'ಮೈ ಲಾರ್ಡ್' ಎಂದು ಕರೆಯುವುದನ್ನು ನಿಲ್ಲಿಸಿ, ನಿಮಗೆ ನನ್ನ ಅರ್ಧ ವೇತನವನ್ನು ನೀಡುತ್ತೇನೆ; ಸುಪ್ರೀಂ ನ್ಯಾಯಾಧೀಶ

Source: Vb | By I.G. Bhatkali | Published on 4th November 2023, 9:58 AM | National News |

ಹೊಸದಿಲ್ಲಿ: ನ್ಯಾಯಾಂಗ ಕಲಾಪಗಳ ಸಂದರ್ಭದಲ್ಲಿ 'ಮೈ ಲಾರ್ಡ್ ಮತ್ತು ಯುವರ್ ಲಾರ್ಡ್‌ ಶಿಪ್ಸ್' ಎಂದು ಪದೇ ಪದೇ ಸಂಬೋಧಿಸುವ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಪಿ.ಎಸ್. ನರಸಿಂಹ ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಬುಧವಾರ ವಿಚಾರಣೆಯ ಸಂದರ್ಭದಲ್ಲಿ ನ್ಯಾ.ಎ.ಎಸ್.ಬೋಪಣ್ಣ ನೇತೃತ್ವದ ಪೀಠದಲ್ಲಿ ಆಸೀನರಾಗಿದ್ದ ನ್ಯಾ.ನರಸಿಂಹ ಅವರು “ನೀವು ಎಷ್ಟು ಸಲ 'ಮೈ ಲಾರ್ಡ್' ಎಂದು ಹೇಳುತ್ತೀರಿ? ನೀವು ಇದನ್ನು ನಿಲ್ಲಿಸಿದರೆ ನಾನು ನನ್ನ ವೇತನದಲ್ಲಿ ಅರ್ಧವನ್ನು ನಿಮಗೆ ಕೊಡುತ್ತೇನೆ” ಎಂದು ಹಿರಿಯ ವಕೀಲರೋರ್ವರನ್ನುದ್ದೇಶಿಸಿ ಹೇಳಿದರು.

ವಕೀಲರು ವಾದದ ಸಂದರ್ಭದಲ್ಲಿ ನ್ಯಾಯಾಧೀಶರನು ಮೈ ಲಾರ್ಡ್' ಅಥವಾ 'ಯುವರ್ ಲಾರ್ಡ್ ಶಿಪ್ಸ್ ಎಂದು ಸಂಬೋಧಿಸುತ್ತಾರೆ. ಈ ಪದ್ಧತಿಯ ವಿರೋಧಿಗಳು ಹೇಳುವಂತೆ ಇದು ವಸಾಹತುಶಾಹಿ ಯುಗದ ಪಳೆಯುಳಿಕೆಯಾಗಿದೆ ಮತ್ತು ಗುಲಾಮಗಿರಿಯ ಸಂಕೇತವಾಗಿದೆ.

ಇದರ ಬದಲಿಗೆ 'ಸರ್' ಎಂದು ನೀವೇಕೆ ಸಂಬೋಧಿಸಬಾರದು ಎಂದು ಪ್ರಶ್ನಿಸಿದ ನ್ಯಾ.ನರಸಿಂಹ, ಇಲ್ಲದಿದ್ದರೆ ಹಿರಿಯ ವಕೀಲರು ಎಷ್ಟು ಸಾರಿ 'ಮೈಲಾರ್ಡ್' ಎಂದು ಹೇಳಿದ್ದಾರೆ ಎಂದು ಎಣಿಸಲು ಆರಂಭಿಸುತ್ತೇನೆ ಎಂದರು. 2006ರಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ,ಯಾವುದೇ ವಕೀಲರು ನ್ಯಾಯಾಧೀಶರನ್ನು 'ಮೈ ಲಾರ್ಡ್' ಮತ್ತು 'ಯುವ‌ ಲಾರ್ಡ್‌ಸ್ಟ್' ಎಂದು ಸಂಬೋಧಿಸಕೂಡದು ಎಂಬ ನಿರ್ಣಯವನ್ನು ಅಂಗೀಕರಿಸಿತ್ತು, ಆದರೆ ಆಚರಣೆಯಲ್ಲಿ ಅದನ್ನು ಅನುಸರಿಸಲಾಗುತ್ತಿಲ್ಲ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...