ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬಿಡುಗಡೆಯಾಗಿದ್ದು ರೂ.1437 ಕೋಟಿ ಖರ್ಚಾಗಿದ್ದು ರೂ.676 ಕೋಟಿ-ಮರಿಸ್ವಾಮಿ

Source: sonews | By Staff Correspondent | Published on 23rd November 2017, 3:45 PM | Coastal News | Don't Miss |

ಭಟ್ಕಳ: ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಮುರ್ಡೇಶ್ವರ ಹ್ಯೊಮೆನ್ ವೆಲ್ಪೇರ್ ಟ್ರಸ್ಟ ಹಾಗೂ  ಸಮುದಾಯ ಅಭಿವೃದ್ಧಿ ಯೋಜನೆ ಆರ್ .ಎನ್ .ಎಸ್. ರೂರಲ್ ಪಾಲಿಟೆಕ್ನಿಕ್ ಮುರ್ಡೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಅಲ್ಪಸಂಖ್ಯಾತರ ದಿನ ಆಚರಿಸಲಾಯಿತು.  
ಕಾರ್ಯಕ್ರಮದಲ್ಲಿ  ಮುರ್ಡೇಶ್ವರ ಪಾಲಿಟೆಕ್ನಿಕ್ ನ ಪ್ರಭಾರ ಪ್ರಾರ್ಚಾರ್ಯ ಹಾಗೂ ಸಂಯೋಜನಾಧಿಕಾರಿ ಕೆ. ಮರಿಸ್ವಾಮಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಾ ಅಲ್ಪಸಂಖ್ಯಾತ ಮುಸ್ಲಿಂರಿಗೆ  ಸರ್ಕಾರದ ಅನೇಕ ವಿಧದ ಸೌಲಭ್ಯಗಳಿವೆ. ಅದನ್ನು ಸರಿಯಾಗಿ ಸದುಪಯೋಗ ಪಡಿಸಕೊಳ್ಳದೆ ಸರ್ಕಾರದ ಅನುದಾನ ಖರ್ಚಾಗದೆ ಉಳಿಯುತ್ತದೆ. 2016-17 ನೇ ಸಾಲಿನಲ್ಲಿ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ 253 ಕೋಟಿ ಒದಗಿದು,್ದ ಆದರೆ ಖರ್ಚಾಗಿದ್ದು  ಕೇವಲ 59 ಕೋಟಿ. ಕರ್ನಾಟಕ ವಕ್ಫ ಮಂಡಳಿಗೆ 104 ಕೋಟಿ ಒದಗಿಸಿದ್ದು, ಕೇವಲ 85 ಕೋಟಿ ಖರ್ಚಾಗಿದೆ. ಕರ್ನಾಟಕ ರಾಜ್ಯ  ಹಜ್ ಸಮಿತಿಗೆ 25 ಕೋಟಿ ಅನುದಾನ  ಒದಗಿಸಿದ್ದು, ಖರ್ಚಾಗಿದ್ದು ಕೇವಲ 12.5 ಕೋಟಿ. ಕರ್ನಾಟಕ ಅಲ್ಪಸಂಖ್ಯಾತ ಆಯೋಗ , ಉರ್ದು ಅಕಾಡಮಿಗೆ 3.87 ಕೋಟಿ,ಹೀಗೆ ಒಟ್ಟು 1437 ಕೋಟಿ ಫಂಡ ರೀಲೀಸ್ ಆಗಿತ್ತು. ಆದರೆ ಖರ್ಚಾಗಿದ್ದು ಮಾತ್ರ 676 ಕೋಟಿ ಅಂದರೆ ಶೇಕಡಾ 46% ಮಾತ್ರ ಸದುಪಯೋಗ ಪಡೆದುಕೊಳ್ಳಲಾಗಿದೆ. ಶಾದಿ ಭಾಗ್ಯ ಯೋಜನೆಯಲ್ಲಿ  ಮದುವೆಯಾಗುವ ಬಡ ಮುಸ್ಲಿಂ ಮಹಿಳೆಗೆ 50,000 ರೂ.ಗಳ ಸಹಾಯ ಹಸ್ತವನ್ನು ನೀಡುವ ಯೋಜನೆಗಳು  ಹೀಗೆÀ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಅಲ್ಪಸಂಖ್ಯಾತರಿಗೆ ಅನೇಕ ರೀತಿಯ ನೇರವನ್ನು ನೀಡುತ್ತಿದ್ದು ಅದರ ಸದುಪಯೋಗವನ್ನು ಪಡೆದುಕೊಂಡು ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಕೈ ಜೋಡಿಸಿರಿ ಎಂದು ತಿಳಿಸಿದರು.  
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರ್ಡೇಶ್ವರ ಹ್ಯೂಮನ್ ವೆಲ್‍ಪೇರ್ ಟ್ರಸ್ಟನ ಅಧ್ಯಕ್ಷರಾದ 
ಡಾ.ಅಮೀನುದ್ದೀನ್ ವಹಿಸಿದ್ದರು. ಗ್ರಾಮ ಪಂಚಾಯತಿ ಸದಸ್ಯೆ  ನಯನಾ ನಾಯ್ಕ ಉಪಸ್ಥಿತರಿದ್ದರು.ಸಿ.ಡಿ,ಟಿ.ಪಿ ಯೋಜನೆಯ ಸಿ.ಡಿ.ಸಿ ಪ್ರಕಾಶ ಜೆ.ಸಿ ಸ್ವಾಗತಿಸಿ ಕೊನೆಯಲ್ಲಿ  ವಂದಿಸಿದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...