ತನ್ನ ಜೀವದ ಹಂಗು ತೊರೆದು ಮೀನುಗಾರರ ಪ್ರಾಣ ರಕ್ಷಿಸುವ ಸುರೇಶ್ ಖಾರ್ವಿ

Source: sonews | By Staff Correspondent | Published on 29th August 2017, 7:02 PM | Coastal News | State News | Special Report | Don't Miss |

ಭಟ್ಕಳ: ಆಪತ್ತಿನಲ್ಲಿ ಸಹಾಯಕ್ಕೆ ಬರುವವನು ಆಪ್ತಮಿತ್ರ. ಮೀನುಗಾರರ ತಮ್ಮ ವೃತ್ತಿಬದುಕಿನಲ್ಲಿ ಹಲವು ಆಪತ್ತುಗಳನ್ನು ಎದುರಿಸುವವರು. ತನ್ನ ಪ್ರಾಣದ ಹಂಗು ತೊರೆದು ಇತರರ ಜೀವನ ರಕ್ಷಿಸುವ ಕಲೆಯನ್ನು ಚಿಕ್ಕಂದಿನಿಂದಲೈ ಮೈಗೂಡಿಸಿಕೊಂಡಿರುವ ಮೀನುಗಾರ ಸಮುದಾಯದ ಸುರೇಶ್ ಬಸವ ಖಾರ್ವಿಯವರ ಬದುಕು ಇಡೀ ಸಮಾಜಕ್ಕೆ ಮಾದರಿ.
ಇನ್ನೂ ಮಕ್ಕಳೊಂದಿಗೆ ಆಟವಾಡುತ್ತ ಕಾಲ ಕಳೆಯುವ ವಯೋಮಾನದಲ್ಲಿ ಮೀನುಗಾರಿಕ ವೃತ್ತಿಯನ್ನು ಕಂಡುಕೊಂಡವರು ತಾಲೂಕಿನ ಮಾವಿನಕುರ್ವಾ ಗ್ರಾಮದ ಮೀನುಗಾರಿಕಾ ಸಮುದಾಯದ ಸುರೇಶ್ ಖಾರ್ವಿ. ತನ್ನ ೧೭ನೇ ವಯಸ್ಸಿನಲ್ಲಿ ಮೀನುಗಾರಿಕೆಯನ್ನು ಆರಂಭ ಮಾಡಿದ್ದ ಸುರೇಶ ಬಸವ ಖಾರ್ವಿ ಇಲ್ಲಿಯ ತನಕ ಸುಮಾರು ೧೧ ಜನರ ಪ್ರಾಣ ರಕ್ಷಣೆ ಮಾಡಿ ಅವರೆಲ್ಲರ ಕಣ್ಮಣಿಯಾಗಿದ್ದಾರೆ. ಇವರ ಸಾಹಸಮಯ ಜೀವನದ ಹಿನ್ನೋಟ ಇಲ್ಲಿದೆ.  
ತನ್ನ ಮೀನುಗಾರಿಕಾ ವೃತ್ತಿಯಲ್ಲಿ ಮಂಗಳೂರಿನ ಪೂರ್ಣೇಶ್ವರಿ ಬೋಟಿನಿಂದ ಆರಂಭಿಸಿದ್ದ ಇವರು ಮೀನುಗಾರಿಕೆಯನ್ನು ಮಾಡುತ್ತಿರುವಾಗ ಸುಮಾರು ೧೭೫ ಮೀಟರ್ ಆಳದ ಸಮುದ್ರದಲ್ಲಿದ್ದ ಬೋಟಿನಿಂದ ರಾತ್ರಿ ೧.೩೦ರ ಸುಮಾರಿಗೆ ಓರ್ವ ನೀರಿಗೆ ಬಿದ್ದು ಬಿಡುತ್ತಾನೆ. ತಮ್ಮೊಂದಿಗೇ ಕೆಲಸ ಮಾಡುತ್ತಿರುವವನೋರ್ವ ಬಿದ್ದು ಮುಳುಗುತ್ತಿರುವುದನ್ನು ಕಾಣಲಾರದ ಇವರು ಜೀವದ ಹಂಗು ತೊರೆದು ನೀರಿಗೆ ಧುಮುಕುತ್ತಾರೆ. ಇನ್ನೇನು ಮುಳುಗಿ ಪ್ರಾಣ ಕಳೆದುಕೊಳ್ಳಲಿರುವ ತನ್ನ ಸಹೋದ್ಯೋಗಿಯನ್ನು ರಕ್ಷಿಸಿದ ಇವರಿಗೆ ತನ್ನ ಸಹೋದ್ಯೋಗಿಗೆ ಮರುಜೀವ ನೀಡಿದ ಸಂತಸ ತುಂಬುತ್ತದೆ.  
ನಂತರದ ದಿನಗಳಲ್ಲಿ ಕೂಡಾ ಬೋಟಿನಲ್ಲಿ ಮೀನುಗಾರಿಕೆ ಮಾಡುತ್ತಿರುವಾಗಲೇ ನೀರಿಗೆ ಬಿದ್ದ ಸುಮಾರು ೫೦ ಮೀಟರ್ ನೀರಿನಲ್ಲಿ ಧುಮುಕಿ ರೋಪ್ ಸಹಾಯದಿಂದ ರಕ್ಷಿಸಿದ್ದಲ್ಲದೇ ಮಂಗಳೂರಿನಲ್ಲಿ ಬೋಟಿನಿಂದ ಬಿದ್ದು ಮುಳುಗುತ್ತಿರುವವನೋರ್ವನನ್ನು ಕೂಡಾ ರಕ್ಷಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. 
ಭಟ್ಕಳದ ಮಾವಿನಕುರ್ವೆಯಿಂದ ಮೀನುಗಾರಿಕೆಗೆ ತೆರಳಿ ಬೋಟು ಮಗುಚಿ ನೀರಿಗೆ ಬಿದ್ದ ೮ ಜನರು ಕಾರ್ಗತ್ತಲಲ್ಲಿ ಸುಮಾರ ೯ ತಾಸಗಳ ಕಾಲ ಈಜಿ ಜೀವ ಹಿಡಿದಿಟ್ಟುಕೊಂಡಿದ್ದರೆ ಅವರನ್ನು ನಡುರಾತ್ರಿಯಲ್ಲಿ ರೋಪ್ ಮೂಲಕ ನೀರಿಗಿಳಿದು ಒಬ್ಬೊಬ್ಬರನ್ನೇ ತಂದು ಬೊಟಿನಲ್ಲಿ ಹಾಕಿ ರಕ್ಷಿಸುವಲ್ಲಿ ಕೂಡಾ ಸುರೇಶ ಖಾರ್ವಿಯವರ ಪಾತ್ರ ಬಹು ಮಹತ್ವದ್ದು. 
ಕಳೆದ ವರ್ಷ ಮಾವಿನಕುರ್ವೆ ಬಂದರದಿಂದ ಮೀನುಗಾರಿಕೆಗೆ ತೆರಳಿ ದೋಣಿ ಮಗುಚಿ ನಿರಂತರ ಒಂಭತ್ತು ಗಂಟೆಗಳ ಕಾಲ ಸಾವಿನೊಡನೆ ಸೆಣಸಾಡುತ್ತಿರುವವರನ್ನು ಸಮಯ ಪ್ರಜ್ಞೆ ಮೆರೆದು ಬದುಕಿಸಿದ ಕೀರ್ತಿಗೆ ಪಾತ್ರರಾದವರಲ್ಲಿ ಇವರೂ ಕೂಡಾ ಒಬ್ಬರು.  ಭಟ್ಕಳ ಬಂದರದಿಂದ ದೋಣಿಯೊಂದರಲ್ಲಿ ಮೀನುಗಾರಿಕೆಗೆ ತೆರಳಿದ್ದ ೮ ಜನರು ರಾತ್ರಿಯಾದರೂ ಬಂದರಕ್ಕೆ ಮರಳಿಲ್ಲವಾಗಿತ್ತು. ಇದನ್ನು ಮನಗಂಡು ಗೋಪಾಲ ಮೊಗೇರ ಅವರ ಮತ್ಸ್ಯದೀಪ ಬೋಟಿನಲ್ಲಿ ಸಮುದ್ರಕ್ಕೆ ತೆರಳಿದ್ದವರಲ್ಲಿ ಅತ್ಯಂತ ಚಾಣಾಕ್ಷ ತನದಿಂದ ಸಮುದ್ರದಲ್ಲಿದ್ದವರನ್ನ ಪತ್ತೆ ಹಚ್ಚುವಲ್ಲಿ ಹಾಗೂ ರೋಪ್ ಸಹಾಯದಿಂದ ನೀರಿಗಿಳಿದು ಒಬ್ಬೊಬ್ಬರನ್ನೇ ಎತ್ತಿಕೊಂಡು ಬೋಟಿಗೆ ಹಾಕುವಲ್ಲಿ ಇವರ ಕಾರ್ಯ ಪ್ರಶಂಸನೀಯವಾದದ್ದು. ಸಮುದ್ರದಲ್ಲಿ ಹುಡುಕಿ ಹುಡುಕಿ ಸುಸ್ತಾದರೂ ಕೂಡಾ ಇವರು ಮಾತ್ರ ಇನ್ನೂ ನಿರೀಕ್ಷೆಯಲ್ಲಿಯೇ ಇದ್ದರು, ಎಲ್ಲೋ ಸಮುದ್ರದ ಅಲೆಗಳು, ಗಾಳಿಯ ನಡುವೆ ಒಂದು ಕೀರಲು ಧ್ವನಿ ಕೇಳುತ್ತದೆ. ಅದನೇ ಅಧಾರವಾಗಿಟ್ಟುಕೊಂಡು ಬೆನ್ನು ಹತ್ತಿದ ಇವರಿಗೆ ಸಿಕ್ಕಿದ್ದು ಈಜಿ ಈಜಿ ಸುಸ್ತಾಗಿ ಇನ್ನೇನು ಬದುಕುವ ಆಸೆಯನ್ನೇ ತೊರೆದಿದ್ದ ೭ ಜನರು. ಅವರ ಸುಳಿವು ದೊರೆಯುತ್ತಲೇ ಜೀವದ ಹಂಗು ತೊರೆದು ನೀರಿಗೆ ಧುಮುಕಿದ ಇವರು ಇನ್ನೇನು ಮುಳುಗುವ ಹಂತದಲ್ಲಿದ್ದ ಒಂದಿಬ್ಬರನ್ನು ಅತ್ಯಂತ ಚಾಣಾಕ್ಷತನದಿಂದ ಮೇಲಕ್ಕೆ ತಂದು ಪ್ರಾಣ ಉಳಿಸಿದ ಕೀರ್ತಿ ವರಿಗೆ ಸಲ್ಲುತ್ತದೆ. ನೀರಿನಲ್ಲಿ ಸದಾ ಸಾಹಸ ಮಾಡುವವರಾದರೂ ಕೂಡಾ ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಧೈರ್ಯ ತೋರುವವರು ಬಹಳ ವಿರಳ. ತಮ್ಮ ಕುಟುಂಬದ ನೆನಪು ಮಾಡಕೊಂಡು ಕೇವಲ ರೋಪ್ ಇಲ್ಲವೇ ಜೀವರಕ್ಷಕ ವಸ್ತುಗಳನ್ನು ನೀಡಿ ಮೇಲೆತ್ತಲು ನೋಡುತ್ತಾರೆಯೇ ವಿನಹ ಇವರಂತೆ ತಕ್ಷಣ ನೀರಿಗೆ ಧುಮುಕುವವರು ಅತ್ಯಂತ ವಿರಳ.  
ಇಲ್ಲಿನ ತನಕ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಳ್ಳುತ್ತಿದ್ದ ೧೧ ಜನರನ್ನು ರಕ್ಷಣೆ ಮಾಡಿದ ಇವರಿಗೆ ತೃಪ್ತಿ ಇದೆ. ಹೆಂಡತಿ ಎರಡು ಮಕ್ಕಳೊಂದಿಗೆ ಸಂಸಾರ ಮಾಡುತ್ತಿರುವ ಇವರು ಜೀವದ ಹಂಗು ತೊರೆದು ನೀರಿಗೆ ಧುಮುಕುವಾಗ ತಮ್ಮ ಹೆಂಡತಿ ಮಕ್ಕಳನ್ನೂ ನೆನೆಸುತ್ತಾರೆ.  ಆದರೆ ದೇವರ ನಾಮ ಸ್ಮರಣೆಯಿಂದ ಎಲ್ಲವೂ ಸಾಧ್ಯವಾಗಿದೆ ಎನ್ನುವುದಕ್ಕೆ ಮರೆಯುವುದಿಲ್ಲ.  ಒಮ್ಮೆ ಇನ್ನೇನು ನೀರಿನಿಲ್ಲಿ ಮುಳುಗಿದ ಸಹೋದ್ಯೋಗಿ ರಕ್ಷಣೆ ಮಾಡುವಾಗ ಅಕ್ಷರಸ ತಾವೇ ಅಪಾಯದಲ್ಲಿ ಸಿಲುಕುತ್ತಾರೆ. ಆದರೂ ಸಹ ಧೈರ್ಯ ಮಾಡಿಕೊಂಡು ಸಾಹಸದಿಂದ ಮೇಲೆದ್ದು ಬಂದಿದ್ದಲ್ಲದೇ ತಮ್ಮ ಸಹೋದ್ಯೋಗಿಯನ್ನೂ ರಕ್ಷಿಸಿದ ಕೀರ್ತಿ ಇವರಿಗೆ ಸಲ್ಲಬೇಕು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...