ನರೇಗಾ ಯೋಜನೆ: ಕೇಂದ್ರ ದಿಂದ 8,305 ಕೋ.ರೂ.ಗೂ ಹೆಚ್ಚು ಬಾಕಿ

Source: Vb | By I.G. Bhatkali | Published on 29th December 2022, 8:49 AM | National News |

ಹೊಸದಿಲ್ಲಿ: ಕೇಂದ್ರ ಸರಕಾರವು ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ)ಯಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 8,305 ಕೋ.ರೂ.ಗೂ ಹೆಚ್ಚಿನ ಮೊತ್ತವನ್ನು ಬಾಕಿಯಿರಿಸಿದೆ ಎಂದು ಬುಧವಾರ ಸರಕಾರದ ಅಂಕಿಅಂಶಗಳು ತೋರಿಸಿವೆ.

ಬಾಕಿಗಳ ಬಹುದೊಡ್ಡ ಭಾಗವು ಸಾಮಗ್ರಿಗಳ ವೆಚ್ಚಕ್ಕೆ ಸಂಬಂಧಿಸಿದ್ದು,7,306.53 ಕೋ.ರೂ. ಗಳಷ್ಟಿದೆ. ಕೌಶಲ್ಯರಹಿತ ಕಾರ್ಮಿಕರ ವೇತನ 649.69 ಕೋ.ರೂ.ಮತ್ತು ಆಡಳಿತಾತ್ಮಕ ವೆಚ್ಚ 349.12 ಕೋ.ರೂ.ಗಳನ್ನೂ ಕೇಂದ್ರವು ಬಾಕಿಯಿರಿಸಿದೆ.

ಕೇಂದ್ರವು ರಾಜ್ಯಗಳ ಪೈಕಿ ಉತ್ತರ ಪ್ರದೇಶಕ್ಕೆ ಅತ್ಯಂತ ಹೆಚ್ಚಿನ ಮೊತ್ತವನ್ನು (1,711.54 ಕೋ. ರೂ.) ಬಾಕಿಯಿರಿಸಿದೆ. ನಂತರದ ಸ್ಥಾನಗಳಲ್ಲಿ ಆಂಧ್ರಪ್ರದೇಶ (1,005.31 ಕೋ.ರೂ.) ಮತ್ತು ಪಶ್ಚಿಮ ಬಂಗಾಳ (664.31 ಕೋ.ರೂ.) ಇವೆ.

ಕೇಂದ್ರವು ರಾಜ್ಯ ಸರಕಾರದಿಂದ ಯೋಜನೆಯ ಅನುಷ್ಠಾನದಲ್ಲಿ ನಿಯಮಗಳ ಉಲ್ಲಂಘನೆಗಳನ್ನು ಉಲ್ಲೇಖಿಸಿ ಡಿಸೆಂಬರ್ 2021ರಿಂದ ಪಶ್ಚಿಮ ಬಂಗಾಳಕ್ಕೆ ಕಾಯ್ದೆಯಡಿ ಹಣವನ್ನು ಹಂಚಿಕೆ ಮಾಡುವುದನ್ನು ನಿಲ್ಲಿಸಿದೆ.

ಡಿ.26,2021ರಿಂದ ಕಾರ್ಮಿಕರಿಗೆ 2,744 ಕೋ.ರೂ.ಗಳ ವೇತನ ಬಾಕಿಯಿದೆ ಎಂದು ದಿಲ್ಲಿಯ ಲಾಭರಹಿತ ಸಂಸ್ಥೆ ಲಿಬಿಟೇಕ್‌ನ

ವರದಿಯು ತೋರಿಸಿದೆ. ನರೇಗಾ ಕಾಮಗಾರಿಗಳ ಸ್ಥಗಿತದಿಂದಾಗಿ ಕಾರ್ಮಿಕರು ಪ್ರಸಕ್ತ ವರ್ಷದಲ್ಲಿ ವೇತನಗಳ ರೂಪದಲ್ಲಿ ಸುಮಾರು 3,891 ಕೋ.ರೂ.ಗಳಿಂದ 6,046 ಕೋ.ರೂ.ವರೆಗಿನ ಹಣವನ್ನು ಕಳೆದುಕೊಂಡಿದ್ದಾರೆ ಎಂದು ವರದಿಯು ತಿಳಿಸಿದೆ.

ಕೊರೋನ ವೈರಸ್‌ ಗಿಂತ ಮೊದಲಿನ ವರ್ಷಗಳಲ್ಲಿ ಪಾವತಿಸಲಾಗಿದ್ದ ವೇತನಗಳ ಆಧಾರದಲ್ಲಿ 3,891 ಕೋ.ರೂ.ಗಳನ್ನು ಲೆಕ್ಕ ಹಾಕಲಾಗಿದ್ದರೆ,ಸಾಂಕ್ರಾಮಿಕದ ವರ್ಷಗಳಲ್ಲಿ ಪಾವತಿಸಲಾಗಿದ್ದ ವೇತನಗಳ ಆಧಾರದಲ್ಲಿ ಇದು 6,046 ಕೋ.ರೂ.ಆಗುತ್ತದೆ.

ಈ ನಡುವೆ, ಮಿಜೋರಾಂ ಪ್ರತಿ ಕುಟುಂಬಕ್ಕೆ ಅತ್ಯಂತ ಹೆಚ್ಚಿನ ಕೆಲಸದ ದಿನಗಳನ್ನು (70.71) ಒದಗಿಸಿದ್ದು,ತ್ರಿಪುರಾ (49.14) ಮತ್ತು ಲಡಾಖ್ (45.89) ನಂತರದ ಸ್ಥಾನಗಳಲ್ಲಿವೆ ಎಂದು ಕೇಂದ್ರದ ಅಂಕಿಅಂಶಗಳು ತೋರಿಸಿವೆ. ನರೇಗಾದಡಿ ದೇಶಾದ್ಯಂತ ಸರಾಸರಿ 40.19 ದಿನಗಳಿಗೆ ಕೆಲಸವನ್ನು ಒದಗಿಸಲಾಗಿದೆ.

ನರೇಗಾ ಉದ್ಯೋಗಗಳಿಗೆ ಬೇಡಿಕೆ ಕಡಿಮೆಯಾಗಿದೆಯೇ? ವಿತ್ತ ಸಚಿವರ ಹೇಳಿಕೆಯ ಸತ್ಯಾಸತ್ಯತೆ ಬಹಿರಂಗ ಪಡಿಸಿದ Factchecker.in:
ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಡಿ.14ರಂದು ಲೋಕಸಭೆಯಲ್ಲಿ ಮಾತನಾಡಿದ ಸಂದರ್ಭ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಗಳಿಗೆ ಬೇಡಿಕೆ ತಗ್ಗುತ್ತಿದೆ, ಇತ್ತೀಚಿನ ದಿನಗಳಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ)ಯಡಿ ಕೆಲಸಕ್ಕೆ ಬೇಡಿಕೆ ಕಡಿಮೆಯಾಗುತ್ತಿದೆ ಎಂದು ಹೇಳಿಕೊಂಡಿದ್ದರು. ಆದರೆ ವಾಸ್ತವ ಸ್ಥಿತಿ ಸಚಿವೆಯ ಹೇಳಿಕೆಗಿಂತ ತುಂಬ ಭಿನ್ನವಾಗಿದೆ ಎನ್ನುವುದನ್ನು ಸತ್ಯಶೋಧನಾ ಜಾಲತಾಣ Factchecker.in ಬಹಿರಂಗಗೊಳಿಸಿದೆ.

ಉದ್ಯೋಗಗಳಿಗೆ ಬೇಡಿಕೆ ಕುಸಿತದ ನಿಖರ ಸಮಯವನ್ನು ಸೀತಾರಾಮನ್ ಉಲ್ಲೇಖಿಸಿರಲಿಲ್ಲ. 2020-21ರಲ್ಲಿ 8.55 ಕೋಟಿ ಕುಟುಂಬಗಳಿಂದ ಉದ್ಯೋಗಗಳಿಗೆ ಬೇಡಿಕೆಯಿದ್ದರೆ 2021-22 ರಲ್ಲಿ ಅದು ಶೇ.5.8ರಷ್ಟು, ಅಂದರೆ 8.05 ಕೋಟಿ ಕುಟುಂಬಗಳಿಗೆ ಇಳಿಕೆಯಾಗಿತ್ತು. ಈ ಪ್ರವೃತ್ತಿ ಡಿಸೆಂಬರ್ 22ರವರೆಗೆ 6.24 ಕೋಟಿ ಕುಟುಂಬ ಗಳಿಂದ ಉದ್ಯೋಗಗಳಿಗೆ ಬೇಡಿಕೆಯಿತ್ತು. ಇದು ಹಿಂದಿನ ಎರಡು ವರ್ಷಗಳಲ್ಲಿಯ ಇದೇ ಅವಧಿಗೆ ಹೋಲಿಸಿದರೆ ಕಡಿಮೆ ಪ್ರಮಾಣದಲ್ಲಿದೆ.

2022-23ರಲ್ಲಿಯೂ ಮುಂದುವರಿದಿದ್ದು ಆದರೆ ಈಗಲೂ ಬೇಡಿಕೆಯು 2019-20ರಲ್ಲಿ ಕೋವಿಡ್ ಸಾಂಕ್ರಾಮಿಕದ ಮತ್ತು ಸಂಬಂಧಿತ ಲಾಕ್‌ ಡೌನ್‌ಗಳಿಂದಾಗಿ ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಮರಳುವ ಮುನ್ನ ಉದ್ಯೋಗಗಳಿಗೆ ಇದ್ದ ಬೇಡಿಕೆಗಿಂತ ಅಧಿಕವಾಗಿಯೇ ಇದೆ.

ಸೀತಾರಾಮನ್ ಅವರ ಹೇಳಿಕೆಯ ಸತ್ಯಾಸತ್ಯತೆ ಯನ್ನು ಪರಿಶೀಲಿಸಲು Factchecker. in ಮಾರ್ಚ್ 2018 ಮತ್ತು ಡಿ.22, 2022ರ ನಡುವೆ ಯೋಜನೆಯಡಿ ಉದ್ಯೋಗಗಳಿಗೆ ಬೇಡಿಕೆಯ ಕುರಿತು ನರೇಗಾ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ದತ್ತಾಂಶಗಳನ್ನು ವಿಶ್ಲೇಷಿಸಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಕೆಲಸಕ್ಕೆ ಬೇಡಿಕೆ ಸ್ಥಿರವಾಗಿ ಏರಿಕೆಯಾಗಿದೆ. 2018-19ರಲ್ಲಿ 5.78 ಕೋ.ಕುಟುಂಬಗಳಿಂದ (9.11 ಕೋ.ಜನರು) ಕೆಲಸಕ್ಕಿದ್ದ ಬೇಡಿಕೆಯು 2019-20ರಲ್ಲಿ 6.16 ಕೋ.ಕುಟುಂಬಗಳಿಗೆ (9.33 ಕೋ.ಜನರು) ಏರಿಕೆಯಾಗಿದೆ.

2020ರಲ್ಲಿ ಕೋವಿದ್ ಬಿಕ್ಕಟ್ಟಿನಿಂದಾಗಿ ಉದ್ಯೋಗಗಳಿಗೆ ಬೇಡಿಕೆಯು ಇನ್ನಷ್ಟು ಹೆಚ್ಚಾಗಿತ್ತು. ಮಾರ್ಚ್ 2020ರಲ್ಲಿ ಲಾಕ್‌ಡೌನ್ ಘೋಷಣೆಯಾದಾಗ ನಗರ ಪ್ರದೇಶಗಳಲ್ಲಿ ಕೆಲಸವಿಲ್ಲದೆ ಅಸಹಾಯಕರಾಗಿದ್ದ ಸುಮಾರು 1.14 ಕೋ.ವಲಸೆ ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ಮರಳಿದ್ದರು. 2020-21ರಲ್ಲಿ ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ನರೇಗಾದಡಿ ಕೆಲಸಕ್ಕೆ ಬೇಡಿಕೆ ಶೇ.38.7ರಷ್ಟು ಏರಿಕೆಯಾಗಿತ್ತು. 2018-19ರ ಶೇ.8.6 ಮತ್ತು 2019-20ರ ಶೇ.2.4ರಷ್ಟು ಏರಿಕೆಗೆ ಹೋಲಿಸಿದರೆ ಆ ವರ್ಷ ಕೆಲಸಕ್ಕಾಗಿ ಬೇಡಿಕೆಯಿಟ್ಟಿದ್ದ ವ್ಯಕ್ತಿಗಳ ಸಂಖ್ಯೆಯು 2019-20ಕ್ಕಿಂತ ಶೇ.42.7ರಷ್ಟು ಹೆಚ್ಚಳವಾಗಿತ್ತು.

2021-22ರಲ್ಲಿ ಎರಡನೇ ಅಲೆಯ ಬಳಿಕ ಆರ್ಥಿಕ ಚಟುವಟಿಕೆಗಳು ಕ್ರಮೇಣ ಪುನರಾರಂಭಗೊಂಡಿ ದ್ದಾಗ 2020-21ಕ್ಕೆ ಹೋಲಿಸಿದರೆ ಸುಮಾರು ಶೇ.5.8ರಷ್ಟು ಕಡಿಮೆ ಕುಟುಂಬಗಳು ನರೇಗಾದಡಿ ಕೆಲಸಕ್ಕೆ ಬೇಡಿಕೆಯನ್ನು ಹೊಂದಿದ್ದವು.

ಕೋವಿಡ್ ಬಿಕ್ಕಟ್ಟಿನಿಂದಾಗಿ 2019-20 ಮತ್ತು 2020-21ರ ನಡುವಿನ ಅವಧಿಯನ್ನು ಸಾಮಾನ್ಯಕ್ಕಿಂತ ಭಿನ್ನ ವರ್ಷಗಳನ್ನಾಗಿ ಪರಿಗಣಿಸಬಹುದು. ಆದಾಗ್ಯೂ ಸಾಂಕ್ರಾಮಿಕದ ಮೊದಲಿನ ಮತ್ತು ಡಿಸೆಂಬರ್ 22ರವರೆಗಿನ ದತ್ತಾಂಶಗಳನ್ನು ಮಾತ್ರ ಪರಿಶೀಲಿಸಿದರೂ ಕುಟುಂಬಗಳಿಂದ ಉದ್ಯೋಗಗಳಿಗೆ ಬೇಡಿಕೆ ಹೆಚ್ಚಿರುವುದು ಸ್ಪಷ್ಟವಾಗಿದೆ. ಅದು 2019-20ರಲ್ಲಿದ್ದ 6.16 ಕೋ.ಯಿಂದ ಡಿ.22ಕ್ಕೆ ಇದ್ದಂತೆ 6.24 ಕೋ.ಗೆ ಏರಿಕೆಯಾಗಿದೆ. ಪ್ರಸಕ್ತ ವಿತ್ತವರ್ಷ ಕೊನೆಗೊಳ್ಳಲು ಕೇವಲ ಮೂರು ತಿಂಗಳುಗಳು ಬಾಕಿಯಿದ್ದು,ಈ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಪೀಪಲ್ಸ್ ಆ್ಯಕ್ಟನ್ ಫಾರ್ ಎಂಪ್ಲಾಯ್‌ಮೆಂಟ್ ಗ್ಯಾರಂಟಿಯಲ್ಲಿ ಸಂಶೋಧಕರಾಗಿರುವ ವಿಜಯ ರಾಮ ಎಸ್.ಬೆಟ್ಟು ಮಾಡಿದ್ದಾರೆ.

ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವೆ ಸಾದ್ದಿ ನಿರಂಜನ ಜ್ಯೋತಿ ಅವರು ಡಿ.13ರಂದು ಲೋಕಸಭೆಯಲ್ಲಿ ನೀಡಿದ ಉತ್ತರದಂತೆ ದೇಶಾದ್ಯಂತ ನರೇಗಾ ಕಾರ್ಮಿಕರು ಸುಮಾರು 4,447.92 ಕೋ.ರೂ.ಗಳ ಬಾಕಿ ವೇತನ ಪಾವತಿಗಾಗಿ ಕಾಯುತ್ತಿದ್ದಾರೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...