ಬಾಳೆಹೊನ್ನೂರು: ರಂಭಾಪುರಿ ಪೀಠದ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿನ ವಿಶೇಷ ಆಕರ್ಷಣೆ : ಹರಕೆ ನಂದಿ

Source: balanagoudra | By Arshad Koppa | Published on 24th February 2017, 2:05 PM | State News |

ಬಾಳೆಹೊನ್ನೂರು ಎಂಬುದು ಕೇವಲ ಹೆಸರಲ್ಲ.ಇದರ ಇತಿಹಾಸವನ್ನು ಕೆದಕುತ್ತಾ ಹೋದಂತೆ ಸವಿಸ್ತಾರವಾದ ಅರ್ಥ ಸಿಗುತ್ತದೆ.ಇದಕ್ಕೆ ಹಿಂದೆ ರಂಭಾಪುರೀ ಎಂದು ಹೆಸರಿತ್ತು.ರಂಭಾ ಎಂದರೆ ಬಾಳೆ ಎಂದರ್ಥ. ಪುರೀ ಎನ್ನುವುದು ಊರು ಎಂದರ್ಥ, ಕೊಡುತ್ತದೆ.ಬಾಳೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದ ಪ್ರದೇಶ ಇದಾಗಿದ್ದರಿಂದ ರಂಭಾಪುರೀ ಎಂದುಕರೆಯಲಾಗುತ್ತಿತ್ತು.


ಕಾಲಕ್ರಮೇಣ ಬಾಳೆಗೆ ಚಿನ್ನದ ಬೇಡಿಕೆ ಬಂದಿದ್ದರಿಂದ ಬಾಳೆಹೊನ್ನೂರು ಎಂಬ ಹೆಸರು ಪ್ರಚಲಿತಕ್ಕೆ ಬಂದಿತು.ರಂಭಾಪುರೀ ಪೀಠ ಇಲ್ಲಿರುವುದರಿಂದ ವಿಶ್ವಮಟ್ಟದಲ್ಲಿ ಬಾಳೆಹೊನ್ನೂರು ಪ್ರಸಿದ್ಧವಾಗಿದೆ.ಬಾಳೆಹೊನ್ನೂರು ರಂಭಾಪುರೀ ಪೀಠಕ್ಕೆ ಸುಮಾರು 2ಸಾವಿರ ವರ್ಷ ಇತಿಹಾಸವಿದೆ.ಬಾಳೆಹೊನ್ನೂರು ಎಂದಾಕ್ಷಣ ಶ್ರೀ ಜಗದ್ಗುರು ರಂಭಾಪುರೀ ವೀರಸಿಂಹಾಸನ ಮಹಾಪೀಠದ ನೆನಪು ಎಲ್ಲರಿಗೂ ಉಂಟಾಗುತ್ತದೆ.
 ಸೃಷ್ಠಿ ಸೌಂದರ್ಯಕ್ಕೆ ಹೆಸರಾದ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ಭದ್ರಾ ನದಿಯ ತಟದಲ್ಲಿ ರಂಭಾಪುರೀ ಪೀಠ ನೆಲೆಗೋಂಡಿದೆ.ಮಲಯಾಚಲ ಪರ್ವತ ಶ್ರೇಣ ಯ ಮಧ್ಯದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಶ್ರೀ ಜಗದ್ಗುರು ರಂಭಾಪರೀ ವೀರಸಿಂಹಾಸನವನ್ನು ಪ್ರತಿಷ್ಟಾಪಿಸಿದರು.


ಧಾರ್ಮಿಕ ಮತ್ತು ಸಾಮಾಜಿಕ ಸತ್ಕ್ರಾಂತಿಯಲ್ಲಿ ಅದ್ಬುತ ಸಾಧನೆಗೈದ ಶ್ರೀ ಜಗದ್ಗುರು ರೇವಣಸಿದ್ದರ ತರುವಾಯ ಶ್ರೀ ಜಗದ್ಗುರು ರಂಭಾಪುರೀ ಗುರುಪೀಠವನ್ನು ಆರೋಹಣ ಮಾಡಿದವರೇ ಭೂಗರ್ಭ ಸಂಜಾತ ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯರು.ಶ್ರೀ ಜಗದ್ಗುರು ರೇವಣಸಿದ್ದರ ಕರಕಮಲ ಸಂಜಾತರು.ನಂದಿವಾಹನ ಏರಿ ಧರ್ಮ ಸಂರಕ್ಷಣೆಯ ಮೇರುಮಣ ಯಾಗಿ ಶಿವಧರ್ಮವನ್ನು ಬೆಳಗಿಸಿದ ಮಹಾನುಭಾವ.ಕೊಟ್ಟರೆ ವರ ಇಟ್ಟರೆ ಶಾಪ ಎನ್ನುವ ಮಾತಿನಂತೆ ವಾಕ್ ಸಿದ್ದಿ ಪುರುಷರು.ಅವರು ಬರೆದಿಟ್ಟ ಭವಿಷತ್ತಿನ ಕಾಲಜ್ಞಾನ ಯಾವುದೂ ಸುಳ್ಳಾಗಿಲ್ಲ.ಶ್ರೀ ಜಗದ್ಗರು ರುದ್ರಮುನಿ ಶಿವಾಚಾರ್ಯರು ಕೈಗೊಂಡ ಧರ್ಮ ಸಂಗ್ರಾಮ ಜನಸಾಮಾನ್ಯರ ಬಾಳ ಬದುಕಿನಲ್ಲಿ ಹೊಸ ಬೆಳಕು ಮೂಡಿಸಿತು.ಅವರಲ್ಲಿರುವ ದೂರ ದೃಷ್ಟಿಮತ್ತು ಸಾಮಾಜಿಕ ಕಳಕಳಿ ಧಮೋತ್ತೇಜನಕ್ಕೆ ಕಾರಣವಾಗಿದೆ.ಶ್ರೀ ಕ್ಷೇತ್ರನಾತನಾಗಿ ಮತ್ತು ಗೋತ್ರಪುರುಷನಾಗಿ ಪೂಜೆಗೋಳ್ಳುವ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಭೂಗರ್ಭ ಸಂಜಾತ ಶ್ರೀ ಜಗದ್ಗರು ರುದ್ರಮುನಿ ಶಿವಾಚಾರ್ಯರು ಭಸ್ಮದಿಂದ ಒಂದು ನಂದಿ ವಿಗ್ರಹವನ್ನು ಬಿಡಿಸಿದ್ದಾರೆ.ಶ್ರೀ ವೀರಭದ್ರಸ್ವಾಮಿ ಸಾಕ್ಷಿಯಾಗಿ ಶಿಲಾಕಂಬದಲ್ಲಿ ಚಿತ್ರಿಸಿದ ನಂದಿಯಲ್ಲಿ ಶ್ರದ್ದೇಯಿಂದ ಮನzಲ್ಲಿÀ   ನಿವೇದಿಸಿಕೊಂಡಾಗ ಇಷಾರ್ಥಗಳು ನೇರವೇರುತ್ತವೆ.ಎಂಬ ಪ್ರತಿತಿ ಇದೆ.ಅಲ್ಲದೇ ಈ ಕಲ್ಲಿನಲ್ಲಿ ಕೆತ್ತಿರುವ ನಂದಿ ವಿಗ್ರಹ ಪರಿಪೂರ್ಣ ಬೆಳೆದಾಗ ನಾವೇ ಅವತರಿಸಿ ಬರುತ್ತೆವೆ ಎಂಬ ಉಲ್ಲೇಖವಿದೆ.
ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯರ ಶಿವಯೋಗ ಜೀವಂತ ಸಮಾಧಿ ಶ್ರೀ ಜಗದ್ಗುರು ರಂಭಾಪುರೀ ಗುರುಪೀಠದ ಜೀವನ್ಮುಕ್ತಿ ಸ್ಥಲದಲ್ಲಿ ಪುಜೆಗೊಳ್ಳುವುದು.ಈ ಗದ್ದುಗೆಯಲ್ಲಿ ಅದ್ಬುತವಾದ ಶಕ್ತಿಯಿದೆ.
ಅಶಾಂತಿಯಿಂದ ತತ್ತರಿಸುತ್ತಿರುವ ಜೀವಾತ್ಮರಿಗೆ ಶಾಂತಿ ಸಮಧಾನ ಸಂತೃಪ್ತಿ ಮನೋಭಾವ ತುಂಬಿ ತರುವ ಪವಿತ್ರ ತಪೋತಾಣವಾಗಿದೆ.ನಂಬಿನಡೆದುಕೊಳ್ಳುವ ಭಕ್ತರಿಗೆ ಮನದ
ಇಷ್ಟಾರ್ಥಗಳನ್ನು ಪೂರೈಸುವಂಥ ಸ್ಥಾನವಾಗಿರುವ ಹರಕೆ ನಂದಿ ಇಲ್ಲೀನ ವಿಶೇಷ ಆಕರ್ಷಣೆಯಾಗಿದೆ.
ಮಲೆನಾಡಿನಲ್ಲಿ ಪ್ರವಾಸಿಗರ ಸಂಖ್ಯೆ ದಿನೆ ದಿನೆ ಹೆಚ್ಚಳವಾಗುತ್ತಿಗೆ ಬಾಳೆಹೊನ್ನೂರು ಪ್ರಮುಖ ಸಂಚಾರಿ ಕೇಂದ್ರವಾಗಿರುವುದರಿಂದ ರಂಭಾಪುರಿ ಪೀಠ,ಹೋರನಾಡು,ಕಳಸ,ಧರ್ಮಸ್ಥಳ,ಶೃಂಗೇರಿ,ಮುತ್ತೋಡಿ,ಭದ್ರಾ ಅಭಯಾರಣ್ಯ,ಕುಪ್ಪಳ್ಳಿ,ಶಿರಿಮನೆಫಾಲ್ಸ್,ಹೆಬ್ಬೇಫಾಲ್ಸ್,ಶಂಕರ್ ಫಾಲ್ಸ್,ಹನುಮಾನ್ ಫಾಲ್ಸ್,ಕುದರೆಮುಖ ಸಂಚರಿಸುವವರು ಈ ಮಾರ್ಗದ ಮೂಲಕ ಹೋಗಬೇಕಾಗಿದೆ.ಹಾಗೂ
ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳವರ ಪೀಠಾರೋಹಣದ ರಜತಮಹೋತ್ಸವ ಹಾಗೂ ಷಟ್ಟಭ್ದಿ ಪೂರ್ತಿ ಶಾಂತಿ ಸಮಾರಂಭದ ಹಿನ್ನಲೇಯಲ್ಲಿ  ಶ್ರೀ ಪೀಠದಲ್ಲಿ 61ದಿನ ಮಹಾರುದ್ರಯಾಗ ಪೂಜೆ ನಡೆಯುತ್ತಿದೆ.ಮಾರ್ಚ್ 8ರಿಂದ 14ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, ಶ್ರೀ ಪೀಠಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ. ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ.  

                                                                                                                                                                                                

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...