ಮಹಿಳಾ ಮೀಸಲಾತಿ ಮಸೂದೆ ತಕ್ಷಣ ಜಾರಿ ಸಾಧ್ಯವಿಲ್ಲ: ಬಿಜೆಪಿ

Source: Vb | By I.G. Bhatkali | Published on 22nd September 2023, 7:15 PM | National News |

ಹೊಸದಿಲ್ಲಿ,: ಮುಂಬರುವ ಚುನಾವಣೆಗಾಗಿ ಸಕಾಲದಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವುದು ಅಸಾಧ್ಯ ಎಂದು ಗುರುವಾರ ಹೇಳಿದ ಬಿಜೆಪಿಯು, 2029ರ ಚುನಾವಣೆಗೆ ಅದನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದೆ.

'ನೀವು ಇಂದು ಈ ಮಸೂದೆಯನ್ನು ಅಂಗೀಕರಿಸಿದರೆ 2029ರಲ್ಲಿ ಈ ಸದನದಲ್ಲಿ ಮಹಿಳಾ ಮೀಸಲಾತಿ ಕೋಟಾದ ಸದಸ್ಯೆಯರು ಇರುತ್ತಾರೆ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ' ಎಂದು ಬಿಜೆಪಿ ಅಧ್ಯಕ್ಷರೂ ಆಗಿರುವ ಜೆ.ಪಿ.ನಡ್ಡಾ ರಾಜ್ಯಸಭೆಯಲ್ಲಿ ಮಸೂದೆ ಮೇಲೆ ಚರ್ಚೆ ಸಂದರ್ಭದಲ್ಲಿ ಹೇಳಿದರು.

ಮುಂದಿನ ವರ್ಷದ ಎಪ್ರಿಲ್-ಮೇ ಅವಧಿಯಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳಿಗೆ ಮೊದಲು ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲು ಜನಸಂಖ್ಯಾ ದತ್ತಾಂಶಗಳ ಅನುಪಸ್ಥಿತಿ ಸೇರಿದಂತೆ ಕೆಲವು ಕಾನೂನು ಅಡೆತಡೆಗಳಿವೆ ಎಂದು ನಡ್ಡಾ ತಿಳಿಸಿದರು.

ಸಾಮಾನ್ಯವಾಗಿ ಯಾವುದೇ ಗುಂಪು ಅಥವಾ ಸಮುದಾಯಕ್ಕೆ ಮೀಸಲಾತಿಯು ಜನಸಂಖ್ಯೆಯಲ್ಲಿ ಅವರ ಶೇಕಡಾವಾರು ಪ್ರಮಾಣವನ್ನು ಆಧರಿಸಿರುತ್ತದೆ. ಉದಾಹರಣೆಗೆ ಕೇಂದ್ರ ಸರಕಾರದ ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿಗಳ ಸದಸ್ಯರಿಗೆ ಶೇ.15ರಷ್ಟು ಮೀಸಲಾತಿಯನ್ನು ನೀಡಲಾಗಿದೆ ಮತ್ತು ಜನಗಣತಿ ದತ್ತಾಂಶಗಳಂತೆ ಒಟ್ಟು ಜನಸಂಖ್ಯೆಯಲ್ಲಿ ಅವರ ಉಪಸ್ಥಿತಿ ಸರಿಸುಮಾರು ಅಷ್ಟೇ ಇದೆ. ಹೀಗಾಗಿ ಯಾವುದೇ ಮೀಸಲಾತಿಯನ್ನು ನೀಡುವ ಮುನ್ನ ಜನಸಂಖ್ಯೆ ದತ್ತಾಂಶಗಳನ್ನು ಹೊಂದಿರುವುದು ಮುಖ್ಯವಾಗಿದೆ ಎಂದರು.

ಜನಗಣತಿಯನ್ನು ನಡೆಸಬೇಕು. ಅರೆ-ನ್ಯಾಯಾಂಗ ಸಂಸ್ಥೆಯ ಮೂಲಕ ಸಾರ್ವಜನಿಕ ಅಭಿಪ್ರಾಯಗಳನ್ನು ಸಂಗ್ರಹಿಸಬೇಕು, ಸ್ಥಾನಗಳನ್ನು ಆಯ್ಕೆ ಮಾಡಬೇಕು, ಸ್ಥಾನಗಳ ಸಂಖ್ಯೆಯನ್ನು ನಿರ್ಧರಿಸಬೇಕು ಮತ್ತು ಇವೆಲ್ಲದರ ನಂತರ ಮುಂದುವರಿಯಬೇಕಾಗುತ್ತದೆ ಎಂದು ನಡ್ಡಾ ಹೇಳಿದರು. ಯಾವ ಕ್ಷೇತ್ರವನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ ಮತ್ತು ಯಾವ ಕ್ಷೇತ್ರಗಳು ಸಾಮಾನ್ಯ ವರ್ಗದಲ್ಲಿರಲಿವೆ ಎನ್ನುವುದನ್ನು ಇಂದಿನ ಸರಕಾರವು ನಿರ್ಧರಿಸಲು ಸಾಧ್ಯವಿಲ್ಲ ಎಂದು ಬೆಟ್ಟು ಮಾಡಿದ ಅವರು, 'ಇದನ್ನು ಅರೆ-ನ್ಯಾಯಾಂಗ ಸಂಸ್ಥೆಯು ಮಾಡಬೇಕು. ನಾವು ಇಂತಹ ಸಂಸ್ಥೆಯನ್ನು ನಾಮನಿರ್ದೇಶನ ಮಾಡಬೇಕು. ಇಲ್ಲದಿದ್ದರೆ ನಾನು ವಯನಾಡ್ ಕ್ಷೇತ್ರವನ್ನು ಮಹಿಳೆಯರಿಗೆ ಮೀಸಲಿರಿಸು ವುದನ್ನು ಯಾವುದು ತಡೆಯಬಲ್ಲದು? ನಾನು ಅಮೇಥಿ ಕ್ಷೇತ್ರವನ್ನು ಮಹಿಳೆಯರಿಗಾಗಿ ಮೀಸಲಿರಿಸಿದರೆ? ಎಂದು ಪ್ರಶ್ನಿಸಿದರು.
 

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...