ನದಿಯಲ್ಲಿ ಮೀನುಗಾರಿಕೆ ತೆರಳಿದ್ದ ಯುವಕರಿಬ್ಬರು‌ ನೀರಿನಲ್ಲಿ ಮುಳುಗಿ ಸಾವು…

Source: so news | Published on 3rd July 2020, 12:31 PM | Coastal News | Don't Miss |

ಉಡುಪಿ : ಉಡುಪಿ ಜಿಲ್ಲೆಯ ಬಾರ್ಕೂರಿನ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬಾರ್ಕೂರಿನಲ್ಲಿ ಶುಕ್ರವಾರ ನಡೆದಿದೆ‌ ಎನ್ನಲಾಗಿದೆ.
ಮೃತಪಟ್ಟ ಯುವಕರನ್ನು ಬಾರ್ಕೂರು ಹೊಸಾಳಕೌಲೇಶ್ವರಚೌಳಿಕೆರೆ ಗ್ರಾಮದ ಹರ್ಷ (25) ಮತ್ತು ಕಾರ್ತಿಕ್ (21) ಎಂದು ತಿಳಿದು ಬಂದಿದೆ.
ನಿನ್ನೆ ರಾತ್ರಿ ಯುವಕರು ನದಿಯಲ್ಲಿ ಬಲೆ ಬೀಸಿ ಹೋಗಿದ್ದು ಶುಕ್ರವಾರ ಮುಂಜಾನೆ ಅದನ್ನು ತರಲು ತೆರಳಿದ್ದು ನೀರಿನಲ್ಲಿ ಇಳಿದು ಬಲೆಯನ್ನು ಎಳೆಯುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ ಎನ್ನಲಾಗಿದೆ.ನದಿಯ ಬಳಿಯ ನಿವಾಸಿಗಳಾದ ಮೃತರ ಸ್ನೇಹಿತರಾದ ರವಿತೇಜಾ ಮತ್ತು ಮಧುಕರಬರುವ ಮೊದಲೇ ಇಬ್ಬರು ನದಿಗೆ ಹಾರಿ ನಿನ್ನೆ ಹಾಕಿದ್ದ ಬಲೇ ತೆಗೆಯಲು ನೀರಿಗೆ ಇಳಿದಾಗ ಈ ದುರ್ಘಟನೆ ನಡೆದಿದೆ.
ಮೃತ ಹರ್ಷ ಖಾಸಗಿ ಫೆನ್ಸಾನ್ಸ್ ಕಂಪೆನಿಯಲ್ಲಿ ಸಾಲ ವಸೂಲಿ ಕೆಲಸ ಮಾಡಿಕೊಂಡಿದ್ದು,ಕಾರ್ತಿಕ್ ಕೊನೆಯ ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ

Read These Next

ನಾಗರಿಕ ಸೇವೆಗಳ ತರಬೇತಿಗಾಗಿ ಮತೀಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ                                                 

ಕಾರವಾರ : PUE/ICSE/CBSE   ಮಂಡಳಿಗಳು ಶೈಕ್ಷಣಿಕ ವರ್ಷ 2019-20ರ ಅವಧಿಯಲ್ಲಿ ನಡೆಸಿರುವ 2ನೇ ಪಿ.ಯು.ಸಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವ ಕಲಾ, ...

ಸಾಮಾಜಿಕ ಅಂತರದೊಂದಿಗೆ 74ನೇ ಸ್ವಾತಂತ್ರ್ಯೋತ್ಸವ: ಡಿಸಿ                                                 

ಕಾರವಾರ : ಬರುವ ಅಗಸ್ಟ್ 15ರಂದು ನಡೆಯುವ 74ನೇ ಸ್ವಾತಂತ್ರ್ಯೋತ್ಸವವನ್ನು ಸಾಮಾಜಿಕ ಅಂತರ ಸ್ವಾನಿಟೈಸರ್, ಮಾಸ್ಕ್‍ಗಳ ಬಳಕೆಯಂತಹ ...