ಶಿರಸಿಯಲ್ಲಿ ಗಾಂಜಾ ಮಾರುತ್ತಿದ್ದ ಮೂವರ ಬಂಧನ.

Source: SO News | By Laxmi Tanaya | Published on 23rd June 2021, 9:34 PM | Coastal News | Don't Miss |

ಶಿರಸಿ : ನಗರದ ಕೆ.ಎಚ್.ಬಿ ಕಾಲೋನಿ ಹೊಸ ಬಡಾವಣೆಯ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಮಾದಕ ವಸ್ತುವನ್ನು ಅಕ್ರಮವಾಗಿ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ಮೂವರನ್ನ ಪೊಲೀಸರು ಬಂಧಿಸಿದ್ದಾರೆ.

 ಮಂಜುನಾಥ ತಂದೆ ಗೋಪಾಲ ಪಾಠಣಕರ (27)  ಅಯ್ಯಪ್ಪನಗರ, ಶಿರಸಿ, ಹರೀಶ ತಂದೆ ಮಂಜುನಾಥ ನಾಯ್ಕ (26) ಶಿರಸಿ ಮತ್ತು  ವಿರೇಶ ಶನಿಯಾ ಶಿರ್ಶಿಕರ  (21) ರಾಜೀವನಗರ, ಶಿರಸಿ  ಬಂಧಿತರು.

ಇವರು  ಶಿರಸಿ ಕೆ.ಎಚ್.ಬಿ ಕಾಲೋನಿ ಹೊಸ ಬಡಾವಣೆಯ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಮಾದಕ ವಸ್ತುವನ್ನು ಅಕ್ರಮವಾಗಿ ಸಾಗಾಟ ಮತ್ತು ಮಾರಾಟ ಮಾಡುತ್ತಿರುವ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ, ಅಡಿಷನಲ್ ಎಸ್ಪಿ ಬದರಿನಾಥ, ಶಿರಸಿ ಡಿವೈಎಸ್ಪಿ ರವಿ ಡಿ ನಾಯ್ಕ ಅವರ ಮಾರ್ಗದರ್ಶನದಲ್ಲಿ ಸಿಪಿಐ ರಾಮಚಂದ್ರ ನಾಯಕ ದಾಳಿ ಮಾಡಿ ಆರೋಪಿತರನ್‌ ಬಂಧಿಸಿದ್ದಾರೆ. ಬಂಧಿತರಿಂದ 228 ಗ್ರಾಂ ತೂಕದ  ಗಾಂಜಾ ಮಾದಕ ವಸ್ತು ಮತ್ತು ಹೊಂಡಾ ಆಕ್ಟಿವಾ ಮೋಟಾರ ಸೈಕಲ್ ಹಾಗೂ  1250 ರೂಪಾಯಿ, ಮೂರು ಮೊಬೈಲ್ ಫೋನ್ ಗಳನ್ನು ಜಪ್ತಿ ಪಡಿಸಿಕೊಂಡಿದ್ದಾರೆ.  ಶಿರಸಿ ಹೊಸ ಮಾರುಕಟ್ಟೆ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾರ್ಯಚರಣೆಯಲ್ಲಿ  ಶಿರಸಿ ಹೊಸ ಮಾರುಕಟ್ಟೆ ಪೊಲೀಸ ಠಾಣೆಯ ಪಿಎಸ್ಐ ಭೀಮಾಶಂಕರ ಸಿನ್ನೂರ ಸಂಗಣ್ಣ, ಶ್ರೀಮತಿ ಜಯಶ್ರೀ ಶಾನಭಾಗ ಹಾಗೂ ಸಿಬ್ಬಂದಿಗಳಾದ ಮೊಹಮ್ಮದ ಇಸ್ಮಾಯಿಲ್ ಕೋಣನಕೇರಿ,  ರಾಮಯ್ಯ ಪೂಜಾರಿ,  ಹನುಮಂತ ಮಾಕಾಪುರ, ಮೋಹನ ನಾಯ್ಕ, ಪಾಂಡುರಂಗ ನಾಗೋಜಿ ಭಾಗವಹಿಸಿದ್ದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...