ಮೋದಿ ರಾಜ್ಯದಲ್ಲಿ ರಾಜ್ಯ ಗುಜರಾತ್ ನಲ್ಲಿ ಜಾರಿಯಾದ ಸಿಎಎ; ೭ಪಾಕಿಸ್ಥಾನಿಗಳಿಗೆ ಭಾರತೀಯ ಪೌರತ್ವ

Source: sonews | By Staff Correspondent | Published on 21st December 2019, 10:44 PM | National News | Don't Miss |

ಅಹ್ಮದಾಬಾದ್: ಪೌರತ್ವ ತಿದ್ದುಪಡಿ ಕಾಯ್ದೆಯನ್ವಯ ಪಾಕಿಸ್ತಾನದ ಏಳು ಮಂದಿ ವಲಸಿಗರಿಗೆ ಭಾರತೀಯ ಪೌರತ್ವ ಪ್ರಮಾಣಪತ್ರವನ್ನು ಕಛ್ ನಲ್ಲಿ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ವಿತರಿಸಿದ್ದಾರೆ.

ಭಾರತೀಯ ಪೌರತ್ವ ಪಡೆದವರಲ್ಲೊಬ್ಬರಾಗಿರುವ ಮೆಹ್ತಾಬ್ ಸಿಂಗ್ ಅಲ್ಲಿ ಧರ್ಮಾಧರಿತ ದೌರ್ಜನ್ಯವನ್ನು ಸಹಿಸಲಾಗದೆ ಭಾರತಕ್ಕೆ 2007ರಲ್ಲಿ ಬಂದವರು.

"ಪಾಕಿಸ್ತಾನವನ್ನು 2007ರಲ್ಲಿ ತೊರೆದು ಬಂದೆ. ಅಲ್ಲಿ ದೇವಸ್ಥಾನಗಳನ್ನು ನಾಶಪಡಿಸಲಾಗುತ್ತದೆ. ಹಿಂದು ಮಹಿಳೆಯರು ಹಾಗೂ ಹುಡುಗಿಯರನ್ನು ಅಪಹರಿಸಿ ಅವರ ಮೇಲೆ ದೌರ್ಜನ್ಯ ನಡೆಸಲಾಗುತ್ತದೆ" ಎಂದು ಅವರು ಹೇಳಿದ್ದಾರೆ.

"ಇದೀಗ ಭಾರತೀಯ ಪೌರತ್ವ ಪಡೆದಿರುವುದು ತುಂಬಾ ಸಂತಸ ನೀಡಿದೆ. ಇದು ನಮಗೆ ದೀಪಾವಳಿಯಂತೆ" ಎಂದು ಅವರು ಹೇಳಿದರು.

"ಪಾಕಿಸ್ತಾನದಲ್ಲಿ ಧಾರ್ಮಿಕ ದೌರ್ಜನ್ಯ ಸಹಿಸಲು ಸಾಧ್ಯವಾಗದೆ ಅಲ್ಲಿಂದ ಓಡಿ ಬಂದ ಸಾವಿರಾರು ಮಂದಿ ವಲಸಿಗರು ಗುಜರಾತ್‍ ನಲ್ಲಿದ್ದಾರೆ. ಪೌರತ್ವ ತಿದ್ದುಪಡಿ ಕಾಯಿದೆ 2019ರ ಅನ್ವಯ ಅವರಿಗೆ ಭಾರತೀಯ ಪೌರತ್ವ ದೊರೆಯುತ್ತಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ನಾನು ಆಭಾರಿ'' ಎಂದು ಸಚಿವ ಮಾಂಡವಿಯಾ ಹೇಳಿದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...