ಕಾರವಾರ: ಜ. 19 ರಂದು ಮಹಿಳಾ ಸಾಂಸ್ಕøತಿಕ ಉತ್ಸವ

Source: S.O. News service | By JD Bhatkali | Published on 16th January 2021, 7:58 PM | Coastal News | Don't Miss |

ಕಾರವಾರ: ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಜಿಲ್ಲಾ ರಂಗ ಮಂದಿರದಲ್ಲಿ ಜ.19 ರಂದು ಬೆಳಗ್ಗೆ 10ಕ್ಕೆ ಮಹಿಳಾ ಸಾಂಸ್ಕøತಿಕ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

ಮಹಿಳಾ ಸಾಂಸ್ಕøತಿಕ ಉತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಉದ್ಘಾಟಿಸಲಿದ್ದು, ಶಾಸಕಿ ರೂಪಾಲಿ ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪದ್ಮಶ್ರಿ ಪುರಸ್ಕøತರಾದ ಸುಕ್ರಿ ಬೊಮ್ಮು ಗೌಡ ಹಾಗೂ ತುಳಸಿ ಗೌಡ ಅವರನ್ನು ಸನ್ಮಾನಿಸಲಾಗುತ್ತದೆ. ನಂತರ ವಿವಿಧ ಕಲಾ ತಂಡಗಳಿಂದ ಕೃಷ್ಣ ರಾಸಲೀಲಾ ನೃತ್ಯ, ಭರತ ನಾಟ್ಯ ಸುಗಮ ಸಂಗೀತ, ಪುಗಡಿ ನೃತ್ಯ, ಜನಪದ ಸಂಗೀತ, ಲಾವಣಿ, ಜಾನಪದ ನೃತ್ಯ, ಗಾರುಡಿ ಗೊಂಬೆ ಕುಣಿತ, ಕೋಲಾಟ, ಡಮಾಮಿ ನೃತ್ಯ, ಸೂತ್ರದ ಗೊಂಬೆಯಾಟ, ಡೊಳ್ಳು ಕುಣಿತ, ಸಿದ್ದಿ ಕಟ್ಟಿ ನೃತ್ಯ, ಗೀಗೀ ಪದ/ಲಾವಣಿ, ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಅಲ್ಲದೇ ಮಹಿಳೆಯರಿಗಾಗಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಮೆಹಂದಿ, ಚಿತ್ರಕಲಾ ಸ್ಪರ್ಧೆ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 4 ವರೆಗೆ ರಂಗೋಲಿ ಸ್ಪರ್ಧೆ ಎರ್ಪಡಿಸಲಾಸಲಾಗಿದೆ. ಸ್ಪರ್ಧೆಯಲ್ಲಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ ನೀಡಲಗುವುದು, ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯ ನಿರ್ದೇಶಕ ಎನ್.ಜಿ ನಾಯ್ಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next