ಭಟ್ಕಳ ರಾ.ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿ. ಖಾಲಿಯಾಗಿದ್ದಕ್ಕೆ ತಪ್ಪಿದ ಬಾರೀ ಅನಾಹುತ.

Source: SO News | By Laxmi Tanaya | Published on 14th October 2020, 8:49 AM | Coastal News | Don't Miss |

ಭಟ್ಕಳ: ಪಟ್ಟಣದ ಕೋಟೇಶ್ವರ ನಗರ ಸಮೀಪದ ನಿಶಾತ್ ನರ್ಸಿಂಗ್ ಹೋಮ್ ಬಳಿ‌ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎಚ್‌ಪಿ ಕಂಪನಿಗೆ ಸೇರಿದ ಖಾಲಿ ಟ್ಯಾಂಕರ್ ಆಯತಪ್ಪಿ ಹೆದ್ದಾರಿಯಿಂದ ಕೆಳಕ್ಕೆ ಬಿದ್ದಿದೆ.

ಜಾರ್ಖಂಡ್ ಮೂಲದ ಅಜಯ್ ಯಾದವ್ (25) ಅಪಾಯದಿಂದ ಪಾರಾಗಿದ್ದಾರೆ. ಟ್ಯಾಂಕರ್ ಗೋವಾದಿಂದ ಮಂಗಳೂರಿನ ಕಡೆಗೆ ತೆರಳುತ್ತಿತ್ತು. ಹಿಂದೂಸ್ತಾನ್ ಪೆಟ್ರೋಲಿಯಂ ಕಂಪೆನಿಗೆ ಸೇರಿದ ಈ ಟ್ಯಾಂಕರ್ ಬಿದ್ದ ಸ್ಥಳದ ಸಮೀಪದಲ್ಲೇ ಸಾಕಷ್ಟು ಮನೆಗಳು, ಖಾಸಗಿ ಆಸ್ಪತ್ರೆ, ಹೋಟೆಲ್, ಬ್ಯಾಂಕ್, ಪೋಸ್ಟ್‌ ಆಫೀಸ್, ಗ್ಯಾರೇಜ್ ಗಳಿದ್ದು, ಒಂದು ವೇಳೆ ಗ್ಯಾಸ್ ತುಂಬಿದ್ದಾಗಿದ್ದರೇ ಬಾರೀ ಅಪಾಯ ಆಗುವ ಸಾಧ್ಯತೆ ಇತ್ತು. ಟ್ಯಾಂಕರ್ ಖಾಲಿಯಾಗಿದ್ದಕ್ಕೆ ಜನರು ಸಮಧಾನಪಡುವಂತಾಯಿತು.

ಸ್ಥಳಕ್ಕೆ ಭಟ್ಕಳ ನಗರ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಲ್ಡಿಯಾದ ಟ್ಯಾಂಕರ್ ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...