ಗೋಡೆ ಕುಸಿದು ಕಾರ್ಮಿಕ ಮಹಿಳೆ ಸಾವು

Source: so news | By Manju Naik | Published on 19th May 2019, 7:06 PM | Coastal News | Don't Miss |

ಕಾರವಾರ : ಶಾಲೆಯ ಗೋಡೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಗೋಡೆ ಕುಸಿದು ಬಿದ್ದು ಕಾರ್ಮಿಕ ದಂಪತಿ ಪೈಕಿ ಪತ್ನಿ ಮೃತಪಟ್ಟು, ಪತಿ ಗಂಭಿರವಾಗಿ ಗಾಯಗೊಂಡ ಘಟನೆ ನಗರದಲ್ಲಿ ಶನಿವಾರ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ಮೂಲದ ಕಟ್ಟಡ ಕಾರ್ಮಿಕ ರಾಮವ್ವ ಚಿತವಾಡಿ(36) ಘಟನೆಯಲ್ಲಿ ಮೃತಪಟ್ಟ ಮಹಿಳೆ. ಇವರ ಪತಿ ಯಮನೂರು ಬಸಪ್ಪ ಚಿತವಾಡಿ(40) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. 
ನಗರದ ಸರಕಾರಿ ಪ್ರೌಢ ಶಾಲೆಯ ಹಿಂಭಾಗದ ಗೋಡೆ ತೆರವು ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಅವರಿಬ್ಬರ ಮೇಲೆ ಗೋಡೆ ಬಿದ್ದಿದೆ. ಇದರಿಂದಾಗಿ ರಾಮವ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿ ಯಮನೂರ ಅವರಿಗೆ ಸೊಂಟ ಮತ್ತು ತಲೆಗೆ ಪೆಟ್ಟು ಬಿದ್ದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.

Read These Next

ಪ್ರಕೃತಿ ರಕ್ಷಣೆಗೆ  ಪ್ರತಿಯೊಬ್ಬರು ಎರಡು ಸಸಿಗಳನ್ನು ನೆಡಬೇಕು: ನೀಲಕಂಠಮಠದ ಮಹಾಸ್ವಾಮಿ

ಜೂನ್ ತಿಂಗಳು ಮುಗಿಯುತ್ತಾ ಬಂತು. ಆದರೆ ಸಮರ್ಪಕವಾದ ಮಳೆ ಮಾತ್ರ ಈವರೆಗೂ ಆಗಿಲ್ಲ. ಇದಕ್ಕೆಲ್ಲ ಅರಣ್ಯ ಸಂಪತ್ತಿನ ನಾಶವೇ ಕಾರಣ. ...