ಎಸ್.ಎಸ್.ಎಲ್.ಸಿ. ಪರೀಕ್ಷೆ ಯಶಸ್ವಿ; ಎಲ್ಲರನ್ನೂ ಅಭಿನಂದಿಸಿದ ಬಿಇಒ ಎಂ.ಆರ್.ಮುಂಜಿ

Source: sonews | By Staff Correspondent | Published on 4th July 2020, 3:24 PM | Coastal News | Don't Miss |

ಭಟ್ಕಳ: ಭಟ್ಕಳ ತಾಲೂಕಿನ 9 ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಿ ಪಾಲಕರ ಹಾಗೂ ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ ಶನಿವಾರ ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಪ್ರತಿ ವರ್ಷದ ಎಸ್‌ ಎಸ್. ಎಲ್. ಸಿ. ಪರೀಕ್ಷೆಗೂ ಈ ವರ್ಷದ ಎಸ್‌ ಎಸ್. ಎಲ್. ಸಿ.ಪರೀಕ್ಷೆಗೂ ಬಹಳಷ್ಟು ಬದಲಾವಣೆ ಇತ್ತು ಕಾರಣ ಈಗಾಗಲೇ ತಮಗೆ ಗೊತ್ತಿರುವ ಹಾಗೆ  ಕರೋನಾ  ಜೊತೆಗಿನ ಹೋರಾಟದ ಮಧ್ಯೆ SSLC ಪರೀಕ್ಷೆಯನ್ನು ಆಯೋಜನೆ ಮಾಡುವುದು. ವಿಶೇಷವಾಗಿ ಪ್ರತಿ ಯೊಬ್ಬರು ಕೂಡ ಪರೀಕ್ಷೆ ಅಗುತ್ತಾ ಇಲ್ಲವಾ ಪರೀಕ್ಷೆ ಮಾಡಿದರೆ ಹೇಗೆ ಮಾಡ್ತಾರೆ ? ಎನ್ನುವ  ಕೂತುಹಲ ಎಲ್ಲರಲ್ಲಿತ್ತು. ಅಂತಹ ಸಂದೇಹಗಳಿಗೆ ಮತ್ತು ಅತ್ಯಂತ ಕಠಿಣ ಸಂದಿಗ್ಧ ಪರಿಸ್ಥಿತಿಯಲ್ಲಿ ಪರೀಕ್ಷೆಯನ್ನು  ಸಮರ್ಪಕವಾಗಿ, ಎಲ್ಲಿಯೂ ಗೊಂದಲಗಳಿಗೆ ಅವಕಾಶ ನೀಡದೇ, ಯಾವುದೇ ಸಮಸ್ಯೆಗಳಿಲ್ಲದೇ, ಅಚ್ಚುಕಟ್ಟಾಗಿ ಬಹಳ ಜವಾಬ್ದಾರಿಯುತವಾಗಿ,  SSLC ಪರೀಕ್ಷೆಯನ್ನು ಯಶಸ್ವಿಗೊಳಿಸಿದ್ದಕ್ಕೆ ತಾಲೂಕಿನ ಮುಖ್ಯ ಅಧೀಕ್ಷಕರಿಗೆ, ಉಪ ಮುಖ್ಯ ಅಧೀಕ್ಷಕರಿಗೆಪರೀಕ್ಷಾ ಮಾರ್ಗಾಧಿಕಾರಿಗಳಿಗೆ, ಪ್ರಶ್ನೆ ಪತ್ರಿಕೆ ಪಾಲಕರಿಗೆ, ಕೊಠಡಿ ಮೇಲ್ವಿಚಾರಕರಿಗೆಮೊಬೈಲ್ ಸ್ವಾಧೀನಾಧಿಕಾರಿಗಳಿಗೆ,   ದೈಹಿಕ ಶಿಕ್ಷಣ ಶಿಕ್ಷಕರುಗಳಿಗೆ, ಸ್ವಯಂ ಸೇವಕರಾದ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರಿಗೆ, ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಅಲ್ಲದೆ ಪ್ರತಿ ಹಂತದಲ್ಲೂ ಮಾರ್ಗದರ್ಶನ ಮಾಡಿದ ಜಿಲ್ಲ ಉಪನಿರ್ದೇಶ ಹರೀಶ್ ಗಾಂವ್ಕರ್, ಜಿಲ್ಲಾ ನೊಡಲ್ ಅಧಿಕಾರಿ ಶ್ರೀಕಾಂತ ಹೆಗಡೆ, ಎನ್ ಜಿ ನಾಯಕ, ಶ್ರೀಮತಿ ಲತಾ ಮೇಡಂ, ಪರೀಕ್ಷಾಕಾರ್ಯದಲ್ಲಿ ಭಾಗಿಯಾದ ಸ್ಥಾನಿಕ ಜಾಗೃತಿದಳ, ಇತರೇ ಇಲಾಖೆಯ  ವಿಚಕ್ಷಣಾ ದಳದ ಅಧಿಕಾರಿಗಳಿಗೂ, ಕಂದಾಯ ಇಲಾಖೆ, ಅರೋಗ್ಯ ಇಲಾಖೆ, ತಾಲ್ಲೂಕು ಪಂಚಾಯತ, ಗ್ರಾಮ ಪಂಚಾಯತ, ಇತರೇ ಇಲಾಖೆಗಳ ಅಧಿಕಾರಿಗಳಿಗೂ, ಮಾಧ್ಯಮ ಮಿತ್ರರಿಗೂ,  ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರದ  ಸಮನ್ವಯಾಧಿಕಾರಿ. ಶ್ರೀಮತಿ ಯಲ್ಲಮ್ಮ ಮೇಡಂ ರವರಿಗೂ ECO, BRP,, CRP,  ಹಾಗೂ ಕಛೇರಿಯ ಎಲ್ಲಾ ಸಿಬ್ಬಂದಿ ವರ್ಗದ ವರಿಗೂ , ಹಾಗೂ ವಿಶೇಷವಾಗಿ ಅತ್ಯಂತ ಕ್ರಿಯಾಶೀಲತೆಯಿಂದ ಶ್ರಮಿಸಿದ ತಾಲೂಕಾ SSLC ನೊಡಲ್ ಅಧಿಕಾರಿ ಪ್ರಕಾಶ ಶಿರಾಲಿಯವರಿಗೂ ಅಭಿನಂದಿಸುವುದಾಗಿ ಅವರು ತಿಳಿಸಿದ್ದಾರೆ.

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...