ಉತ್ತರಾಖಂಡ: ಭಾರತೀಯ ಕಾರ್ಮಿಕರ ಮೇಲೆ ನೇಪಾಳಿ ನಾಗರಿಕರಿಂದ ಕಲ್ಲು ತೂರಾಟ

Source: Vb | By I.G. Bhatkali | Published on 26th December 2022, 9:58 AM | National News |

ಡೆಹ್ರಾಡೂನ್: ಉತ್ತರಾ ಖಂಡದ ಧಾರ್‌ಚುಲಾದ ಭಾರತ- ನೇಪಾಳ ಗಡಿಯಲ್ಲಿ ಕಾರ್ಯ ನಿರ್ವ ಹಿಸುತ್ತಿದ್ದ ಭಾರತೀಯ ಕಾರ್ಮಿಕರ ಮೇಲೆ ಶುಕ್ರವಾರ ನೇಪಾಳಿ ನಾಗರಿಕರು ಕಲ್ಲು ತೂರಾಟ ನಡೆಸಿದ್ದಾರೆ.

ಉಭಯ ರಾಷ್ಟ್ರಗಳ ನಡುವೆ ಹರಿಯುತ್ತಿರುವ ಕಾಳಿ ನದಿಗೆ ತಡೆ ಗೋಡೆ ನಿರ್ಮಾಣ ಮಾಡು ತ್ತಿದ್ದ ಕಾರ್ಮಿಕರ ಮೇಲೆ ನೇಪಾಳಿ ನಾಗರಿಕರು ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದಿಂದ ಎರಡು ಡಂಪರ್ ಟ್ರಕ್‌ನ ಕಿಟಕಿ ಗಾಜುಗಳಿಗೆ, ಎರಡು ಟಿಪ್ಪರ್ ಟ್ರಕ್‌ಗಳಿಗೆ ಹಾಗೂ ಕೆಲವು ಬುಲ್ಲೋಜರ್‌ಗಳಿಗೆ ಹಾನಿ ಉಂಟಾಗಿವೆ.

ದಾರ್‌ಚುಲಾನ ಘಾಟ್ಟೋಲಾ ಪ್ರದೇಶ 2013ರಲ್ಲಿ ಬೃಹತ್ ನೆರೆಗೆ ಸಾಕ್ಷಿಯಾಗಿತ್ತು. ಆನಂತರ ಕಾಳಿ ನದಿ ದಂಡೆಯಲ್ಲಿ ರಕ್ಷಣಾ ತಡೆ ಗೋಡೆಯನ್ನು ನಿರ್ಮಾಣ ಮಾಡಲು ಭಾರತ ಆರಂಭಿ ಸಿತ್ತು.

ಘಟನೆಯ ಕುರಿತು ಮುನ್ನೆಚ್ಚರಿಕೆಯ ಕ್ರಮವಾಗಿ ಉಭಯ ಕಡೆಗಳಲ್ಲಿ ಜಂಟಿ ಸಮೀಕ್ಷೆ ನಡೆಸಲಾಗಿದೆ. ಸದ್ಯೋ ಭವಿಷ್ಯದಲ್ಲಿ ಉನ್ನತಮಟ್ಟದ ಅಧಿ ಕಾರಿಗಳ ಸಭೆಯನ್ನು ಕೂಡಾ ಕರೆಯ ಲಾಗುವುದು'' ಎಂದು ಪಿತೋಡ ಗಢ ಜಿಲ್ಲಾಧಿಕಾರಿ ರೀನಾ ಜೋಷಿ ತಿಳಿಸಿದ್ದಾರೆ.

ಭಾರತೀಯ ನಿರ್ಮಾಣ ಕಾರ್ಮಿ ಮೇಲೆ ಕಲ್ಲು ತೂರಾಟ ಕರ ನಡೆಸಿದವರು ಕಮ್ಯೂನಿಸ್ಟ್ ಪಾರ್ಟಿ ಆಫ್ ನೇಪಾಳ (ಮಾವೋವಾದಿ)ದ ವಿಪ್ಲವ್ ಬಣದ ಸದಸ್ಯರು.

ಭಾರತೀಯ ಕಾರ್ಮಿಕರ ಮೇಲೆ ಡಿಸೆಂಬರ್ 4ರಂದು ಕಲ್ಲು ತೂರಾಟ ನಡೆಸಿದ ನೇಪಾಳಿ ನಾಗರಿಕರ ವಿರುದ್ಧ ಭಾರತದಲ್ಲಿ ದಾಖಲಿಸಿದ ಪ್ರಕರಣವನ್ನು ಹಿಂಪಡೆಯುವಂತೆ ಈ ರಾಜಕೀಯ ಸಂಘಟನೆಯ ಸದಸ್ಯರು ಆಗ್ರಹಿಸುತ್ತಿದ್ದಾರೆ.

ಇದು ನದಿಯ ಹರಿವನ್ನು ನೇಪಾಳದ ಕಡೆಗೆ ತಿರುಗಿಸುತ್ತದೆ. ಹಾಗೂ ತಮ್ಮ ಭಾಗದಲ್ಲಿ ನೆರೆ ಸಂಭವಿಸಬಹುದು ಎಂಬ ಆತಂಕದಿಂದ ನೇಪಾಳದ ಅಧಿಕಾರಿಗಳು ಆರಂಭದಲ್ಲಿ ನದಿಯ ಉದ್ದಕ್ಕೂ ರಕ್ಷಣಾ ಗೋಡೆಯನ್ನು ನಿರ್ಮಿಸಲು ವಿರೋಧಿಸಿದ್ದರು.

“ನಮ್ಮ ಕೆಲಸ 10-15 ದಿನಗಳು ವಿಳಂಬವಾಯಿತು. ಇದೇ ಪರಿಸ್ಥಿತಿ ಮುಂದುವರಿದರೆ, ತೊಂದರೆ ಉಂಟಾಗುತ್ತದೆ. ಕಾರ್ಮಿಕರ ಸುರಕ್ಷೆಗೆ ವ್ಯವಸ್ಥೆ ಮಾಡಬೇಕು. ಎರಡು ಡಂಪರ್ ಟ್ರಕ್‌ಗಳಿಗೆ ಹಾನಿ ಉಂಟಾಗಿವೆ. ಇದಕ್ಕೆ ಪೊಲೀಸರು ಸಾಕ್ಷಿ' ಎಂದು ಯೋಜನಾ ಮ್ಯಾನೇಜರ್ ಇಂದ್ರಜಿತ್ ಶರ್ಮಾ ಅವರು ತಿಳಿಸಿದ್ದಾರೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...