಟಕಗಳ ವಿದ್ಯಾರ್ಥಿಗಳಿಗೆ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳ ಪ್ರಶಂಸಾ ಪ್ರಶಸ್ತಿ ಪುರಸ್ಕಾರಗಳು ಬರುತ್ತಿವೆಂದು ಹೆಮ್ಮೆಯಿಂದ ಹೇಳಿದರು.
        
ಇದರ ಜೊತೆಗೆ ಸಂಸ್ಥೆಯ ಚಟುವಟಿಕೆಯನ್ನು ಎಲ್ಲಾ ಶಾಲೆಗಳಲ್ಲೂ ತೆರೆಯಬೇಕೆಂಬ ಸರ್ಕಾರದ ಆದೇಶವಿದ್ದರು ಬಹುತೇಕ ಕಡೆ ನಿರ್ಲಕ್ಷ್ಯ ಕಂಡು ಬರುತ್ತಿದೆ, ಈ ಬಗ್ಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿ ಎಲ್ಲಾ ಶಾಲೆಗಳಲ್ಲಿ ಚಟುವಟಿಕೆ ಪ್ರಾರಂಭಕ್ಕೆ ತಿಳಿಸಬೇಕೆಂದು ಹಾಗೂ ಸಂಸ್ಥೆಯ ತರಬೇತಿ ಜಾಗ ಮತ್ತು ನೂತನ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾಡಳಿತ ಸಹಾಯಹಸ್ತ ನೀಡಬೇಕೆಂದು ಮನವಿ ಮಾಡಿದರು.
        
ಗೈಡ್ಸ್‍ನ ಜಿಲ್ಲಾ ಆಯುಕ್ತೆ ಕೆ.ಆರ್. ಜಯಶ್ರೀ ಅವರು ಮಾತನಾಡಿ ಪರಿಪೂರ್ಣ ಸಮಯ, ಬದ್ದತೆ, ತರಬೇತಿ ಪಡೆಯುವ ಮೂಲಕ ಜಿಲ್ಲೆಯ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆಯ ಕೀರ್ತಿ ಪತಾಕೆ ಹಾರಿಸಬೇಕೆಂದು ಉತ್ಸಾಹ ತುಂಬಿದರು.
        
ಜಿಲ್ಲಾ ಖಜಾಂಚಿ ಕೆ. ಪ್ರಹ್ಲಾದರಾವ್ ಅವರು ಮಾತನಾಡಿ ಜಿಲ್ಲೆಯ ಇತಿಹಾಸವನ್ನು ಅವಲೊಕಿಸಿದಾಗ ಆನೇಕ ಮಂದಿ ರಾಷ್ಟ್ರೀಯ ಮಟ್ಟದ ವಿರಳಾತಿ ವಿರಳವಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ, ಈ ಹಿನ್ನಲೆಯಲ್ಲಿ ನೀವು ಸಹ ಶ್ರದ್ದೆಯಿಂದ ಕಲಿತು ಉತ್ತಮ ಸಾಧನೆಮಾಡಿ ಎಂದು ತಿಳಿಸಿದರು.
        
ಮಹೇಶ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ರಾಜ್‍ಕುಮಾರ್ ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್‍ನ ತರಬೇತಿ ಅದರಿಂದಾಗುವ ಪ್ರಯೋಜನಗಳು, ಸಾಧನೆಗಳು, ಸಮಾಜಕ್ಕೆ ಆಗುವ ಉಪಯೋಗಗಳ ಬಗ್ಗೆ ವಿವರಿಸಿದರು.
        
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿದ ಘಟಕಗಳಿಂದ ಆಗಮಿಸಿದ್ದ ಪ್ರಶಸ್ತಿ ಪುರಸ್ಕ್ರುತ ವಿದ್ಯಾರ್ಥಿಗಳಿಗೆ ತೃತೀಯ ಚರಣ್, ಸುವರ್ಣ ಪಂಖ್ ಮತ್ತು ತೃತೀಯ ಸೋಪಾನ ಪ್ರಶಸ್ತಿಗಳನ್ನು ವಿತರಿಸಲಾಯಿತು.
        
ವೇದಿಕೆಯಲ್ಲಿ ಸ್ಕೌಟ್ಸ್‍ನ ಜಿಲ್ಲಾ ಆಯುಕ್ತ ಸುರೇಶ್, ಜಂಟಿ ಕಾರ್ಯದರ್ಶಿ ಉಮಾದೇವಿ, ಜಿಲ್ಲಾ ಸಂಘಟನಾ ಆಯುಕ್ತ ವಿ. ಬಾಬು, ಜಿಲ್ಲಾ ಶಂಘಟಕ ವಿಶ್ವನಾಥ್,  ಜಿಲ್ಲಾ ಉಪಾಧ್ಯಕ್ಷ ವೆಂಕಟರವಣಪ್ಪ,  ಕಾರ್ಯದರ್ಶಿಗಳಾದ ಮಧು ಶಂಕರ್ ಶಾಂತಮ್ಮ ರಾಜೇಶ್ವರಿ ಹಾಗೂ ಶಿಕ್ಷಕಿ ಸವಿತಾ ಮತ್ತಿತರರು ಭಾಗವಹಿಸಿದ್ದರು. 
        

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...