ಮಕ್ಕಳನ್ನು ಒಳ್ಳೆಯ ಹವ್ಯಾಸಗಳತ್ತ ಆಕರ್ಷಿಸುವುದು ಪಾಲಕರ ಕರ್ತವ್ಯ : ಟ. ಗೋವಿಂದಯ್ಯ

Source: S O News Service | By I.G. Bhatkali | Published on 26th May 2019, 1:42 AM | Coastal News | Don't Miss |

ಕಾರವಾರ :  ಮಕ್ಕಳನ್ನು ಒಳ್ಳೆಯ ಹವ್ಯಾಸಗಳತ್ತ ಆಕರ್ಷಿಸಿ ಉತ್ತಮ ನಾಗರಿಕರನ್ನಾಗಿ ಮಾಡುವುದು ಪಾಲಕರ ಕರ್ತವ್ಯವಾಗಿರುತ್ತದೆ ಎಂದು ಹಿರಿಯ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಗೋವಿಂದಯ್ಯ ಹೇಳಿದರು. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಶುಕ್ರವಾರ ಮುಕ್ತಾಯಗೊಂಡ ಬೇಸಿಗೆ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳು ಪಾಲಕರನ್ನು ಅನುಕರಣೆ ಮಾಡುವದರಿಂದ ಮೊದಲು ಪಾಲಕರು ಮೋಬೈಲನಂತಹ ವಸ್ತುಗಳನ್ನು ಬದಿಗಿರಿಸಿ, ಪುಸ್ತಕಗಳನ್ನು ಓದುವಂತಹ ಹವ್ಯಾಸ ರೂಡಿಸಿಕೊಂಡಾಗ ಮಕ್ಕಳು ಕೂಡಾ ಪುಸ್ತಕಗಳಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುತ್ತಾರೆ. ಪೋಷಕರು ತಮ್ಮ ಮಕ್ಕಳಿಗೆ ಓದು ಬರಹ ಕಲಿಸುವುದರೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕೆಂದು ಎಂದು ಅಭಿಪ್ರಾಯ ಪಟ್ಟರು. 

ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರವಾರ ಉಪ ವಿಭಾಗಾಧಿಮಕಾರಿ ಅಭಿಜೀನ್.ಬಿ ಅವರು ಮಾತನಾಡಿ ಬೇಸಿಗೆ ಶಿಬಿರ ಮತ್ತು ಇತರೆ ಶಿಬಿರಗಳಲ್ಲಿ ಭಾಗವಹಿಸುವದರಿಂದ ಮಕ್ಕಳ ಮನೋವಿಕಾಸ ಬೇಳೆಯುತ್ತದೆ. ಪಾಲಕರು ಮತ್ತು ಶಿಕ್ಷಕರು ಮಕ್ಕಳಲ್ಲಿ ಸಕರಾತ್ಮಕ ಚಿಂತನೆಗಳನ್ನು ಹೇಳಿಕೊಡಬೇಕು. ಇದರಿಂದ ಭವಿಷ್ಯದಲ್ಲಿ ಸಮಸ್ಯೆಗಳು ಬಂದಾಗ ಎದುರಿಸುವ ಸಾಮಥ್ರ್ಯ ಬರುತ್ತದೆ ಎಂದು ಹೇಳಿದರು. 

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪಿ.ಎಚ್.ನಾಯ್ಕ ಸ್ವಾಗತಿಸಿದರು. ಶ್ರೀಮತಿ ಗೀತಾ ಕಾರ್ಯಕ್ರಮದ ವರÀದಿ ವಾಚಿಸಿದರು. ಅನಿಲ ಜೆ ಪವಾರ ನಿರೂಪಿಸಿದರು. ಕಲ್ಪನಾ ಕಲಾಲೋಕದ ಅಧ್ಯಕ್ಷ ಬಿ.ಎನ್ ಸೂರ್ಯಪ್ರಕಾಶ ವಂದನಾರ್ಪಣೆ ಸಲ್ಲಿಸಿದರು.     
 

Read These Next

ಪ್ರಕೃತಿ ರಕ್ಷಣೆಗೆ  ಪ್ರತಿಯೊಬ್ಬರು ಎರಡು ಸಸಿಗಳನ್ನು ನೆಡಬೇಕು: ನೀಲಕಂಠಮಠದ ಮಹಾಸ್ವಾಮಿ

ಜೂನ್ ತಿಂಗಳು ಮುಗಿಯುತ್ತಾ ಬಂತು. ಆದರೆ ಸಮರ್ಪಕವಾದ ಮಳೆ ಮಾತ್ರ ಈವರೆಗೂ ಆಗಿಲ್ಲ. ಇದಕ್ಕೆಲ್ಲ ಅರಣ್ಯ ಸಂಪತ್ತಿನ ನಾಶವೇ ಕಾರಣ. ...