ಜಿಲ್ಲಾ ಪಂಚಾಯತ ಸಿ.ಇ.ಒ ಪ್ರಿಯಾಂಗ ಎಂ ಭಟ್ಕಳ ಸರ್ಕಾರಿ ಅಸ್ಪತ್ರೆಗೆ ಭೇಟಿ

Source: so news | By MV Bhatkal | Published on 7th May 2021, 6:11 PM | Coastal News |

ಭಟ್ಕಳ :ಇತ್ತೀಚಿಗೆ ರೋಗಿಗಳೆ ಬಂದು ತನಗೆ ಆಕ್ಷಿಜನ್ ಬೆಡ್ ನೀಡಿ, ತನಗೆ ಆಸ್ಪತ್ರೆಯಲ್ಲೆ ಚಿಕಿತ್ಸೆ ನೀಡಿ ಎಂದು ವೈದ್ಯರಿಗೆ ಪೀಡಿಸುತ್ತಾರೆ. ದಯವಿಟ್ಟು ಇಂತಹ ವರ್ತನೆ ಮಾಡಬೇಡಿ. ಇದರಿಂದ ನಿಜವಾಗಿ ಅವಶ್ಯಕತೆ ಇದ್ದವರಿಗೆ ತೊಂದರೆಯಾಗುತ್ತದೆ ಎಂದು ಜಿ.ಪಂ ಸಿ.ಇ.ಒ ಪ್ರಿಯಾಂಗ ಎಂ ಹೇಳಿದರು.

ಅವರು  ಭಟ್ಕಳದ ಸರ್ಕಾರಿ ಅಸ್ಪತ್ರೆಗೆ ಭೇಟಿ ನೀಡಿ ಅಮ್ಲಜನಕ ಸಂಗ್ರಹ, ಸೊಂಕೀತರ ಚಿಕಿತ್ಸೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಸಾವಿರದ ಗಡಿದಾಟುತ್ತಿದೆ. ಇದು ಉತ್ತಮ ಬೆಳವಣಿಗೆ ಅಲ್ಲಾ. ಮುಂದಿನ ಕ್ರಮಕ್ಕೆ ಜಿಲ್ಲಾಡಳಿತ, ತಾಲೂಕಾಡಳಿತ ಅಣಿಯಾಗುತ್ತಿದ್ದು ಯಾರು ಭಯಬೀಳುವ ಅವಶ್ಯಕತೆ ಇಲ್ಲ. ಎಲ್ಲರೂ ಆಸ್ಪತ್ರೆಯಲ್ಲಿಯೆ ಚಿಕಿತ್ಸೆ ಪಡೆಯಲು ಬೇಡಿಕೆ ಇಡುತ್ತಿರುವದು ಗಮನಕ್ಕೆ ಬಂದಿದೆ. ಯಾರು ಎಲ್ಲಿ ಇರಬೇಕು? ಯಾರಿಗೆ ಎಷ್ಟು ಆಮ್ಲಜನಕ, ಚಿಕಿತ್ಸೆ ನೀಡಬೇಕು ಎಂದು ವೈದ್ಯರು ನಿರ್ಣಯಿಸುತ್ತಾರೆ. ಅವರ ಕರ್ತವ್ಯಕ್ಕೆ ಅಡ್ಡಿಪಡಿಸಬೇಡಿ ಎಂದರು.

ಮುAದಿನ ದಿನಗಳಲ್ಲಿ  ಜಿಲ್ಲಾಡಳಿತ ಸೊಂಕಿತರಿಗೆ ಅವಶ್ಯವಿರುವ ಬೆಡ್, ಅಮ್ಲಜನಿಕ ಹಾಗೂ ಇನ್ನಿತರ ಸೌಲಭ್ಯಗಳ ಕೊರತೆಯಾಗದೇ ಹಾಗೆ ವ್ಯವಸ್ಥೆ ಮಾಡಿದೆ. ಖಾಸಗಿ ಅಸ್ಪತ್ರೆಗಳು ಕೋವಿಡ್ ಲಕ್ಷಣವುಳ್ಳ ರೋಗಿಗಳ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನುವ ಸಂಗತಿ ತಿಳಿದು ಬಂದಿದ್ದು ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು.  ಅಧಿಕಾರಿಗಳ ಜೊತೆ ಸಭೆ ನಡೆಸಿ ತಾಲೂಕಿನ ಕೋವಿಡ ಪ್ರಕರಣಗಳ ಬಗ್ಹೆ ವಿವರ ಪಡೆದಕೊಂಡಿದ್ದೇವೆ.ಮುAದಿನದಿನಗಳಲ್ಲಿ ತಾಲೂಕಿಗೆ ಅವಶ್ಯವಿರುವ ಹೆಚ್ಚುವರಿ ಬೆಡ್ ಗಳು ಹಾಗೂ ಅಮ್ಲಜನಕದ ಪೂರೈಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಜನಸಾಮಾನ್ಯರು ಕೋವಿಡ್ ೨ನೇ ಅಲೆ ಜಾಗೃತರಾಗಿರಬೇಕು.ಅನಾವಶ್ಯಕವಾಗಿ ಯಾರು ಮನೆಯಿಂದ ಹೋರಗೆ ಬರಬಾರದು. ಕೋವಿಡ ನಿಯಂತ್ರಣಕ್ಕೆ ಅಧಿಕಾರಿಗಳ ಪ್ರಯತ್ನಕ್ಕಿಂತ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು. ಭಟ್ಕಳ ಸರ್ಕಾರಿ ಅಸ್ಪತ್ರೆ ಕಾರ್ಯವೈಖರಿ  ಬಗ್ಗೆ   ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕಾಅಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಸವಿತಾ ಕಾಮತ, ಪ್ರಭಾರೆ ಟಿಎಚ್‌ಒ ಡಾ ಬಾಲಚಂದ್ರ ಮೇಸ್ತ, ತಾ.ಪಂ ಆಡಳಿತಾಧಿಕಾರಿ ರವೀಂದ್ರ ಬಾಡಕರ, ತಾ.ಪಂ. ಸಿಇಓ ಪ್ರಭಾಕರ ಚಿಕ್ಕಣಮನೆ ಇದ್ದರು.

Read These Next

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...

ಕಾರವಾರ: ಹಣ, ಉಡುಗೊರೆ ಹಂಚಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಿ : ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿ ಕುಮಾರ್

ಮತದಾರರಿಗೆ ಹಣ, ಉಡುಗೊರೆ ಮತ್ತಿತರ ಆಮಿಷಗಳನ್ನು ಒಡ್ಡುವುದರ ಕುರಿತಂತೆ ತೀವ್ರ ನಿಗಾ ವಹಿಸಬೇಕು, ಈ ಕುರಿತಂತೆ ದೂರುಗಳು ಬಂದ ...