ಭಟ್ಕಳ ತಾಲೂಕಿನಲ್ಲಿ ಮುಂದುವರೆದ ಮಳೆ;  ಧರೆಗುರುಳಿದ ಮರ ಹಾಗೂ ವಿದ್ಯುತ್ ಕಂಬಗಳು

Source: sonews | By Staff Correspondent | Published on 29th June 2018, 8:25 PM | Coastal News | Don't Miss |

ಭಟ್ಕಳ: ತಾಲೂಕಿನಾದ್ಯಂತ ಮಳೆಯ ಅರ್ಭಟ ಮುಂದುವರೆದಿದ್ದು ಕಳೆದ ಐದಾರು ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜನರು ಹಲವು ತೊಂದರೆಗಳನ್ನು ಅನುಭವಿಸುವಂತಾಗಿದೆ.

 

ತಾಲೂಕಿನಲ್ಲಿ ಹರಿಯುತ್ತಿರುವ ನದಿ, ಹೊಳೆ ಹಳ್ಳಗಳು ತುಂಬಿಕೊಂಡಿದ್ದು ತನ್ನ ಪೌರುಷವನ್ನು ಮೆರೆಯುತ್ತಿವೆ. ಬುಧವಾರ ರಾತ್ರಿ ಬಿದ್ದ ಮಳೆಯಿಂದಾಗಿ ಅಲ್ಲಲ್ಲಿ ಬೃಹತ್ ಮರ ಹಾಗೂ ವಿದ್ಯುತ್ ಕಂಬಗಳು ಧರಾಶಾಹಿಯಾಗುತ್ತಿದ್ದು ಹೆದ್ದಾರಿಗೆ ತಾಗಿಕೊಂಡ ಶಿಫಾ ಕ್ರಾಸ್ ಬಳಿ ಮರವೊಂದು ಬೇರು ಸಹಿತ ಉರುಳಿ ಬಿದ್ದಿದ್ದು ಇದರ ಪರಿಣಾವಾಗಿ ಎರಡು ವಿದ್ಯುತ್ ಕಂಬಗಳು ಧರೆಗುರುಳಿವೆ. ಮರವು  ನಯೀಮ್ ಎಂಬುವವರ ಮನೆ ಮೇಲೆ ಬಿದ್ದಿದು ಮನೆಗೆ ತುಂಬಾ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಆದರೆ ಯಾವುದೇ ಜೀವ ಹಾನಿ ಸಂಭವಿಸಲಿಲ್ಲ. ಗ್ರಾಮೀಣ ಭಾಗದ ಮುಂಡಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿ ಸುಭ್ರಾಯ ದೇವಾಡಿಗ ಎಂಬುವವ ಮನೆ ಗೋಡೆ ಕುಸಿದು ಬಿದ್ದಿದ್ದು ಅಧಿಕಾರಿಗಳು ಪಂಚನಾಮೆಯನ್ನು ನಡೆಸಿದ್ದಾರೆ.                                          ಭಾರೀ ಮಳೆಯಿಂದಾಗಿರಾಷ್ಟ್ರೀಯ ಹೆದ್ದಾರಿಯ ಮೇಲೆ ಸುಮಾರು ಎರಡುಅಡಿಗಷ್ಟು ನೀರು ನಿಂತು ಹೆದ್ದಾರಿಯಲ್ಲಿ ಓಡಾಡುವವಾಹನ ಸವಾರರು ತೀವ್ರ ತೊಂದರೆ ಪಟ್ಟಿದ್ದರೆ,ದ್ವಿಚಕ್ರ ವಾಹನ ಸವಾರರು ಕೂಡಾ ಪ್ರಯಾಸದಿಂದ ವಾಹನ ಚಲಾಯಿಸಬೇಕಾಗಿಬಂದಿತ್ತು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...