ಭಟ್ಕಳ: ಪಟಾಕಿ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ.

Source: S O News | By Laxmi Tanaya | Published on 12th October 2023, 6:58 PM | Don't Miss | Coastal News |

ಭಟ್ಕಳ:  ಅತ್ತಿಬೇಲಿಯಲ್ಲಿ ಸಂಭವಿಸಿದ ಪಟಾಕಿ ದುರಂತ ಘಟನೆ ಹಿನ್ನಲೆಯಲ್ಲಿ ಭಟ್ಕಳ ತಹಸೀಲ್ದಾರ ನೇತೃತ್ವದ ತಂಡ  ಪಟ್ಟಣದಲ್ಲಿ ಪಟಾಕಿ ಮಾರಾಟದ ಅಂಗಡಿ ಮಳಿಗೆಗಳ ಮೇಲೆ ದಾಳಿ ನಡೆಸಿದ್ದಾರೆ.

ತಹಸೀಲ್ದಾರ ಎ.ತಿಪ್ಪೇಸ್ವಾಮಿ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ನಗರ ಠಾಣೆ ಪಿಎಸ್‌ಐ ಶಿವಾನಂದ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳು ಪಟ್ಟಣದ ನಾನಾ ಕಡೆ ಪಟಾಕಿ ಮಾರಾಟ ಮಾಡುವ ಅಂಗಡಿ ಮತ್ತು  ಗೋದಾಮುಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು.

ಹಳೆ ಬಸ್ ನಿಲ್ದಾಣ, ಸ೦ಶುದ್ದೀನ ಸರ್ಕಲ್,   ಮುಖ್ಯ ರಸ್ತೆ, ಮಾರಿಗುಡಿ, ಹೂವಿನ ಪೇಟೆ ಸೇರಿದಂತೆ ಒಟ್ಟು ಸುಮಾರು ಹತ್ತಕ್ಕೂ ಹೆಚ್ಚು ಅಂಗಡಿಗಳನ್ನ  ಪರಿಶೀಲಿಸಿದರು.  ಅನಧಿಕೃತವಾಗಿ ಪಟಾಕಿ ಮಾರಾಟ ಮಾಡದಂತೆ  ಅಂಗಡಿಕಾರರಿಗೆ ಎಚ್ಚರಿಕೆ ನೀಡಿದರು.  ಸೂಚನೆ ಮೀರಿ  ಮಾರಾಟ ಮಾಡಿದಲ್ಲಿ ಕ್ರಮ ಕೈಗೊಳ್ಳುವ  ಎಚ್ಚರಿಕೆ ನೀಡಿದರು.

ದಾಳಿ ಸಂದರ್ಭದಲ್ಲಿ  ಲೈಸೆನ್ಸ್ ಪಡೆದ ಅಂಗಡಿ ಮಳಿಗೆಯಲ್ಲಿ ಸ್ಪಾರ್ಕಲ್ (ಸುರಸುರಬತ್ತಿ) ಪ್ಯಾಕ್ ಪತ್ತೆಯಾಗಿದ್ದು  ಪುರಸಭೆಯಿಂದ 500 ರೂ. ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...