ಮೀಟರ್‍ಬಡ್ಡಿ,ಲೇವಾದೇವಿದಾರರ ಉಪಟಳದಿಂದ ಮಹಿಳೆಯರನ್ನು ಪಾರುಮಾಡಲು ಡಿಸಿಸಿ ಬ್ಯಾಂಕಿನಿಂದ ಶೂನ್ಯಬಡ್ಡಿ ಸಾಲ ಸೌಲಭ್ಯ ನೀಡಿಕೆ-ಬ್ಯಾಲಹಳ್ಳಿ ಗೋವಿಂದಗೌಡ 

Source: sonews | By Staff Correspondent | Published on 11th July 2019, 11:11 PM | State News | Don't Miss |

ಕೋಲಾರ: ಮೀಟರ್ ಬಡ್ಡಿ ದಂಧೆಕೋರರು ಹಾಗೂ ಬಡ್ಡಿ ಲೇವಾದೇವಿದಾರರನ್ನು ನಿಯಂತ್ರಣ ಮಾಡುವ ಉದ್ದೇಶ ಹಾಗೂ ಆರ್ಥಿಕ ಸಬಲತೆಗಾಗಿ ಮಹಿಳೆಯರಿಗೆ ಶೂನ್ಯ ಬಡ್ಡಿದರಲ್ಲಿ ಸಾಲ ವಿತರಿಸುತ್ತಿರುವುದಾಗಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.

ಗುರುವಾರ ತಾಲ್ಲೂಕಿನ ಕಡಗಟ್ಟೂರು ರೇಷ್ಮೆ ಬೆಳೆಗಾರರ ಸಹಕಾರ ಸಂಘದಿಂದ ಕುರಗಲ್ ಗ್ರಾಮದಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.

ಖಾಸಗಿಯವರ ಬಳಿ ಸಾಲ ಪಡೆದುಕೊಳ್ಳಬೇಕಾದರೆ ಶೇ.5ರಷ್ಟು ಬಡ್ಡಿ ಕಟ್ಟಬೇಕು. ಒಂದು ಸಕಾಲಕ್ಕೆ ಬಡ್ಡಿ ಪಾವತಿ ಮಾಡದಿದ್ದರೆ ಹಿಂಸೆ ಕೊಟ್ಟು ವಸೂಲಿ ಮಾಡುತ್ತಾರೆ ಎಂದರು.

ಒಂದು ಮನೆಯಲ್ಲಿ ಸಾವು ಸಂಭವಿಸಿದ್ದರೂ ಬಿಡುವುದಿಲ್ಲ, ಆಸ್ತಿಯನ್ನಾದರೂ ಅಡಮಾನ ಇಟ್ಟುಕೊಳ್ಳುತ್ತಾರೆ. ಜತೆಗೆ ಜಮೀನು, ವಾಹನದ ದಾಖಲೆಗಳನ್ನು ಕಿತ್ತುಕೊಂಡು ಹೋಗುತ್ತಾರೆ. ಇಂತಹ ಪರಿಸ್ಥಿತಿಯಿಂದ ಮಹಿಳೆಯರನ್ನು ದೂರ ಮಾಡಿ ಅವರು ಸ್ವಾಭಿಮಾನದಿಂದ ಬದುಕು ನಡೆಸಲು ಆರ್ಥಿಕ ಸಹಕಾರ ನೀಡಲು ಡಿಸಿಸಿ ಬ್ಯಾಂಕ್ ಮುಂದೆ ಬಂದಿದೆ ಎಂದರು.

ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆಯುವುದನ್ನು ನಿಲ್ಲಿಸಬೇಕು, ನಿಮ್ಮ ಆರ್ಥಿಕ ಅಭಿವೃದ್ಧಿಗಾಗಿ ಬ್ಯಾಂಕ್ ಸಂಕಲ್ಪ ಮಾಡಿದ್ದು, ಅಗತ್ಯ ಸಾಲ ನೀಡಲಾಗುವುದು, ಅಷ್ಟೇ ಪ್ರಾಮಾಣಿಕವಾಗಿಯೂ ನೀವು ಮರುಪಾವತಿ ಮಾಡುವ ಮೂಲಕ ನಂಬಿಕೆ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೊದಲು ಕಡಿಮೆ ಪ್ರಮಾಣದಲ್ಲಿ ಮಹಿಳಾ ಸಂಘಗಳಿಗೆ ಸಾಲ ನೀಡಲಾಗಿತ್ತು, ಪ್ರಾಮಾಣಿಕವಾಗಿ ಮರುಪಾವತಿ ಮಾಡಿದ ಹಿನ್ನಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಲಾಗಿದೆ, ಅಪಪ್ರಚಾರಕ್ಕೆ ಒಳಗಾಗಿ ಸಾಲ ಕಟ್ಟದಿದ್ದರೆ ಬಡ್ಡಿಯ ಹೊರೆ ಬೀಳುವ ಮೂಲಕ ನೀವೇ ತೊಂದರೆಗೆ ಸಿಲುಕುತ್ತೀರಿ ಎಂದು ಎಚ್ಚರಿಸಿದರು.

ಸಾಲ ಮನ್ನಾದಂತಹ ವದಂತಿಗಳನ್ನು ಕೆಲವರು ಹಬ್ಬಿಸುತ್ತಾರೆ, ಅಲ್ಲದೆ ಬ್ಯಾಂಕ್ ವಿರುದ್ಧ ಮಾತನಾಡುತ್ತಾರೆ, ಅವರ ಬಾಯಿ ಮುಚ್ಚಿಸುವ ಕೆಲಸ ಮಹಿಳೆಯರು ಮಾಡಬೇಕು ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್, ರೇಷ್ಮೆ ಬೆಳೆಗಾರರ ಸಹಕಾರ ಸಂಘದ ವ್ಯಾಪ್ತಿಯ 22 ಮಹಿಳಾ ಸಂಘಗಳಿಗೆ 1ಕೋಟಿ 80 ಸಾವಿರ ರೂ ವಿತರಣೆ ಮಾಡಲಾಗುತ್ತಿದ್ದು, ಸಾಲವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಎಂದು ಸಲಹೆ ನೀಡಿದರು.

ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಸಾಲ ನೀಡಲಾಗುತ್ತಿತ್ತು, ಇದರಿಂದ ಸಾಕಷ್ಟು ಮಂದಿ ಮಹಿಳೆಯರು ಕುರಿ, ಹಸು ತೆಗೆದುಕೊಂಡು ಆರ್ಥಿಕವಾಗಿ ಸಬಲರಾದವರನ್ನು ನೋಡಿದ್ದೇವೆ,  ಈಗ ಬ್ಯಾಂಕಿನಲ್ಲಿ ಚಿನ್ನಾಭರಣದ ಮೇಲೂ ಶೇ.3ಕ್ಕೆ ಸಾಲ ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳಲು ಮಹಿಳೆಯರು ಮುಂದಾಗಬೇಕು ಎಂದು ಕೋರಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಯಲವಾರ ಸೋಣ್ಣೆಗೌಡ, ಬ್ಯಾಂಕಿನಿಂದ ಪಡೆದುಕೊಂಡ ಸಾಲವನ್ನು ಯಾವ ಉದ್ದೇಶಕ್ಕೆ ಪಡೆದಿದ್ದೀರೋ ಅದೇ ಉದ್ದೇಶಕ್ಕೆ ಬಳಸಿಕೊಂಡು ಬದುಕು ರೂಪಿಸಿಕೊಳ್ಳಿ, ಸಮಯಕ್ಕೆ ಮರುಪಾವತಿ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಬ್ಯಾಂಕ್ ವಿರುದ್ಧ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ. ಇದು ಯಾವುದಕ್ಕೂ ಮಹಿಳೆಯರು ಕಿವಿಗೋಡಬಾರದು, ಪ್ರಾಮಾಣಿಕವಾಗಿ ಮರುಪಾವತಿ ಮಾಡುವ ಮೂಲಕ ಮುಂದೆ ಹೆಚ್ಚಿಗೆ ಸಾಲ ಸಿಗುವುದರ ಜತೆಗೆ ಬೇರೆಯವರಿಗೂ ಸಾಲ ನೀಡಬಹುದು ಎಂದರು.

ಸಭೆಯಲ್ಲಿ ರೇಷ್ಮೆ ಬೆಳೆಗಾರರ ಸಹಕಾರ ಸಂಘದ ನಿರ್ದೇಶಕರಾದ ಶ್ರೀನಿವಾಸ, ಕೃಷ್ಣಪ್ಪ, ಡಿ.ಶ್ರೀನಿವಾಸ್, ಮುನಿರಾಜು, ನಾರಾಯಣಮ್ಮ, ಸಹಕಾರಿ ಯೂನಿಯನ್ ನಿರ್ದೇಶಕ ವೆಂಕಟೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುನೇಶ್, ಕಾರ್ಯದರ್ಶಿ ನಾಗೇಶ್, ಲೆಕ್ಕಾಧಿಕಾರಿ ಶ್ರಾವಂತಿ ಹಾಜರಿದ್ದರು. 


 

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...