ಶ್ರೀನಿವಾಸಪುರ: ನವೀಕರಣಗೊಂಡ ಪೊಲೀಸ್ ಠಾಣೆ ಉದ್ಘಾಟನೆ ಹಾಗೂ ಸನ್ಮಾನ ಸಮಾರಂಭ

Source: Shabbir Ahmed | By I.G. Bhatkali | Published on 29th March 2024, 2:14 PM | State News |

ಶ್ರೀನಿವಾಸಪುರ: ಠಾಣೆಗೆ ಬರುವ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಈ ವ್ಯಾಪ್ತಿಯ ನೀರಿಕ್ಷಕ ಹಾಗೂ ಸಿಬ್ಬಂದಿ ಮಾಡಿರುವ ಠಾಣಾ ನವೀಕರಣ ಕಾರ್ಯ ಎಲ್ಲರ ಗಮನ ಸೆಳೆದು ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ತಿಳಿಸಿದರು.

ಶ್ರೀನಿವಾಸಪುರದಲ್ಲಿ ನವೀಕರಣ ಪೊಲೀಸ್ ಠಾಣಾ ಉದ್ಘಾಟನೆ ಹಾಗೂ ಸನ್ಮಾನ ಸಮಾರಂಭವನ್ನು ಠಾಣಾ ಆವರಣದಲ್ಲಿ ಏರ್ಪಡಿಸಿದ್ದು ಸಭೆಯಲ್ಲಿ ಹಾಜರಿದ್ದು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸ್ಥಳೀಯ ಅಧಿಕಾರಿಗಳು ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ವರಿಷ್ಟಾಧಿಕಾರಿ ನಾರಾಯಣ್ ಜಿಲ್ಲೆಯಲ್ಲಿ ಪ್ರಥಮವಾಗಿ ಶ್ರೀನಿವಾಸಪುರ ಪೊಲೀಸ್ ಠಾಣೆ ಉತ್ತಮ ರೀತಿಯಲ್ಲಿ ನವೀಕರಣಗೊಂಡಿದ್ದು, ಸಾರ್ವಜನಿಕರು ಠಾಣೆಗೆ ಭೇಟಿ ನೀಡುವ ವೇಳೆ ಯಾವುದೇ ಸಮಸ್ಯೆಗೆ ಎದುರಾಗದೆ ಅವರ ಅನುಕೂಲಕ್ಕಾಗಿ ನವೀಕರಣ ಮಾಡಲಾಗಿದೆ. ಈ ಹಿಂದೆ ಈ ಠಾಣಾ ವ್ಯಾಪ್ತಿ ಕೊಂಚ ಇಕ್ಕಟ್ಟುಗಳಂನ್ನೊಳಗೊಂಡಿತ್ತು.

ಈ ಠಾಣೆಯ ವೃತ್ತ ನೀರಿಕ್ಷಕ ಗೊರವನಕೊಳ್ಳ ನೇತೃತ್ವದಲ್ಲಿ ನವೀಕರಣಗೊಂಡಿದ್ದು, ಠಾಣೆಗೆ ಬರುವ ಸಾರ್ವಜನಿಕರಿಗೆ, ಅನ್ಯಾಯಕ್ಕೆ ಒಳಗಾದ ವ್ಯಕ್ತಿಗಳಿಗೆ ನ್ಯಾಯ ಒದಗಿಸಿ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದರೆ ಮಾತ್ರ ಈ ಕೆಲಸಕ್ಕೆ ಸಾರ್ಥಕ ಎಂದು ಕಿವಿಮಾತು ಹೇಳಿ ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿಗಳ ಕೊಡುಗೆ ಅಪಾರವಾಗಿದ್ದು ಅವರ ನಾಯಕತ್ವದಲ್ಲಿ ಚುನಾವಣೆಯನ್ನು ಸಕ್ರಿಯವಾಗಿ ನಡೆಸಿಕೊಡುವ ಜವಾಬ್ದಾರಿ ನಮ್ಮದೆಂದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಅಕ್ರಮ್ ಪಾಷ ಕಳೆದ ಭಾರಿ ನಾನು ಶ್ರೀನಿವಾಸಪುರಕ್ಕೆ ಬಂದ ವೇಳೆ ಇಲ್ಲಿನ ಅವ್ಯವಸ್ಥೆ ಕಂಡು ಬೇಸರವಾಯಿತು. ನಂತರ ಈ ಅವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಹಾಗೂ ಸರ್ಕಾರದ ನೆರವಿನಿಂದ ಹಂತ ಹಂತವಾಗಿ ಒಳ್ಳೆಯ ಬದಲಾವಣೆ ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲೆದ್ಯoತ್ಯ ಆರು ತಾಲ್ಲೂಕು ಕಚೇರಿಗಳಿಗೆ ಬಣ್ಣ ಬಡಿದು, ವ್ಯವಸ್ಥಿತವಾದ ರೀತಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅನುವು ಮಾಡಕೋಡಲಾಗುತ್ತಿದೆ. ಅದೇ ರೀತಿ ಶ್ರೀನಿವಾಸಪುರ ಪೊಲೀಸ್ ಠಾಣೆ ನವೀಕರಣ ಗೊಂಡಿರುವುದರ ಪೊಲೀಸ್ ಇಲಾಖೆ ಶ್ರಮವಿದೆ. ಪೊಲೀಸ್ ವರಿಷ್ಟಾಧಿಕಾರಿಗಳ ಮಾರ್ಗಸೂಚನೆಯಲ್ಲಿ ಸ್ಥಳೀಯ ನೀರಿಕ್ಷಕರ ಕಾರ್ಯವೈಖರಿ ಮೆಚ್ಚಬೇಕು. ಪ್ರಸ್ತುತ ಚುನಾವಣಾ ಕಾರ್ಯದಲ್ಲಿ ಎಲ್ಲಾ ಅಧಿಕಾರಿಗಳು ತೊಡಗಿಸಿಕೊಂಡಿದ್ದು ಸಂಪೂರ್ಣ ಮತದಾನಕ್ಕೆ ಸಜ್ಜು ಮಾಡಲು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಾರಾಯಣ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಪದ್ಮ ಬಸoತಪ್ಪ, ಸಹಾಯಕ ಚುವಣಾಧಿಕಾರಿ ಎಂ.ಆರ್ ಸುಮ, ಅಪರ ಜಿಲ್ಲಾಧಿಕಾರಿ, ಶಂಕರ್ ವಣಕ್ಕನ್, ಅಬಕಾರಿಇಲಾಖೆಯ ಉಪ ಆಯುಕ್ತರಾದ ಬಸವರಾಜ್, ಹೆಚ್ಚುವರಿ ಪೊಲೀಸ್ ಅದೀಕ್ಷಕರಾದ ರವಿಶಂಕರ್, ಹೆಚ್ಚುವರಿ ಪೊಲೀಸ್ ಅದೀಕ್ಷಕರಾದ ಜಗದೀಶ್, ಡಿ ವೈ ಎಸ್ ಪಿ ನಂದಕುಮಾರ್, ಪೊಲೀಸ್ ಶ್ರೀನಿವಾಸಪುರ ವೃತ್ತ ನಿರೀಕ್ಷಕ ಎಂ.ಬಿ. ಗೊರವನಕೊಳ್ಳ, ಗೌನಪಲ್ಲಿ ನಿರೀಕ್ಷಕ ಜಯಾನಂದ ತಹಸೀಲ್ದಾರ್ ಸುದೀoದ್ರ,  ತಾ ಪಂ ಕಾರ್ಯನಿರ್ವಾಹಣಾಧಿಕಾರಿ ಎ.ಜೋಸೆಫ್, ತಾಲೂಕ್ ಪಂಚಾಯಿತಿ ವ್ಯವಸ್ಥಾಪಕ ಮಂಜುನಾಥ್, ಸಹಾಯಕ ನಿರ್ದೇಶಕ ರಾಮಪ್ಪ, ಗಣಕಯಂತ್ರ ನಿರ್ವಾಹಕ ಕೆ.ಎಂ. ಶ್ರೀನಾಥ್, ಪುರಸಭೆ ಅಧಿಕಾರಿ ಮುಖ್ಯಾಧಿಕಾರಿ  ವೈ.ಎನ್. ಸತ್ಯನಾರಾಯಣ, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಪರಿಸರ ಅಭಿಯಂತರರು ಲಕ್ಷ್ಮಿಶ, ಇಂಜಿನಿಯರ್ ರಾಮಮೂರ್ತಿ,  ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...