ವ್ಯಾಟಿಕನ್ ಪೋಪ್ ಮುಡಿಗೇರಿದ ಭಟ್ಕಳದ ಲಾವಂಚ ದಿವ್ಯ ಸಂಸ್ಕಾರ

Source: sonews | By Staff Correspondent | Published on 15th November 2019, 6:48 PM | Coastal News | Don't Miss |

ಭಟ್ಕಳ: ಭಟ್ಕಳ ತಾಲೂಕಿನ ಬೆಂಗ್ರೆಯ ಉಸಿರ ಕೈಗಾರಿಕೆಯ ಉದ್ದಿಮೆ ಎಂ ಡಿ ಮ್ಯಾಥ್ಯೂ ತಯಾರಿಸಿದ ಲಾವಂಚ ಕರಕುಶಲ ವಸ್ತುಗಳು ವಿಶ್ವದ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ರಿಗೆ ರೋಮ್ ನಲ್ಲಿ ಕರ್ನಾಟಕದ ಬಿಶಪ್ ಲಾರೆನ್ಸ್ ಮೂಲಕ ನೀಡಿ ಗೌರವಿಸಲಾಯಿತು.

ಇಟಲಿ ದೇಶದ  ರೋಮ್ ನಗರದ ವ್ಯಾಟಿಕನ್  ಸಿಟಿಯಲ್ಲಿ ವಿಶ್ವದ ಕ್ಯಾಥೋಲಿಕ್ ಚರ್ಚ್ ನ ಪರಮೋಚ್ಛ ಧರ್ಮ ಗುರುಗಳಾದ ಪೋಪ್ಫ್ರಾನ್ಸಿಸ್ ರವರ ಅಧ್ಯಕ್ಷತೆಯಲ್ಲಿ ವ್ಯಾಟಿಕನ್ ಸಿಟಿಯಲ್ಲಿ ಇತ್ತೀಚಿಗೆ ಭಾರತದ ಬಿಷಪ್ ಗಳ ಮಹಾಸಭೆಯು ಜರುಗಿತು.

ಬಿಷಪ್‍ಗಳ ಮಹಾಸಭೆಯಲ್ಲಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಂಗ್ರೆಯ ಉಸಿರಾ ಕೈಗಾರಿಕೋದ್ಯಮಿ ಎಂ.ಡಿ.ಮ್ಯಾಥ್ಯೂ ತಯಾರಿಸಿದ ಲಾವಂಚದ ಸುಂದರವಾದ ಹಾರ ಮತ್ತು  ಲಾವಂಚ ದಿಂದ ತಯಾರಿಸಿದ ಅಲಂಕೃತ ದಿವ್ಯ ಸಂಸ್ಕಾರದ  ( Holy Sacrement )    ಆಕೃತಿ ಕಾಣಿಕೆಯಾಗಿ ಬೆಳ್ತಂಗಡಿಯ ಬಿಷಪ್ ಲಾರೆನ್ಸ್ ರವರ ಮೂಲಕ ಗೌರವಪೂರ್ವಕವಾಗಿ  ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್   ಅವರಿಗೆ  ಉಡುಗೊರೆಯಾಗಿ ಸಮರ್ಪಿಸಲಾಯಿತು.

ಲಾವಂಚದ ಕರಕುಶಲ ವಸ್ತುಗಳನ್ನು ಮೆಚ್ಚಿಕೊಂಡ  ಪೋಪ್ ರವರು   ಪ್ರಸಿದ್ಧ  ವ್ಯಾಟಿಕನ್ ಮ್ಯೂಸಿಯಂನಲ್ಲಿ ಇಡಲಾಗುತ್ತದೆ ಎಂದು ಬಿಷಪ್ ಲಾರೆನ್ಸ್  ಮೂಲಕ ತಿಳಿದು ಬಂದಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ 

Read These Next

ಭಟ್ಕಳ ನಗರ ಸೇರಿದಂತೆ ಜಾಲಿ ಪ.ಪಂ ಹಾಗೂ ಹೆಬಳೆ ಪಂಚಯತ್ ವ್ಯಾಪ್ತಿಯಲ್ಲಿ ಸಂ.6ರಿಂದ ಬೆ.6 ಗಂಟೆ ವರೆಗೆ ಲಾಕ್ಡೌನ್

ಭಟ್ಕಳ: ಭಟ್ಕಳ ನಗರ ಸೇರಿದಂತೆ ಜಾಲಿ ಪಟ್ಟಣ ಪಂಚಾಯತ್ ಹಾಗೂ ಹೆಬಳೆ ಪಂಚಾತಯತ್ ವ್ಯಾಪ್ತಿಯಲ್ಲಿ ಸಂಜೆ 6ಗಂಟೆಯಿಂದ ಬೆಳಿಗ್ಗೆ 6ಗಂಟೆ ...

ಭಟ್ಕಳ ನಗರ ಸೇರಿದಂತೆ ಜಾಲಿ ಪ.ಪಂ ಹಾಗೂ ಹೆಬಳೆ ಪಂಚಯತ್ ವ್ಯಾಪ್ತಿಯಲ್ಲಿ ಸಂ.6ರಿಂದ ಬೆ.6 ಗಂಟೆ ವರೆಗೆ ಲಾಕ್ಡೌನ್

ಭಟ್ಕಳ: ಭಟ್ಕಳ ನಗರ ಸೇರಿದಂತೆ ಜಾಲಿ ಪಟ್ಟಣ ಪಂಚಾಯತ್ ಹಾಗೂ ಹೆಬಳೆ ಪಂಚಾತಯತ್ ವ್ಯಾಪ್ತಿಯಲ್ಲಿ ಸಂಜೆ 6ಗಂಟೆಯಿಂದ ಬೆಳಿಗ್ಗೆ 6ಗಂಟೆ ...