ಅಮೆರಿಕದ ಮಾನವಹಕು ಅಧಿಕಾರಿ ದಿಲ್ಲಿಗೆ ಆಗಮನೆ; ಉನ್ನತ ಅಧಿಕಾರಿಗಳು, ಮಾನವಹಕ್ಕು ಹೋರಾಟಗಾರರನ್ನು ಭೇಟಿಯಾಗಲಿರುವ ಉಝಾ ಝಿಯಾ

Source: VB | By I.G. Bhatkali | Published on 10th July 2023, 11:05 AM | National News |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ಅಮೆರಿಕ ಪ್ರವಾಸದ ಬೆನ್ನಲ್ಲೇ ಬೈಡನ್ ಆಡಳಿತದ ಮಾನವಹಕ್ಕುಗಳ ಇಲಾಖೆಯ ಅತ್ಯುನ್ನತ ಅಧಿಕಾರಿಯೊಬ್ಬರು ಶನಿವಾರ ರಾತ್ರಿ ಭಾರತಕ್ಕೆ ಆಗಮಿಸಿದ್ದಾರೆ. ಅಮೆರಿಕದ ನಾಗರಿಕ ಸುರಕ್ಷತೆ, ಪ್ರಜಾಪ್ರಭುತ್ವ ಹಾಗೂ ಮಾನವಹಕ್ಕುಗಳ ಅಧೀನ ಕಾರ್ಯದರ್ಶಿ ಉಝಾ ಝಯಾ ಭಾರತ ಸಂದರ್ಶಿಸಲಿರುವ ಅಮೆರಿಕದ ಉನ್ನತ ಅಧಿಕಾರಿಯಾಗಿದ್ದಾರೆ.

ಅವರು ಉನ್ನತ ಸರಕಾರಿ ಅಧಿಕಾರಿಗಳು ಹಾಗೂ ಮಾನವಹಕ್ಕು ಹೋರಾಟಗಾರರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಟಿಬೆಟ್ ವಿಷಯಗಳ ಕುರಿತ ಅಮೆರಿಕದ ವಿಶೇಷ ಸಮನ್ವಯಾಧಿಕಾರಿಯೂ ಆಗಿರುವ ಉಝಾ ಝಯಾ, ಹೊಸದಿಲ್ಲಿಯಲ್ಲಿ ಬೌದ್ಧ ಧಾರ್ಮಿಕ ನಾಯಕ ದಲಾಯಿ ಲಾವಾ ಅವರನ್ನು ಕೂಡಾ ಭೇಟಿಯಾಗಲಿದ್ದಾರೆ.

ಝಿಯಾ ಜೊತೆಗೆ ದಕ್ಷಿಣ ಏಶ್ಯಕ್ಕಾಗಿನ ಅಮೆರಿಕದ ವಿಶೇಷ ಅಧಿಕಾರಿ ಡೊನಾಲ್ಡ್ಲು ಹಾಗೂ 'ಯುಎಸ್‌ ಎಮ್'ನ ಹಿರಿಯ ಅಧಿಕಾರಿಯೊಬ್ಬರು ಆಗಮಿಸಿದ್ದಾರೆ. ಮೋದಿಯವರ ಅಮೆರಿಕ ಪ್ರವಾಸದ ಬಳಿಕ ಆ ದೇಶದಿಂದ ಭಾರತಕ್ಕೆ ಭೇಟಿ ನೀಡುತ್ತಿರುವ ಮೊದಲ ಉನ್ನತ ಮಟ್ಟದ ನಿಯೋಗ ಇದಾಗಿದೆ. ಈ ವರ್ಷದ ಜೂನ್‌ನಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ಮೋದಿಯವರು ಅಮೆರಿಕದ ಅಧ್ಯಕ್ಷ ಬೈಡನ್ ಜೊತೆ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ಹಲವಾರು ವ್ಯೂಹಾತ್ಮಕ ಒಪ್ಪಂದಗಳಿಗೆ ಸಹಿಹಾಕಲಾಗಿತ್ತು. ಆದರೆ ಇದೇ ವೇಳೆ, ಭಾರತದಲ್ಲಿನ ಪ್ರಜಾಪ್ರಭುತ್ವ ಹಾಗೂ ಮಾನವಹಕ್ಕುಗಳ ಪರಿಸ್ಥಿತಿ ಬಗ್ಗೆ ಅಮೆರಿಕದ ಹಲವಾರು ಸಂಸದರು, ಶಾಸನಸಭಾ ಪ್ರತಿನಿಧಿಗಳು ಆತಂಕ ವ್ಯಕ್ತಪಡಿಸಿದ್ದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...