ಕಾರವಾರ: ಇಂದಿರಾ ಕ್ಯಾಂಟಿನ್ ನಲ್ಲಿ ಉಪಹಾರ ಸವಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

Source: S O News | By I.G. Bhatkali | Published on 9th December 2023, 4:25 PM | Coastal News | Don't Miss |

ಕಾರವಾರ: ಕಾರವಾರದ ಕೆ.ಇ. ಬಿ. ರಸ್ತೆಯಲ್ಲಿರುವ ಇಂದಿರಾ ಕ್ಯಾಂಟಿನ್ ಗೆ ಇಂದು ಅನಿರೀಕ್ಷಿತವಾಗಿ ಭೇಟಿ ನೀಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಬೆಳಗಿನ ಉಪಹಾರ ಸೇವಿಸಿ, ಆಹಾರದ ರುಚಿ ಮತ್ತು ಗುಣಮಟ್ಟದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಯಾಂಟಿನ್ ನಲ್ಲಿ ಶುಚಿ ಮತ್ತು ರುಚಿಗೆ ಯಾವಾಗಲೂ ಹೆಚ್ಚಿನ ಪ್ರಥಮಾದ್ಯತೆ ನೀಡುವಂತೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು, ಕ್ಯಾಂಟಿನ್ ಉಪಯೋಗಕ್ಕೆ ನೀಡಿರುವ ಫ್ರಿಡ್ಜ್ ಮತ್ತಿತರ ಯಂತ್ರೋಪಕರಣಗಳನ್ನು ವ್ಯವಸ್ಥಿತವಾಗಿ ಬಳಸುವಂತೆ ಹಾಗೂ ಶುದ್ದ ಕುಡಿಯುವ ಯಂತ್ರದ ಮೂಲಕ ಗ್ರಾಹಕರಿಗೆ ನೀರು ಒದಗಿಸುವಂತೆ ಸೂಚನೆ ನೀಡಿದರು.

ಸರ್ಕಾರ ಸಾರ್ವಜನಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ಊಟ ಮತ್ತು ಉಪಹಾರ ಒದಗಿಸುವ ಉದ್ದೇಶದಿಂದ ಆರಂಭಿಸಿರುವ ಇಂದಿರಾ ಕ್ಯಾಂಟಿನ್ ಸೇವೆಯನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುವ ಮೂಲಕ ಕಡಿಮೆ ವೆಚ್ಚದಲ್ಲಿ  ಶುಚಿ ಮತ್ತು ರುಚಿಯಾದ ಆಹಾರ ಸೇವನೆ ಮಾಡುವಂತೆ ತಿಳಿಸಿದರು.

ಪ್ರತಿ ದಿನದ ಮೆನು ವಿನ ಪ್ರಕಾರವೇ ಆಹಾರ ತಯಾರಿಸಿ, ಗ್ರಾಹಕರಿಗೆ ವಿತರಿಸುವಂತೆ  ಕ್ಯಾಂಟಿನ್ ಸಿಬ್ಬಂದಿ ಗೆ ಸೂಚನೆ  ನೀಡಿದರು.

ಇಂದಿರಾ ಕ್ಯಾ0ಟಿನ್ ನಲ್ಲಿ  ಪ್ರತಿ ದಿನ ಬೆಳಗ್ಗೆ ಉಪಹಾರ ಮತ್ತು ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಇದ್ದು, ಉಪಹಾರ ಕ್ಕೆ ರೂ.5 ಮತ್ತು ಊಟಕ್ಕೆ ರೂ.10 ದರ ಮಾತ್ರ ನಿಗದಿಪಡಿಸಿದೆ.

ಜಿಲ್ಲಾಧಿಕಾರಿ ಅವರು ಕ್ಯಾ0ಟಿನ್ ನಲ್ಲಿ ತಯಾರಿಸಿದ್ದ ಮಸಾಲ ರೈಸ್ ಸವಿದು , ರುಚಿಯ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...