ಮಾದಕ ದ್ರವ್ಯ ಮಾಫಿಯಾ, ಅನಿಯಂತ್ರಿತ ಅಶ್ಲೀಲತೆಯ ವಿರುದ್ದ ಕ್ರಮಕ್ಕೆ ಆಗ್ರಹಿಸಿ ವುಮೆನ್ ಇಂಡಿಯಾ ಮೂವ್‍ಮೆಂಟ್ ಪ್ರತಿಭಟನೆ

Source: S.O. News Service | By Manju Naik | Published on 17th July 2019, 7:10 PM | Coastal News | Don't Miss |

ಮಂಗಳೂರು : ಭಾರತ ದೇಶ ಅತಿ ದೊಡ್ಡ ಮಾನವ ಸಂಪನ್ಮೂಲ ಹೊಂದಿರುವ ದೇಶ. ಹಾಗೆಯೇ ಅತ್ಯದಿಕ ಯುವ ಸಂಪತನ್ನು ಹೊಂದಿರುವಂತಹ ದೇಶವಾಗಿದೆ. ಈ ಯುವ ಸಂಪತ್ತು ಭಾರತದ ಸರ್ವತೋಮುಖ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕು. ಪ್ರತಿಯೊಂದು ದೇಶದ ಅಭಿವೃದ್ದಿಯಲ್ಲಿ ಮಾನವ ಸಂಪನ್ಮೂಲವೇ ಪ್ರಮುಖವಾಗಿರುತ್ತದೆ. ಸದೃಡ ಆರ್ಥಿಕ, ಸಾಮಾಜಿಕ, ರಾಜಕೀಯ ಶೈಕ್ಷಣಿಕ, ಸಾಂಸ್ಕøತಿಕ ವ್ಯವಸ್ಥೆಗಳಿದ್ದರೂ ಆರೋಗ್ಯವಂತ ಮಾನವ ಸಂಪನ್ಮೂಲವು ಅತೀ ಅಗತ್ಯ. ಇದರಿಂದಾಗಿಯೇ ದೇಶವು ಸಂಪತ್ತಿನ ಬಹುಪಾಲನ್ನು ಆರೋಗ್ಯ ಕ್ಷೇತ್ರಕ್ಕೆ ವೀಸಲಿಡುತ್ತಿದೆ. ಆದರೆ ರಾಷ್ಟ್ರೀಯ ಅಪರಾಧ ಬ್ಯೂರೋ ಪ್ರಕಾರ ನಮ್ಮ ದೇಶ ಮತ್ತು ರಾಜ್ಯದಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಬಹಳಷ್ಟು ಆಘಾತಕಾರಿಯಾಗಿದೆ. ಕಳೆದ 10 ವರ್ಷಗಳಲ್ಲಿ ಸಣ್ಣ ವಯೋಮಾನದ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸುಮಾರು 25,426 ಜನರು ಡ್ರಗ್ಸ್ ಮತ್ತು ಮಾದಕ ವ್ಯಸನದ ಕಾರಣದಿಂದ ಆತ್ಮಹತ್ಯೆ ಗೈದಿದ್ದಾರೆ. (ಒಟ್ಟಾರೆ ಸರಾಸರಿ 25,426 ರಷ್ಟು ಪ್ರತಿ ವರ್ಷಕ್ಕೆ) ಜಗತ್ತಿನ ಪ್ರತಿ ನಾಲ್ಕು ಸಾವುಗಳಲ್ಲಿ ಒಂದು ಸಾವು ಡ್ರಗ್ಸ್ ಗೆ ಸಂಭಂದಿಸಿದ್ದಾಗಿರುತ್ತದೆ. ನಮ್ಮ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಇಂದು ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುವುದು ಬಹಳ ಖೇದಕರ ವಿಚಾರವಾಗಿದೆ. ಕೆಲವೊಂದು ಪ್ರತಿಷ್ಠಿತ ಕಾಲೇಜುಗಳಲ್ಲಿ ಎಗ್ಗಿಲ್ಲದೇ ಮಾದಕ ದ್ರವ್ಯಗಳು ದೊರೆಯುತ್ತಿರುವುದರಿಂದ ಯುವ ಸಮುದಾಯ ಈ ಚಟಕ್ಕೆ ಬಲಿಯಾಗಿ ಅಲ್ಲಲ್ಲಿ ಅತ್ಯಾಚಾರ, ಅಪರಾದ, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದೆ.
ಕರ್ನಾಟಕ ರಾಜ್ಯ ಟೆಂಪರೆನ್ಸಿ ಬೋರ್ಡ್‍ನ ಚೇರ್‍ಮ್ಯಾನ್ ಸಚ್ಚಿದಾನಂದ ಹೆಗ್ಗಡೆಯವರು ಹೇಳುತ್ತಾರೆ ``ಲಯನ್ಸ್ ಸಂಸ್ಥೆಗಳ ಸಂಶೋಧನಾ ವರದಿಗಳ ಪ್ರಕಾರ ಬೆಂಗಳೂರಿನ ಶೇ.30 ರಷ್ಟು ವಿಧ್ಯಾರ್ಥಿಗಳು ಮಾದಕ ದ್ರವ್ಯ ವ್ಯಸನಿಗಳಾಗಿರುತ್ತಾರೆ. ಇದರಲ್ಲಿ ಹೈಸ್ಕೂಲ್, ಕಾಲೇಜು, ವೈಧ್ಯಕೀಯ ಮತ್ತು ತಾಂತ್ರಿಕ ವಿಧ್ಯಾರ್ಥಿಗಳು ಒಳಗೊಂಡಿರುತ್ತಾರೆ ಎಂಬುದು ಆಘಾತಕಾರಿ ವಿಚಾರವಾಗಿದೆ. ಮಾತ್ರವಲ್ಲದೇ ವರ್ಷಂಪ್ರತಿ ಶೇ. 15ರಷ್ಟು ಮಾದಕ ವ್ಯಸನಿಗಳು ಹೆಚ್ಚುತ್ತಿದ್ದಾರೆ ಎಂಬುದು ಕಳವಳಕಾರಿಯಾದ ವಿಚಾರವಾಗಿದೆ.” ಹಾಗೆಯೇ ಹೊಸ ಸಂಶೋಧನೆಯ ಪ್ರಕಾರ ಅತ್ಯದಿಕ ದಾಖಲೆ ಮಟ್ಟದಲ್ಲಿ ಆತ್ಮಹತ್ಯೆ ಗೈಯುತ್ತಿರುವುದು ಯುವಕರು ಕಾರಣ ಮಾದಕ ದ್ರವ್ಯಗಳ ಉಪಯೋಗವಾಗಿದೆ.
ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಇತರ ಪ್ರತಿಷ್ಠಿತ ನಗರಗಳಾದ ಮೈಸೂರು, ಮಂಗಳೂರು, ಬೆಳಗಾವಿ ಮುಂತಾದ ಕಡೆಗಳಲ್ಲಿ ಮಾದಕ ದ್ರವ್ಯಗಳಿಂದ ಅಪರಾಧ ಕ್ರತ್ಯಗಳು ಬೆಳಕಿಗೆ ಬರುತ್ತಿದೆ. ಮಾದಕ ದ್ರವ್ಯ ಸೇವನೆಗಳ ಹೆಚ್ಚಳದಿಂದ ಆತ್ಮವಿಶ್ವಾಸದ ಕೊರತೆ, ಇಚ್ಚಾಶಕ್ತಿಯ ಕೊರತೆ, ಆರೋಗ್ಯ ಸಮಸ್ಯೆಗಳ ಮಾನಸಿಕ ಅಸಮತೋಲನಗಳು, ಅನಿಯಂತ್ರಿತ ಅಶ್ಲೀಲತೆಗಳು  ಉಂಟಾಗುತ್ತದೆ. 
ಬುದ್ದಿವಂತರ ಜಿಲ್ಲೆಯಂದೇ ಪ್ರಖ್ಯಾತಿಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆ ಅದರಲ್ಲೂ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿ ಯೋಜನೆಗಳ ಕಾರ್ಯಗತದಲ್ಲಿರುವ ಮಂಗಳೂರು ನಗರ ಮಾದಕ ದ್ರವ್ಯವೆಂಬ ಅಪಾಯಕಾರಿ ಮಾಫಿಯಾಕ್ಕೆ ತುತ್ತಾಗಿರುವುದು ಸತ್ಯದ ವಿಚಾರ. ನಗರ ಪ್ರದೇಶ ಮಾತ್ರವಲ್ಲದೇ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೂ ಡ್ರಗ್ಸ್ ಹಾವಳಿ ಹೆಚ್ಚಾಗುತ್ತಿದ್ದು ಈ ಮಾದಕ ದ್ರವ್ಯ ಮಾಫಿಯಾ ಯುವ ಜನಾಂಗವನ್ನು ಅದರಲ್ಲೂ ವಿದ್ಯಾರ್ಥಿ – ವಿದ್ಯಾರ್ಥಿನಿಯರನ್ನೇ ಗುರಿಯಾಗಿಸಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದೆ.
ಜಿಲ್ಲೆಯ ಪ್ರತಿಷ್ಠಿತ ಕಾಲೇಜು ಕ್ಯಾಂಪಸ್ ಗಳಲ್ಲಿ ವ್ಯವಸ್ಥಿತವಾಗಿ ಮಾದಕ ದ್ರವ್ಯದ ಮಾರಾಟ ಮತ್ತು ಸೇವನೆ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಅನಿಯಂತ್ರಿತವಾಗಿ ಅಶ್ಲೀಲತೆಗಳು ಮತ್ತು ಅಪರಾಧ ಪ್ರಕರಣಗಳು ಹೆಚ್ಚಾಗ ತೊಡಗಿರುವುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಡ್ರಗ್ಸ್ ಸೇವಿಸುವ ಪ್ರಕ್ರಿಯೆ ಹೆಚ್ಚಾಗುತ್ತಿದ್ದು, ಇದರ ನಿವಾರಣೆಗೆ ವಿಶೇಷ ತಂಡ ರಚಿಸುವಂತೆ ಮಹಿಳಾ ಆಯೋಗ ಈ ಹಿಂದೆಯೇ ಸರಕಾರವನ್ನು ಆಗ್ರಹಿಸಿತ್ತು. ಆದರೆ ಇದರ ಬಗ್ಗೆ ಯಾವುದೇ ಕ್ರಮವು ಜರಗಲಿಲ್ಲ ಎಂಬುವುದು ಖೇಧಕರ ಸಂಗತಿ.
ಮಂಗಳೂರು ನಗರ ಪ್ರದೇಶದಲ್ಲಿ ಮಾದಕ ವಸ್ತುಗಳ ಮಾಫಿಯಾ ಜಾಲ ವ್ಯಾಪಕವಾಗಿದೆ. ಕೇರಳ, ಗೋವಾ, ಮಹಾರಾಷ್ಟ್ರ ಕಡೆಯಿಂದ ರೈಲಿನ ಮೂಲಕ ಗಾಂಜಾ, ಹೆರಾಯೀನ್, ಬ್ರೌನ್ ಶುಗರ್ ಮೊದಲಾದ ಮಾದಕ ವಸ್ತುಗಳು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಪೂರೈಕೆಯಾಗುತ್ತಿದೆ. ಈ ಎಲ್ಲಾ ವಿಚಾರವನ್ನು ಮುಂದಿಟ್ಟು ಕೊಂಡು ವಿಮ್ ಪ್ರತಿಭಟಣೆ ನಡೆಸುತ್ತಿದೆ. ಆದುದರಿಂದ ಪೊಲೀಸ್ ಇಲಾಖೆ ಮತ್ತು ಸರಕಾರ ಈ ಬಗ್ಗೆ ಮಾದಕ ದ್ರವ್ಯ ಮಾಫಿಯಾದ ಮೂಲವನ್ನೇ ಕಂಡು ಹಿಡಿದು ಮಾರಾಟ ಮತ್ತು ಸೇವನೆ ಮಾಡುವವರ ಮೇಲೆ ಕಠಿಣ ಕಾನೂನು ಕ್ರಮ ಜರಗಿಸಬೇಕು ಮತ್ತು ಮಾದಕ ದ್ರವ್ಯ ಮಾಫಿಯಾದಿಂದ ಜಿಲ್ಲೆಯಲ್ಲಿ ಆವರಿಸಿರುವ ಅನಿಯಂತ್ರಿತ ಅಶ್ಲೀಲತೆಯನ್ನು ತಡೆಗಟ್ಟಲು ವಿಶೇಷ ಕ್ರಮ ಜರಗಿಸಬೇಕು 
ಅದೇ ರೀತಿ ಶಾಲಾ ಕಾಲೇಜಿನ 100 ಮೀ ವ್ಯಾಪ್ತಿಯಲ್ಲಿ ತಂಬಾಕು ನಿಷೇದವಿದ್ದರು ಹಲವು ಕಡೆಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಈ ಬಗ್ಗೆಯು ಸ್ಥಳೀಯ ಪೊಲೀಸರಲ್ಲದೇ ಜಿಲ್ಲೆಯಿಂದ ವಿಶೇಷ ಪೊಲೀಸ್ ತಂಡವನ್ನು ರಚಿಸಿ ಪರಿಶೀಲಿಸಿ ಕಾನೂನು ಕ್ರಮ ಜರಗಿಸಬೇಕೆಂದು ವುಮೆನ್ ಇಂಡಿಯಾ ಮೂವ್ ಮೆಂಟ್ ಈ ಪ್ರತಿಭಟಣೆಯ ಮೂಲಕ ಆಗ್ರಹಿಸುತ್ತಿದ್ದೇವೆ.
 

Read These Next

ಸರಳ ವ್ಯಕ್ತಿಗೆ ಒಲಿದು ಬಂದ ಪಕ್ಷದ ದೊಡ್ಡ ಹುದ್ದೆ; ನೂತನ ಅಧ್ಯಕ್ಷರ ಮುಂದಿದೆ ಹಲವಾರು ಸವಾಲುಗಳು ಜಿಲ್ಲಾ ಬಿಜೆಪಿಗೆ ‘ನಾಯಕ’ರಾದ ‘ವೆಂಕಟೇಶ’

ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಕೊನೆಗೂ ಹೆಸರನ್ನು ಪ್ರಕಟಿಸಲಾಗಿದೆ. ಕುಮಟಾದ ...

ಜ.30ರಿಂದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಆಯೋಜನೆ: ಮಾಜಿ ಶಾಸಕ ಸತೀಶ್ ಸೈಲ್ ಮಾಹಿತಿ; ಫೆ.6ರಿಂದ ಕಾರವಾರದಲ್ಲಿ ಕರುನಾಡ ಕರಾವಳಿ ಉತ್ಸವ

‘ಫೆಬ್ರುವರಿ 6, 7, 8 ಹಾಗೂ 9ರಂದು ಕರುನಾಡ ಕರಾವಳಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ವಿವಿಧ ಸ್ಪರ್ಧಾ ...

ಶಾಹೀನ್ ಬಾಗ್ ಪ್ರತಿಭಟನಾಕಾರರ ಕುರಿತಂತೆ ಬಿಜೆಪಿ ಸಂಸದನಿಂದ ಅವಹೇಳನಕಾರಿ ಹೇಳಿಕೆ

ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದೇ ಆದಲ್ಲಿ ಶಹೀನ್ ಬಾಗ್ ಪ್ರದೇಶದಲ್ಲಿ ಕಳೆದ ಹಲವಾರು ...