ಖಾಸಗಿ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟ; ಅರ್.ಟಿ.ಒ ಅಧಿಕಾರಿಗೆ ಘೇರಾವು

Source: sonews | By sub editor | Published on 23rd March 2018, 12:17 AM | Coastal News | Don't Miss |

ಭಟ್ಕಳ: ಖಾಸಗಿ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದು ಇದರಿಂದಾಗಿ ಹಳದಿ ಬೋರ್ಡ ಹೊಂದಿದೆ ವಾಹನ ಚಾಲಕ ಮಾಲಕರಿಗೆ ಪ್ರಯಾಣಿಕರು ಸಿಗದೆ ಪರದಾಡುವಂತಾಗಿದೆ ಈ ಕುರಿತು ಹಲವು ಬಾರಿ ರಸ್ತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸದರೂ ಯಾವುದೇ ಪ್ರಯೋಜನವಾಗದೆ ಗುರುವಾರ ಭಟ್ಕಳಕ್ಕೆ ಬಂದಿದ್ದ ಆರ್.ಟಿ.ಒ ಅಧಿಕಾರಿಗೆ ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು ಘೇರಾವು ಹಾಕಿದ ಘಟನೆ ಜರಗಿದೆ.
ಸರಕಾರದ ನಿಯಮಾವಳಿಗಳಂತೆ ಪ್ರಯಾಣಿಕರ ಸಾಗಣಿ ಸಲುವಾಗಿ ಸಾಲ ಮಾಡಿ ವಾಹನ ಖರೀಧಿಸಿ ಸಾರಿಗೆ ಇಲಾಖೆಗೆ ತೆರಿಗೆ ತುಂಬುತ್ತ ಬಂದಿದ್ದು ಭಟ್ಕಳದಲ್ಲಿ ಕೆಲ ಖಾಸಗಿ ಮಾಲಕತ್ವದ ವಾಹನಗಳು ಜನರನ್ನು ತುಂಬಿಕೊಂಡು ಹೋಗುತ್ತಿದ್ದು ಸರ್ಕಾರಕ್ಕೆ ನಿಯಮಬದ್ಧವಾಗಿ ಪ್ರಾಯಾಣಕರ ತುಂಬಿದ ನಾವುಗಳು ಬೀದಿಪಾಲಾಗುತ್ತಿದೆ ನಮಗೆ ಪ್ರವಾಸಿಗರು ಸಿಗದೇ ಕೇವಲ ಬಸ್ ನಿಲ್ದಾಣದಲ್ಲಿ ದಿನ ದೂಡುತ್ತಿದ್ದೇವೆ ಎಂದು ಈ ಹಿಂದೆ ಸಾರಿಗೆ ಇಲಾಖೆ ಅಧಿಕರಿಗಳಿಗೆ ಮನವಿ ಅರ್ಪಿಸಿದ್ದ ಲಾರಿ ಚಾಲಕ ಮಾಲಕ ಸಂಘದವರು ಪರವಾನಿಗೆ ಇಲ್ಲದೆ ಖಾಸಗಿ ವ್ಯಕ್ತಿಗಳನ್ನು ವಾಹನದಲ್ಲಿ ಸಾಗಿಸುತ್ತಿರುವ ಹಲವು ವಾಹನ ಚಾಲಕರನ್ನು ಹಾಗೂ ವಾಹನದ ಸಂಖ್ಯೆ ಸಮೇತ ಅಧಿಕರಿಗಳಿಗೆ ಒಪ್ಪಿಸಿದ್ದು ಇದುವರೆಗೆ ಯಾವುದೇ ಕ್ರಮ ಜರಗಿಸದ ಅಧಿಕಾರಿಗಳನ್ನು ಬಸ್ ಸ್ಟ್ಯಾಂಡ್ ಬಳಿ ಗುರುವಾರದಂದು ಘೇರಾವು ಹಾಕಿ ಕೂಡಲೇ ಕ್ರಮ ಜರಗಿಸಬೇಕೆಂದು ಆಗ್ರಹಿಸಿದರು. 
ಈ ಸಂದರ್ಭದಲ್ಲಿ ಆರ್.ಟಿ.ಒ ಹಿರಿಯಾ ಅಧಿಕಾರಿ ಎಲ್.ಪಿ.ನಾಯ್ಕ ಕೂಡಲೇ ಸೂಕ್ತ ಭರವಸೆ ನೀಡಿದ್ದರಿಂದ ಚಾಲಕ ಮಾಲಕ ಸಂಘದ ಸದಸ್ಯರು ಘೇರಾವನ್ನು ಹಿಂಪಡೆದುಕೊಂಡರು. 
ಅಬ್ದುಲ್ ಮಜೀದ್ ಬ್ಯಾರಿ, ಆಸಿಫ್, ಅಬ್ದುಲ್ ರಝಾಕ್, ಅಬ್ದುಲ್ ಕರೀಮ್, ಶ್ರೀಧರ್, ಮಂಜು, ಜಗದೀಶ, ನಾಗರಾಜ್ ಸೇರಿದಂತೆ ಹಲವಾರು ಚಾಲಕ ಮಾಲಕ ಸಂಘದ ಸದಸ್ಯರು ಹಾಜರಿದ್ದರು. 

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...