ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ ಟ್ರೇಡ್ ಮೀಟ್

Source: sonews | By Staff Correspondent | Published on 19th September 2019, 11:49 PM | State News |


ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಇನ್‍ಲ್ಯಾಂಡ್ ಕಂಟೇನರ್ ಡಿಪೋ (ಐಸಿಡಿ)-ದೇಸೂರ್ ಇವರ ಸಹಯೋಗದೊಂದಿಗೆ ಟ್ರೇಡ್ ಮೀಟ್ ಹಾಗೂ ತಿಳುವಳಿಕೆ ಕಾರ್ಯಕ್ರಮ ಇತ್ತಿಚೆಗೆ ನಡೆಯಿತು.

ಡಿ.ಸತ್ಯನಾರಾಯಣ (ಐಆರ್‍ಟಿಎಸ್) ಗ್ರೂಪ್ ಜನರಲ್ ಮ್ಯಾನೇಜರ್ (ಸಿಆ್ಯಂಡಓ) ಕಾಂಕರ್, ಗಿರೀಶ ಗಾಯಕವಾಡ ಜನರಲ್ ಮ್ಯಾನೇಜರ್ (ಎಕ್ಸಪೋರ್ಟ) ಎಟಿಸಿ ಗ್ಲೋಬಲ್ ಲಾಜಿಸ್ಟಿಕ್ಸ,ಮಕರಂದ ಮೊಘೆ, ಡೈರೆಕ್ಟರ ಎಟಿಸಿ ಗ್ಲೋಬಲ್ ಲಾಜಿಸ್ಟಿಕ್ ಮತ್ತು ನೀಲಮ್ ಐಸಿಡಿ-ದೇಸೂರ್, ಭಾರತೀಯ ರೇಲ್ವೆ ಅಂಗ ಸಂಸ್ಥೆಯಾದ ಕಂಟೇನರ್ ಕಾರ್ಪೋರೇಶನ್ (ಕಾಂಕರ್) ಅಧಿಕಾರಿಗಳು ಭಾಗವಹಿಸಿದ್ದರು.  

ಉಪಾಧ್ಯಕ್ಷ ಮಹೇಂದ್ರ ಲದ್ದಡ ಸ್ವಾಗತಿಸಿ ಮಾತನಾಡುತ್ತಾ, ಈಗ ಐಸಿಡಿ ಸಂಸ್ಥೆ ಕೆಲವು ವರ್ಷಗಳವರೆಗೆ ತನ್ನ  ಕಾರ್ಯವನ್ನು ಸ್ಥಗಿತಗೊಳಿಸಿತ್ತು. ಈ ಮತ್ತೆ ಪ್ರಾರಂಭವಾಗಿದ್ದು  ಇದರ  ಸದುಪಯೋಗವನ್ನು  ಆಮದು-ರಫ್ತುದಾರರು ಬಳಸಿಕೊಳ್ಳಬೇಕೆಂದು ತಿಳಿಸಿದರು.   

ಡಿ.ಸತ್ಯನಾರಾಯಣ (ಐಆರ್‍ಟಿಎಸ್) ಗ್ರೂಪ್ ಜನರಲ್ ಮ್ಯಾನೇಜರ್  ಮಾತನಾಡುತ್ತಾ ಐಸಿಡಿ ಸಂಸ್ಥೆ  2004ರಲ್ಲಿ ಸ್ಥಾಪನೆಗೊಂಡು  ಇತ್ರ್ತಿಚೆಗೆ 2-3 ವರ್ಷಗಳಿಂದ ತನ್ನ ಕಾರ್ಯವನ್ನು  ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಳಿಸಿತ್ತು ಈಗ  ಕೆಲವೊಂದು ಅಭಿವೃದ್ಧಿ ಕಾರ್ಯಗಳಿಗೆ 5 ಕೋಟಿ ರೂ. ಗೂ ಹಣವನ್ನು  ವೆಚ್ಚ ಮಾಡಿ ಆಧುನಿಕ ವ್ಯವಸ್ಥೆಯುಳ್ಳ ಗೋದಾಮು , ವಿದ್ಯುತ್ ದೀಪಗಳ ವ್ಯವಸ್ಥೆ ಹಾಗೂ ಕಾಂಕ್ರಿಟ್ ಮತ್ತು ಪೇವರ್ಸಗಳಿಂದ ನಿರ್ಮಿತ ರಸ್ತೆÀಗಳನ್ನು ಅಭಿವೃದ್ಧಿಗೊಳಿಸಿ ಪುನರ್ ಪ್ರಾರಂಭಿಸಲಾಗಿದೆ.  ಇದರ ಮೂಲ ಉದ್ದೇಶ ಉತ್ತರ ಕರ್ನಾಟಕದಲ್ಲಿ ವ್ಯಾಪಾರವನ್ನು ಉತ್ತೇಜಿಸಲು ಹಾಗೂ ರಫ್ತು  ನಿರ್ವಹಿಸುವ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.
ದೇಸೂರ ದಿಂದ ಜೆಎನ್‍ಪಿಟಿ ಪೋರ್ಟ, ದೇಸೂರದಿಂದ ಕೃಷ್ಣಪಟ್ಟಮ್, ದೇಸೂರ-ಕೃಷಣಪಟ್ಟಮ್-ಬಾಂಗ್ಲಾದೇಶದ ಚಿತ್ತಗಾಂಗ್‍ವರೆಗೆ ಆಮದು-ರಫ್ತು ನಿರ್ವಹಣೆ ಮಾಡಲಾಗುವುದು.  

ಎಟಿಸಿ ಗ್ಲೋಬಲ್ ರಫ್ತು ವಿಭಾಗದ ಮುಖ್ಯ ವ್ಯವಸ್ಥಾಪಕ ಗಿರೀಶ ಗಾಯಕವಾಡ  ಅವರು ಮಾತನಾಡುತ್ತಾ ಉತ್ತರ ಕರ್ನಾಟಕದ ರಫ್ತು ಉದ್ದಿಮೆದಾರರಿಗೆ ಐಸಿಡಿ ಸಂಸ್ಥೆಯಿಂದ ರಫ್ತು ನಿರ್ವಹಿಸಲು ಸ್ಥಳದಲ್ಲಿಯೇ ವ್ಯವಸ್ಥೆಗಳನ್ನು ಹಾಗೂ ಮಾಹಿತಿಗಳನ್ನು ಪೂರೈಸುವ ಅವಕಾಶ ಇರುವುದರಿಂದ ಆಮದು ನಿರ್ವಹಣೆ ಮಾಡುವಲ್ಲಿ ಕಾಂಕರ್ ಸಂಸ್ಥೆಯವರು ಎಲ್ಲ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಒದಗಿಸಿ, ಹೆಚ್ಚಿನ  ಸೇವೆಯನ್ನು ಕಲ್ಪಿಸುವ ಉದ್ದೇಶ ಹೊಂದಿದ್ದು, ಇದರ ಸದ್ಬಳಕೆ ಮಾಡಿಕೊಳ್ಳುವುದರಿಂದ ನಿಗದಿತ ಸಮಯದಲ್ಲಿ ಸುರಕ್ಷಿತವಾಗಿ ವಸ್ತುಗಳನ್ನು ತಲುಪಿಸುವ ವ್ಯವಸ್ಥೆ ಇರುವುದರಿಂದ ಉದ್ದಿಮೆದಾರರು ಐಸಿಡಿ ದೇಸೂರಗೆ ಭೇಟಿ ನೀಡಿ ಅಲ್ಲಿರುವ ಮೂಲಭೂತ ಸೌಕರ್ಯಗಳನ್ನು ವೀಕ್ಷಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. 

ಈ ಸಂದರ್ಭದಲ್ಲಿ  ಉಪಾಧ್ಯಕ್ಷರಾದ ಅಶೋಕ ತೋಳನವರ , ಗೌರವ  ಕಾರ್ಯದರ್ಶಿ ವಿನಯ ಜೆ. ಜವಳಿ, ಸದಸ್ಯರಾದ ಸರ್ವಶ್ರೀ  ಮೋಹನ ದೇಸಾಯಿ, ಅಶೋಕ ಲzವಾ, ಉಮೇಶ ತೊಗ್ಗಿ, ಬಿ.ಎಸ್.ಬೀಳಗಿ, ಶಾಂತಿಲಾಲ ಒಸ್ವಾಲ , ವೆಂಕಟೇಶ ನಿರಂಜನ, ಅಭಿಷೇಕ ದೇಸಾಯಿ, ವಿವೇಕ ಗಬ್ಬೂರ ಮತ್ತು ವ್ಹಿಟಿಪಿಸಿಯ ಪದ್ಮನಾಭ ಇವರು ಉಪಸ್ಥಿತರಿದ್ದರು.  ಜೊತೆ ಗೌರವ ಕಾರ್ಯದರ್ಶಿ ಅಶೋಕ ಗಡಾದ  ವಂದನಾರ್ಪಣೆ  ಮಾಡಿದರು.   

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...