ಅಪರಿಚಿತ ವಾಹನ ಡಿಕ್ಕಿ:ಕುಂದಾಪುರ ಠಾಣೆ ಹೆಡ್ಕಾನ್ಸ್ಟೇಬಲ್ ಸಾವು

Source: so news | By Manju Naik | Published on 16th April 2019, 1:08 AM | Coastal News | Don't Miss |

ಕುಂದಾಪುರ: ಬೈಕೊಂದಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಪರಾರಿಯಾದ ಪರಿಣಾಮ ಗಂಭೀರ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬೈಕ್ ಸವಾರ ಕುಂದಾಪುರ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ಚಂದ್ರಶೇಖರ್(43) ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬೆಳಿಗ್ಗೆ 11 ಗಂಟೆಗೆ ಸಾವನ್ನಪ್ಪಿದ್ದಾರೆ. 

ಪೊಲೀಸ್ ಸಿಬ್ಬಂದಿ ಚಂದ್ರಶೇಖರ್ ಭಾನುವಾರ ಸಂಜೆ ಉಡುಪಿಯಿಂದ ತನ್ನ ಬೈಕಿನಲ್ಲಿ ಕರ್ತವ್ಯ ಮುಗಿಸಿ ಕುಂದಾಪುರಕ್ಕೆ ವಾಪಾಸ್ಸಾಗುತ್ತಿದ್ದ ವೇಳೆ ಬ್ರಹ್ಮಾವರ ಸಮೀಪದ ಮಾಬುಕಳ ಸೇತುವೆ ಹಿಂದುಗಡೆಯಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿತ್ತು ಎನ್ನಲಾಗಿದೆ. ಅಪಘಾತದಿಂದ ಬೈಕ್ ಸಮೇತ ರಸ್ತೆ ಬದಿಯ ಡಿವೈಡರ್ಗೆ ಎಸೆಯಲ್ಪಟ್ಟ ಚಂದ್ರಶೇಖರ್ ಕುತ್ತಿಗೆ ಹಾಗೂ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿತ್ತು. ಇದೇ ಸಂದರ್ಭ ಹಿಂದಿನಿಂದ ಕುಂದಾಪುರ ಎಸೈ ಹರೀಶ್ ಹಾಗೂ ಚಾಲಕ ಲೋಕೇಶ್ ಉಡುಪಿ ಕಡೆಯಿಂದ ಬಂದಿದ್ದು, ರಸ್ತೆಯಲ್ಲಿ ಬಿದ್ದಿದ್ದ ಚಂದ್ರಶೇಖರ್ ಅವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ರಾತ್ರಿಯಿಡೀ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡಿದ ಚಂದ್ರಶೇಖರ್ ಸೋಮವಾರ ಬೆಳಿಗ್ಗೆ 11 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಚಂದ್ರಶೇಖರ್ 17 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ರೈಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Read These Next

ಮುಂಡಗೋಡ: ಛತ್ರಪತಿ ಶಿವಾಜಿ ಎಲ್ಲ ಧರ್ಮಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದ : ಎಲ್.ಟಿ.ಪಾಟೀಲ್

ಎಲ್ಲ ಧರ್ಮಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿಂದು ಧರ್ಮವನ್ನು ಉಳಿಸಿ ಸಂರಕ್ಷಣೆ ಮಾಡಿದ ಛತ್ರಪತಿ ಶಿವಾಜಿ. 17ನೇ ಶತಮಾನದಲ್ಲಿ ...