ಭಟ್ಕಳ: ಮಂಕಾಳ ವೈದ್ಯರ ದಿಟ್ಟ ಹೆಜ್ಜೆ-ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಮತ್ತೆ 31 ಕೋಟಿ 62 ಲಕ್ಷ ರೂಪಾಯಿ ಮಂಜೂರಿ

Source: so english | By Arshad Koppa | Published on 20th October 2017, 1:11 PM | State News |

ಭಟ್ಕಳ, ಅ ೨೧: ಅಭಿವೃದ್ಧಿಯ ಹರಿಕಾರ ಎಂಬ ಅನ್ವರ್ಥನಾಮದಿಂದ ಜನಮಾನಸದಲ್ಲಿ ವಿರಾಜಮಾನರಾಗಿರುವ, ಹಳ್ಳಿಯ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎನ್ನುವ ಗಟ್ಟಿ ಸಿದ್ಧಾಂತವನ್ನು ಮೈಗೂಡಿಸಿಕೊಂಡು ನುಡಿದಂತೆ ನಡೆಯುತ್ತಿರುವ, ಭಟ್ಕಳದ ಜನಪ್ರಿಯ ಶಾಸಕರಾದ ಸನ್ಮಾನ್ಯ ಮಂಕಾಳ ವೈದ್ಯರವರ ಅಭಿವೃದ್ಧಿಯ ನಾಗಾಲೋಟ ಇದೀಗ ಮತ್ತೊಂದು ಮಜಲನ್ನು ತಲುಪಿದೆ. ಭಟ್ಕಳವನ್ನು ಆಳಿಹೋದ ಹಲವಾರು ಶಾಸಕರ ಮಧ್ಯೆ ವಿಭಿನ್ನವಾಗಿ ನಿಲ್ಲುವ ಹೆಮ್ಮೆಯ ಶಾಸಕ ಮಂಕಾಳ ವೈದ್ಯರ ಸ್ವಪ್ರಯತ್ನವೆಂಬಂತೆ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಮತ್ತೆ 31 ಕೋಟಿ 62 ಲಕ್ಷ ರೂಪಾಯಿ ಮಂಜೂರಿಯಾಗಿದೆ. ಭಟ್ಕಳ ಹೊನ್ನಾವರ ತಾಲ್ಲೂಕಿನ ಹಳ್ಳಿ ಹಳ್ಳಿಗೂ ರಸ್ತೆ, ಸೇತುವೆ ನಿರ್ಮಾಣ ಆಗಬೇಕು ಎನ್ನುವ ಕನಸನ್ನು ಹೊತ್ತ ಶಾಸಕ ಮಂಕಾಳ ವೈದ್ಯರು ಅದನ್ನು  ಸಾಕಾರವಾಗೊಳಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಇವರ ಪ್ರಯತ್ನದಿಂದ ಈ ಕೆಳಗಿನಂತೆ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ಒಟ್ಟು 31 ಕೋಟಿ 62 ಲಕ್ಷ ರೂಪಾಯಿ ಮಂಜೂರಿಯಾಗಿ ಟೆಂಡರ್ ಕರೆಯಲಾಗಿದೆ. 

1. ಭಟ್ಕಳ ತಾಲ್ಲೂಕಿನ ಕೊಪ್ಪ ಗ್ರಾಮ ಪಂಚಾಯತ ಕೊಳೆಗೇರಿ ಮಜಿರೆಗೆ ಹೋಗುವ ರಸ್ತೆ ಮತ್ತು ಸೇತುವೆ ನಿರ್ಮಾಣ-
       (2 ಕೋಟಿ 84 ಲಕ್ಷ ರೂಪಾಯಿ)

2. ಭಟ್ಕಳ ತಾಲ್ಲೂಕಿನ ಕೊಪ್ಪ ಗ್ರಾಮ ಪಂಚಾಯತ ವಂದಲ್ಸು ಅಯ್ಯಪ್ಪ ಸರ್ಕಲ್ ನಿಂದ ಕಕ್ಕೆ ಮಜಿರೆಗೆ ಹೋಗುವ ರಸ್ತೆ ಮತ್ತು ಸೇತುವೆ ನಿರ್ಮಾಣ-
      (2 ಕೋಟಿ 77 ಲಕ್ಷ ರೂಪಾಯಿ)

3. ಭಟ್ಕಳ ತಾಲ್ಲೂಕಿನ ಹೆಬಳೆ ಗ್ರಾಮ ಪಂಚಾಯತ ಹೊನ್ನೆಗದ್ದೆ ಹೊಟಗಣಿ ಜಟಗ ದೇವಸ್ಥಾನದ ಹತ್ತಿರ ರಸ್ತೆ ಮತ್ತು ಸೇತುವೆ ನಿರ್ಮಾಣ ಹಾಗೂ ಸೋಡಿಗದ್ದೆ ಮಹಾಸತಿ ದೇವಸ್ಥಾನದಿಂದ ಕೆಳಗಿನ ಬೆಳಕೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಸೇತುವೆ ನಿರ್ಮಾಣ-
      (5 ಕೋಟಿ 72 ಲಕ್ಷ ರೂಪಾಯಿ)

4. ಹೊನ್ನಾವರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 206 ರಿಂದ ಕುಳಕೋಡ ಗೋಪಾಲಕೃಷ್ಣ ದೇವಸ್ಥಾನದವರೆಗೆ ರಸ್ತೆ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ 206 ರಿಂದ ಜಲವಳಕರ್ಕಿ ಶಿವಮ್ಮಾ ಯಾನೆ ದುರ್ಗಾದೇವಿ ರಸ್ತೆ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ 66 ರಿಂದ ಹೊಸಪಟ್ಣ ರಸ್ತೆ ನಿರ್ಮಾಣ, ಮಾಳ್ಕೋಡು ನಿಂದ ಮೇಲಿನ ಇಡಗುಂಜಿ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಸೇತುವೆ ನಿರ್ಮಾಣ-
     (5 ಕೋಟಿ 81 ಲಕ್ಷ ರೂಪಾಯಿ) 

5. ಹೊನ್ನಾವರ ತಾಲ್ಲೂಕಿನ ಕೊಡ್ಲಗದ್ದೆಯಿಂದ ಮಾಗೋಡು ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಸೇತುವೆ ನಿರ್ಮಾಣ, ಜಿಲ್ಲಾ ಮುಖ್ಯ ರಸ್ತೆಯಿಂದ ಕೊಡಾಣಿ ಕ್ರಿಶ್ಚಿಯನ್ ಕೇರಿ ಕಾನ್ವೆಂಟ್ ಶಾಲೆಗೆ ಹೋಗುವ ರಸ್ತೆ ಮತ್ತು ಸೇತುವೆ ನಿರ್ಮಾಣ-
     (6 ಕೋಟಿ 87 ಲಕ್ಷ ರೂಪಾಯಿ)

6. ಹೊನ್ನಾವರ ತಾಲ್ಲೂಕಿನ ಮಂಕಿ ಮಡಿ ಕ್ರಾಸ್ ನಿಂದ ನಾಖುದಾಮೊಹಲ್ಲಾ ಸಣ್ಣಗುಂದ ಹೊಸಹಿತ್ಲು ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಸೇತುವೆ ನಿರ್ಮಾಣ, ಸಂಪೊಳ್ಳಿಯಿಂದ ಹೊಲಾಡ ಗಂಜಿಗೇರಿ ಕ್ರಾಸ್ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಸೇತುವೆ ನಿರ್ಮಾಣ-
     (7 ಕೋಟಿ 60 ಲಕ್ಷ ರೂಪಾಯಿ)

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...