ಮಂಕಿ ಸಮುದ್ರಕ್ಕೆ ಈಜಲು ಹೋದ ಮಕ್ಕಳೀರ್ವರ ಸಾವು

Source: S O News | By I.G. Bhatkali | Published on 16th January 2022, 12:38 PM | Coastal News | Don't Miss |

ಭಟ್ಕಳ: ಹೊನ್ನಾವರದ  ಮಂಕಿ ಸಮುದ್ರಕ್ಕೆ ಈಜಲು ಹೋದ ಇಬ್ಬರು ಮಕ್ಕಳು ನೀರಿನ ಸುಳಿಗೆ ಸಿಕ್ಕಿ ಮೃತ ಪಟ್ಟ ಘಟನೆ ಶನಿವಾರ ಮಧ್ಯಾಹ್ನ ಸುಮಾರು 3 ಗಂಟೆಗೆ  ನಡೆದಿದೆ.

ಮೃತ ಮಕ್ಕಳು ಮನೋಜ ಬಾಬು ನಾಯ್ಕ (15) ಹಾಗೂ ದರ್ಶನ ಉದಯ ನಾಯ್ಕ  (16) ಎಂದು ಗುರುತಿಸಲಾಗಿದೆ. ಮೃತಪಟ್ಟ ದುರ್ದೈವಿಗಳು ನಾಲೈದು ಮಕ್ಕಳೊಂದಿಗೆ ಮಂಕಿ ತಾಳಮಕ್ಕಿ ಬಳಿ ಸಮುದ್ರಕ್ಕೆ ಈಜಲು ತೆರಳಿದ್ದರು.

ಇವರಿಬ್ಬರೂ ಸಮೀಪದ ಕನ್ನಡ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದರು ಎಂದು ತಿಳಿದು ಬಂದಿದೆ.

ಮೊದಲು ಮನೋಜ ಸಮುದ್ರದ ಸುಳಿಗೆ ಸಿಕ್ಕಾಗ ಆತನನ್ನು ರಕ್ಷಿಸಲು ದರ್ಶನ ಹೋಗಿದ್ದ. ಇಬ್ಬರು ಸಮುದ್ರ ಸುಳಿಗೆ ಸಿಕ್ಕಿ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಅಲ್ಲಿರುವ ಸುಮಾರು 20 ಮೀನುಗಾರರು ತಕ್ಷಣ ನೀರಿಗೆ ಇಳಿದರೂ ಎನು ಪ್ರಯೋಜನವಾಗಿಲ್ಲ. ಮನೋಜನನ್ನು ತಕ್ಷಣ ಹಿಡಿದರು ಕೂಡ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದ್ದಿದ್ದಾನೆ.

ದರ್ಶನ ಶವ ತಕ್ಷಣ ದೊರೆತ್ತಿದ್ದು ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪಿ.ಎಸ್.ಐ ಅಶೋಕ ಎಮ್ ತನಿಖೆ ನಡೆಸುತ್ತಿದ್ದಾರೆ.

Read These Next

ಶಿರಸಿ: ಅರಣ್ಯ ಭೂಮಿ ಹಕ್ಕು ; ಜುಲೈಯಲ್ಲಿ ಸುಫ್ರೀಂ ಕೋರ್ಟ ತೀರ್ಮಾನ- ನಿರ್ಣಾಯಕ. ಸರಕಾರದ ಪ್ರಮಾಣ ಪತ್ರದ ಮೇಲೆ ಅರಣ್ಯವಾಸಿಗಳ ಭವಿಷ್ಯ.

ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದಲ್ಲಿ ವೈಪಲ್ಯದಿಂದ ಭೂಮಿ ಹಕ್ಕಿನಿಂದ ವಂಚಿತರಾಗಿರುವ ಅರಣ್ಯವಾಸಿಗಳ ರಕ್ಷಣೆಗೆ ರಾಜ್ಯ ಸರಕಾರ ...

ಕಾರವಾರ: ಮೀನು ಪಾಶುವಾರು ಹಕ್ಕನ್ನು ಗುತ್ತಿಗೆ ಮೂಲಕ ವಿಲೇವಾರಿ; ಜೂ 4 ರೊಳಗೆ ಅರ್ಜಿ ಸಲ್ಲಿಕೆಗೆ ಅಹ್ವಾನ್

ತಾಲೂಕಿನ ಅರ್ಥಲಾವ್ ಕೆರೆ, ಹಣಕೋಣ ಕೆರೆ, ಹಾಗೂ  ಕಾಳಿ ನದಿ ಭಾಗದ ಮಾಡಸಾಯಿ, ಸಾವಂತವಾಡಾ, ಕಿನ್ನರ ,  ನಂದನಗದ್ದಾ, ಸದಾಶಿವಗಡ ಸೇರಿದಂತೆ ...

ಭಟ್ಕಳ: ಬಿಜೆಪಿಯಿಂದ ಎನ್‌ಇಪಿ ಮೂಲಕ ನಾಗ್ಪುರ್ ಗುಪ್ತ ಕಾರ್ಯಸೂಚಿ: ಬಿ.ಕೆ.ಹರಿಪ್ರಸಾದ್

ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜ್ಯವನ್ನೂ ಅದರಲ್ಲೂ ಕರಾವಳಿಯನ್ನು ಕೇಸರೀಕರಣ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದು, ...