ಕರ್ತವ್ಯದ ನಡುವೆ ಮಾನವೀಯತೆ ಮೆರೆದ ಪೊಲೀಸರು

Source: sonews | By Staff Correspondent | Published on 26th March 2020, 6:47 PM | Coastal News | Don't Miss |

ಭಟ್ಕಳ: ಈ 21 ದಿನಗಳ ಬಂದ್ ಸಮಯದಲ್ಲಿ ಎಲ್ಲಿಯೂ ಹೊಟೇಲ್‍ಗಳಾಗಿ ಕುಡಿಯಲು ನೀರು ಸಹ ಸಿಗದ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಮನೆಮಠ ಇದ್ದರು ತಮ್ಮ ತಮ್ಮ ಮನೆಗಳಲ್ಲಿದ್ದಕೊಂಡು ಹೆಂಡತಿ ಮಕ್ಕಳೊಂದಿಗೆ ಹಾಯಾಗಿದ್ದಾರೆ. 

ರಸ್ತೆ ಬದಿ ಭಿಕ್ಷೆ ಬೇಡಿ, ಹೋಟೆಲ್ ನಲ್ಲಿ ಉಂಡು ದೇವಸ್ಥಾನ, ಮಸೀದಿ ಬಸ್ ನಿಲ್ದಾಣದ ಎದರು ರಾತ್ರಿ ಕಳೆಯುವ ನಿರ್ಗತಿಕರ ಸ್ಥಿತಿ ಚಿಂತಾಜನಕವಾಗುತ್ತಿದ್ದು ಯಾರಾದರೂ ತಿನ್ನಲು ಕೊಟ್ಟು ಹೋಗುವರೇ ಎಂಬ ಆಸೆಗಣ್ಣಿನಿಂದ ರಸ್ತೆಯನ್ನೇ ನೋಡುತ್ತ ಕುಳಿತ್ತಿರುತ್ತಾರೆ. ಇಂತಹ ಸನ್ನಿವೇಶದಲ್ಲಿ ಭಟ್ಕಳದ ಉರಿಬಿಸಿಲಿನಲ್ಲಿ ಕರ್ತವ್ಯ ನಿರತ ಪೊಲೀಸರು ತಮ್ಮ ಕರ್ತವ್ಯದ ನಡುವೆಯೂ ಮಾನವೀಯತೆಯನ್ನು ಮರೆದು ರಸ್ತೆ ಬದಿ ಭಿಕ್ಷೆ ಬೇಡಿ ಬದುಕುತ್ತಿರುವವರಿಗೆ ಆಸರೆಯಾಗಿ ತಮ್ಮ ಪಾಲಿನ ಅನ್ನ ನೀರಿನಲ್ಲಿ ಅವರಿಗೊಂದಿಷ್ಟು ಪಾಲು ನೀಡಿ ಅವರ ಬದುಕಿಗೆ ಆಸರೆಯಾಗಿದ್ದಾರೆ. 

ಯಾವಾಗಲೂ ಪೊಲೀಸರೆಂದರೆ ಸಿಡುಕು ಸ್ವಭಾವದವರು, ಅವರಲ್ಲಿ ಮಾವನೀಯತೆ ಎಂಬುದಿಲ್ಲ ಎನ್ನುವ ಮಂದಿಗೆ ಪೊಲೀಸರು ಕೂಡ ಮನುಷ್ಯರು, ನಮ್ಮಲ್ಲಿಯೂ ಕೂಡ ಮಾನವೀಯತೆ ಹೃದಯವಿದೆ ಎಂದು ತೋರಿಸಿಕೊಟ್ಟಿರುವ ಇಲ್ಲಿನ ಪೂಲೀಸರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.  

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...