ನಾಪತ್ತೆಯಾಗಿದ್ದ ಭಟ್ಕಳ ಆಸ್ಪತ್ರೆಯ ವೈದ್ಯ ದಿಢೀರ್ ಪತ್ತೆ: ವೈದ್ಯರ ನಾಪತ್ತೆ ಪ್ರಕರಣಕ್ಕೆ ಅಂತ್ಯ ಹಾಡಿದ ಪೋಲಿಸರು

Source: SO News | By MV Bhatkal | Published on 21st October 2023, 11:40 PM | Coastal News | Don't Miss |

ಭಟ್ಕಳ : ಕಳೆದ ಅಕ್ಟೋಬರ್ 10 ರಂದು ಕರ್ತವ್ಯಕ್ಕೆ ಹೋಗುತ್ತೇನೆ ಎಂದು ಮನೆಯಿಂದ ತೆರಳಿ ನಾಪತ್ತೆಯಾದ ಭಟ್ಕಳ ಸರ್ಕಾರಿ ಆಸ್ಪತ್ರೆಯ ಚರ್ಮ ರೋಗ ತಜ್ಞ ವೈದ್ಯ ಡಾ. ಉಮೇಶ ಎಚ್.ಟಿ. ಸಂಜೆ ಭಟ್ಕಳ ಗ್ರಾಮೀಣ ಠಾಣೆಗೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಹಾಜರಾಗಿದ್ದಾರೆ.
ಪಟ್ಟಣದ ಡಿ.ಪಿ. ಕಾಲೋನಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಮೂಲತಃ ಹರಪನಹಳ್ಳಿ ಹಳ್ಳಿ ನಿವಾಸಿ ಡಾ. ಎಚ್.ಟಿ ಉಮೇಶ ಅಕ್ಟೋಬರ್ 10 ರ ಬೆಳಿಗ್ಗೆ ತನ್ನ ಮನೆಯಿಂದ ಕರ್ತವ್ಯಕ್ಕೆಂದು ತೆರಳಿದವರು ಮರಳಿ ಮನೆಗೆ ಬಾರದೆ ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದರು. ಈ ಕುರಿತು ವೈದ್ಯರ ಪತ್ನಿ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ದಾಖಲಾದ ದಿನದಿಂದ ಪೊಲೀಸರ ಸತತ ಪರಿಶ್ರಮದ ಪರಿಣಾಮ ವೈದ್ಯ ಡಾ. ಉಮೇಶ ಎಚ್.ಟಿ ಮುಂಬೈನಲ್ಲಿ ಇರುವುದು ಪತ್ತೆ ಹಚ್ಚಲಾಗಿತ್ತು. ನಿರಂತರವಾಗಿ ಪೋಲಿಸರು ವೈದ್ಯರ ಸಂಪರ್ಕ ಮಾಡುತ್ತಾ ದೂರದ ಮುಂಬಯಿನಲ್ಲಿ ವೈದ್ಯ ಉಮೇಶ ಇರುವುದು ದೃಢಪಡಿಸಿಕೊಂಡಿದ್ದರು.
ಗ್ರಾಮೀಣ ಠಾಣೆಯ ಸಿಪಿಐ ಚಂದನ ಗೋಪಾಲ  ಹಾಗೂ ಪಿಎಸ್ಐ ಮಯೂರ,ಪಟ್ಟಣಶೆಟ್ಟಿ,ಮತ್ತು ಪಿಎಸ್ಐ ಶ್ರೀಧರ್ ನಾಯ್ಕ ಅವರು ವೈದ್ಯರನ್ನು ಸಂಪರ್ಕಿಸಿದ್ದು, ಬಳಿಕ ಕುಟುಂಬದ ಸದಸ್ಯರೊಂದಿಗೆ ಭಟ್ಕಳ ಗ್ರಾಮೀಣ ಠಾಣೆಗೆ ಹಾಜರಾಗಿದ್ದಾರೆ. 
ಈ ಮೂಲಕ ಭಟ್ಕಳದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ವೈದ್ಯರ ನಾಪತ್ತೆ ಪ್ರಕರಣಕ್ಕೆ ಅಂತ್ಯ ಸಿಕ್ಕಂತಾಗಿದೆ.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...