ಚಿಂತಾಮಣಿ : ಮದರಸದಲ್ಲಿದ್ದ ಬಾಲಕನ ಕತ್ತು ಕೂಯ್ದು ಬರ್ಬರ ಕೊಲೆ

Source: S O News service | By Staff Correspondent | Published on 22nd August 2016, 10:09 PM | State News | Don't Miss |

ಚಿಂತಾಮಣಿ :ಮದರಸಾದಲ್ಲಿ ವಾಸವಾಗಿದ್ದ ಬಾಲಕನ ಕತ್ತು ಕೂಯ್ದು ಬರ್ಬರವಾಗಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಚಿನ್ನಸಂದ್ರ ಗ್ರಾಮದ ದಾರುಲ್ ಊಲೇಂ ಮಹಮದೀಯಾದಲ್ಲಿ ಬಳಿ ನಡೆದಿದೆ.
ಅಬ್ದುಲ್ ನವಾಜ್ ಕೊಲೆಯಾದ ನತದೃಷ್ಟ ಬಾಲಕ. ಕೋಲಾರ ನಿವಾಸಿಯಾಗಿರುವ ಅಬ್ದುಲ್ ಕಳೆದೊಂದು ವರ್ಷದಿಂದ ಚಿನ್ನಸಂದ್ರದ ಮದರಸಾದಲ್ಲಿ ವ್ಯಾಸಂಗ ಮಾಡ್ತಿದ್ದು, ಅಲ್ಲೇ ಉಳಿದುಕೊಂಡಿದ್ದ. ಆದರೇ ನಿನ್ನೆ ಬೆಳಿಗ್ಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಅಬ್ದುಲ್ ನವಾಜ್ ಇಂದು ಬೆಳಿಗ್ಗೆ ಮದರಸಾ ಸಮೀಪದ ನಿರ್ಮಾಣ ಹಂತದ ಕಟ್ಟಡದ ನೀರಿನ ಸಂಪಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. 

ಕಟ್ಟಡದ ಮಾಲೀಕನ ದೂರಿನಂತೆ ಇಲ್ಲೇ ಕೆಲಸ ಮಾಡ್ತಿದ್ದ ಗುಲ್ ಉರ್ ರೆಹಮಾನ್ ಷರೀಫ್ ಲಷ್ಕರ್ ಎಂಬಾತನೇ ಈತನನ್ನೇ ಕೊಲೆ ಮಾಡಿರುವ ಗುಮಾನಿ ಇರುವ ಕುರಿತು ದೂರು ನೀಡಿದ್ದಾರೆ. ಆದರೆ ಪ್ರಕರಣಕ್ಕೆ ಹಲವು ತಿರುವುಗಳು ಪಡೆಯುತ್ತಿದ್ದು, ಮದರಸಾ ನಡೆಸುತ್ತಿದ್ದ ಉಸ್ಮಾನುಲ್ಲಾ ಷರೀಪ್ ಯೂ ಸಹಾ ಅನುಮಾನ ಬರುತ್ತಿರುವ ಕಾರಣ ಅಲ್ಲಿನ ಕೆಲಸಗಾರರು ಹಾಗೂ  ವಿದ್ಯಾರ್ಥಿಗಳನ್ನ ವಶಕ್ಕೆ ಪಡೆದು ಚಿಂತಾಮಣಿ ಪೊಲೀಸರು ವಿಚಾರಣೆಗೊಳಪಡಿಸುತ್ತಿದ್ದಾರೆ. ಒಟ್ನಲ್ಲಿ ಕಂದನನ್ನ ಕಳೆದುಕೊಂಡ ಪೋಷಕರ ಆಕ್ರಂಧನ ಮುಗಿಲು ಮುಟ್ಟಿತ್ತು.....

 ಇನ್ನೂ ವಿಷಚಿi ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಚಿಂತಾಮಣಿ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿ, ಬಾಲಕನ ಮೃತದೇಹವನ್ನು ಹೊರತೆಗೆದಿದ್ದಾರೆ. ಈ  ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 
Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...