ಭಟ್ಕಳದ ಷುಟೋಕಾನ್ ಕರಾಟೆ ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಶ್ರೇಷ್ಠ ಸಾಧನೆ

Source: sonews | By Staff Correspondent | Published on 9th August 2018, 12:32 AM | Coastal News | Don't Miss |

ಭಟ್ಕಳ: ಆಗಷ್ಟ್.೪ ಮತ್ತು ೫ ರಂದು ಉಡುಪಿಯ ಕಟ್ಪಾಡಿಯಲ್ಲಿ ಜರಗಿದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಟ್ಕಳದ ಷುಟೋಕಾನ್ ಕರಾಟೆ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದು ಭಟ್ಕಳಕ್ಕೆ ಕೀರ್ತಿ ತಂದಿದ್ದಾರೆ.

ಕಲರ್ ಬೆಲ್ಟ್ ವಿಭಾಗದಲ್ಲಿ ಕಟಾ ಮತ್ತು ಕಮ್ತೆ ಯಲ್ಲಿ ಸುಜನ್ ನಾಯ್ಕ ಪ್ರಥಮ, ರಿಫಾ ಖಾನ್ ದ್ವಿತೀಯಾ, ಸುನಿಲ್ ನಾಯ್ಕ ತೃತೀಯ ಬಹುಮಾನ ಗಳಿಸಿಕೊಂಡಿದ್ದಾರೆ.  ಬ್ರೌನ್ ಬೆಲ್ಟ್ ನಲ್ಲಿ ನೇಹಾ ನಾಗೇಶ್ ಲಂಬಾಣಿ ಪ್ರಥಮ, ಅನನ್ಯ ದ್ವಿತೀಯಾ, ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ರಾಘವೇಂದ್ರ ನಾಯ್ಕ ಪ್ರಥಮ, ರಾಜಶೇಖರ್ ಗೌಡ ದ್ವಿತೀಯಾ ಸ್ಥಾನ ಪಡೆದುಕೊಂಡಿದ್ದಾರೆ.

ವಿದ್ಯರ್ಥಿಗಳ ಉತ್ತಮ ಸಾಧನೆಗೆ ಷುಟೋಕಾನ್ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ವಿದ್ಯಾರ್ಥಿಗಳಿಗೆ ಅಭಿನಂಧಿಸಿದ್ದಾರೆ.

Read These Next