ಭಟ್ಕಳ:ಪುರಸಭ ಕಟ್ಟಡ ಕಲ್ಲು ಎಸೆತಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ

Source: sonews | By Staff Correspondent | Published on 17th September 2017, 11:19 PM | Coastal News | Don't Miss |

ಭಟ್ಕಳ: ಗುರುವಾರದಂದು ಪುರಸಭೆಯ ಅಂಗಡಿಕಾರ ರಾಮಚಂದ್ರನಾಯ್ಕ ಆತ್ಮಹತ್ಯೆಗೆ ಯತ್ನಿಸಿಘಟನೆಗೆ ಆಕ್ರೋಷಿತ ಪ್ರತಿಭಟನಾಕಾರರು ಪುರಸಭೆಗೆ ಕಲ್ಲು‌ಎಸೆದು ಹಾನಿಗೊಳಿಸಿದ ಘಟನೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಭಟ್ಕಳ ಬಿಜೆಪಿ ಮುಖಂಡರು ಭಾನುವಾರ ಸ್ಪಷ್ಟಪಡಿಸಿದ್ದಾರೆ. 

ಈ ಕುರಿತಂತೆ ಪತ್ರಿಕಾಗೋಷ್ಟಿ ನಡೆಸಿದ ಮುಖಂಡರು ಭಟ್ಕಳದಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಾಕಾರರು ಪುರಸಭೆಗೆ ಕಲ್ಲುಹೊಡೆದಿದ್ದಾರೆಂದು ಆರೋಪಿಸಿ ಪೊಲೀಸರು ಬಿಜೆಪಿಯ ಕಾರ್ಯಕರ್ತರ ಮೇಲೆ ದಿನವೊಂದಕ್ಕೆ ಹೊಸ ಹೊಸ ಕೇಸ್ ದಾಖಲಿಸಿ ಅವರನ್ನು ಬಂಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಾವು ಅಮಾಯಕ ಅಂಗಡಿಕಾರರನ್ನು ಬೆಂಬಲಿಸುವ ಸಲುವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇವೆ ಹೊರತು ಯಾವುದೇ ಕಲ್ಲು ತೂರಾಟ ಮಾಡಲಿಕ್ಕಾಗಿ ಅಲ್ಲ ಎಂದು ಹೇಳಿರುವ ಮಾಜಿ ಶಾಸಕ ಜೆ.ಡಿ.ನಾಯ್ಕ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಿನಾಕಾರಣ ಎಳೆದು ತರುತ್ತಿದ್ದಾರೆ ಎಂದಿದ್ದಾರೆ. ಬಡ ಅಂಗಡಿ ಮಳಿಗೆಕಾರರನ್ನು ಖುಲ್ಲಾ ಪಡಿಸುವ ಸರ್ಕಾರದ ಯಾವುದೇ ಆದೇಶವಿಲ್ಲ. ಒಂದು ವೇಳೆ ಆದೇಶವಿದ್ದರೆ ಅದನ್ನು ತಂದು ತೋರಿಸಲಿ ಎಂದು ಪುರಸಭೆಗೆ ಸವಾಲೆಸೆದಿರುವ ಅವರು ಬಿಜೆಪಿಯವರ ಬಂಧನದ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದರು. 

ಈ ಸಂದರ್ಭದಲ್ಲಿ ಮಾತನಾಡಿದ ಭಟ್ಕಳ ಬಿಜೆಪಿ ಮಂಡಳ ಅಧ್ಯಕ್ಷ ರಾಜೇಶ್ ನಾಯ್ಕ ಬಿಜೆಪಿ ಕಾರ್ಯಕರ್ತರ ಮನೆಮನೆಗೆ ಹೋಗಿ ಪೊಲೀಸರು ದೌರ್ಜನ್ಯ ವೆಸಗುತ್ತಿದ್ದಾರೆ. ಇದು ಮುಂದುವರೆದರೆ ಮುಂದಿನ ದಿನಗಳಲ್ಲಿ ಭಟ್ಕಳ ಬಂದ್ ಗೆ ಕರೆ ನೀಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. 
ಈ ಸಂದರ್ಭದಲ್ಲಿ ಪರಮೇಶ್ವರ ದೇವಾಡಿಗ, ದತ್ತಾತ್ರೆಯ ನಾಯ್ಕ, ರಾಮನಾಯ್ಕ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. 

ಬಂಧನಕ್ಕಾಗಿ ಕಾದ ಪೊಲೀಸರು: ಪತ್ರಿಕಾಗೋಷ್ಟಿಗೆ ಗುರುವಾರ ದಾಂಧಲೆ ಮಾಡಿದ ವ್ಯಕ್ತಿಗಳು ಬರುತ್ತಾರೆಂದು ಅರಿತ ಪೊಲೀಸರು ಪತ್ರಿಕಾಗೋಷ್ಟಿ ನಡೆಯುತ್ತಿರುವ ಖಾಸಗಿ ಹೋಟೆಲ್ ಮುಂದೆ ಕಾದು ನಿಂತಿದ್ದರು. ಆದರೆ ಬಂಧನ ಸುಳಿವನ್ನು ಅರಿತ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಬಿಜೆಪಿ ಮುಖಂಡರು ಪತ್ರಿಕಾಗೋಷ್ಟಿಗೆ ಹಾಜರಾಗದೆ ಪತ್ರಿಕಾಗೋಷ್ಟಿಯಿಂದ ದೂರವುಳಿದಿದ್ದರು. 

ಗುರುವಾರ ನಡೆದ ಪ್ರತಿಭಟನೆಯಲ್ಲಿ ಕಲ್ಲುತೂರಾಟ, ಪೊಲೀಸರ ಮೇಲೆ ಹಲ್ಲೆ, ದರೋಡೆ ಮುಂತಾದ ಪ್ರಕರಣಗಳಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಸೇರಿದಂತೆ ೯೪ ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...