ಭಟ್ಕಳದ ರಹಮತಾಬಾದಿನಲ್ಲಿ ಮನೆ ಕಳ್ಳತನ. ಔತಣಕೂಟಕ್ಕೆ ಹೋಗಿ ಬರುವುದರೊಳಗೆ ಕಳ್ಳರ ಕೃತ್ಯ.

Source: SO News | By Laxmi Tanaya | Published on 30th September 2022, 6:14 PM | Coastal News | Don't Miss |

ಭಟ್ಕಳ : ಪಟ್ಟಣದ ರಹಮತಾಬಾದಿನ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣಗಳನ್ನ  ಕಳ್ಳತನವನ್ನ ಮಾಡಿದ್ದಾರೆ. 

ಅಬ್ದುಲ್ ಅಜೀಜ್ ಅಜಾಯಿಬ್  ಎಂಬುವವರ ಕುಟುಂಬದವರು ಮೂರು ಗಂಟೆಗಳ ಕಾಲ ಔತಣಕೂಟಕ್ಜೆ ಮನೆಯವರು  ಹೋಗಿದ್ದರು. ಗುರುವಾರ ರಾತ್ರಿ 8:45 ರ ಸುಮಾರಿಗೆ ಸಂಬಂಧಿಕರ  ಮನೆಗೆ ಹೋಗಿ ವಾಪಾಸ್  ಬಂದಾಗ ಮನೆಯ ಹಿಂಬಾಗಿಲು ಮತ್ತು ಫೈಬರ್ ಬಾಗಿಲು ಮುರಿದಿರುವುದು ಕಂಡುಬಂದಿದೆ. ಹಗ್ ಹಾಗೆಯೇ ಕಬೋರ್ಡಿನಲ್ಲಿ ಇಟ್ಟಿದ್ದ ಬ್ಯಾಗಿನಿಂದ  ಆಭರಣಗಳು ಕಳ್ಳತನವಾಗಿದೆ ಎಂದು  ಸಯಾನ್ ಜಾಕ್ಟಿ  ಹೇಳಿದ್ದಾರೆ.

ಕಳ್ಳರು ಕಬ್ಬಿಣದ ರಾಡ್ ಸಹಾಯದಿಂದ ಮನೆಯ ಹಿಂಬಾಗಿಲನ್ನು ತೆರೆಯಲು ಯತ್ನಿಸಿದ್ದಾರೆ.  ನಂತರ ಕಳ್ಳರು ಒಳಗೆ ಪ್ರವೇಶಿಸಿ ಫೈಬರ್ ಬಾಗಿಲು ಮುರಿದು ಒಳ ಪ್ರವೇಶಿಸಿದ್ದಾರೆ. 

ಈ ಬಗ್ಗೆ  ಭಟ್ಕಳ ರೂರಲ್  ಪೊಲೀಸರಿಗೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶುಕ್ರವಾರ ಕಾರವಾರದಿಂದ ಬೆರಳಚ್ಚು ತಜ್ಞರೊಂದಿಗೆ ಶ್ವಾನದಳದೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. 

 ಸರ್ಕಲ್ ಇನ್ಸ್ ಪೆಕ್ಟರ್ ಮಹಾಬಲೇಶ್ವರ ನಾಯ್ಕ್, ಪಿಎಸ್ ಐ ಭರತ್ ಮತ್ತಿತರ ಅಧಿಕಾರಿಗಳು ಅಗತ್ಯ ಮಾಹಿತಿ ಪಡೆದುಕೊಂಡಿದ್ದು, ತನಿಖೆ ನಡೆಸಿದ್ದಾರೆ.

ಈ ಕಳ್ಳತನದ ಬಗ್ಗೆ ಸ್ಥಳೀಯರು ಮಾತನಾಡಿ, ಜಾಮಿಯಾಬಾದ್ ರಸ್ತೆ, ಮದೀನಾ ಕಾಲೋನಿ ಮತ್ತು ರಹಮತಾಬಾದ ಹಲವು ಮನೆಗಳಲ್ಲಿ ಕೆಲವು ಸಮಯಗಳಿಂದ ಕಳ್ಳತನದ ಘಟನೆಗಳು ನಡೆದಿವೆ. ಆದರೆ ಇದುವರೆಗೆ ಒಬ್ಬ ಕಳ್ಳರ ಸುಳಿವು ಸಿಕ್ಕಿಲ್ಲ. ಹೀಗಾಗಿ ಮನೆ ಮುಚ್ಚಿ ಕೆಲವು ಗಂಟೆ ಹೊರಗೆ ಹೋಗುವುದೇ ದುಸ್ತರವಾಗಿದೆ. ನಿರಂತರವಾಗಿ ಕಳ್ಳತನದ ಘಟನೆಗಳು ಇಲ್ಲಿ ನಡೆಯುತ್ತಿವೆ ಎನ್ನುತ್ತಾರೆ.

Read These Next

ಕಾರವಾರ: ಹಣ, ಉಡುಗೊರೆ ಹಂಚಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಿ : ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿ ಕುಮಾರ್

ಮತದಾರರಿಗೆ ಹಣ, ಉಡುಗೊರೆ ಮತ್ತಿತರ ಆಮಿಷಗಳನ್ನು ಒಡ್ಡುವುದರ ಕುರಿತಂತೆ ತೀವ್ರ ನಿಗಾ ವಹಿಸಬೇಕು, ಈ ಕುರಿತಂತೆ ದೂರುಗಳು ಬಂದ ...

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...