ಅಂಜನಾದ್ರಿ ಪರ್ವತದಿಂದ ತಂದ ರಾಮಮಂದಿರ ಶಿಲಾನ್ಯಾಸದ ಶಿಲೆಗೆ ಭಟ್ಕಳ ದಲ್ಲಿ ವಿಶೇಷ ಪೂಜೆ

Source: so news | Published on 1st August 2020, 1:16 AM | Coastal News | Don't Miss |

 


ಭಟ್ಕಳ:ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸಕ್ಕಾಗಿ ಕಳುಹಿಸಿ ಕೊಡಲು ಅಂಜನಾದ್ರಿ ಪರ್ವತದಿಂದ ತಂದ ಶಿಲೆಗೆ  ಶ್ರೀ ರಾಮಸೇನೆಯ ರಾಷ್ಟ್ರ ಅಧ್ಯಕ್ಷರಾದ ಶ್ರೀ ಪ್ರಮೋದ ಮುತಾಲಿಕ ಚನ್ನಪಟ್ಟಣ  ಮಾರುತಿ ದೇವಸ್ಥಾನಕ್ಕೆ  ತಂದು ಪೂಜೆ ಸಲ್ಲಿಸಲಾಯ್ತು.
ಶ್ರೀ ರಾಮಸೇನೆಯ ರಾಷ್ಟ್ರ ಅಧ್ಯಕ್ಷರಾದ ಶ್ರೀ ಪ್ರಮೋದ ಮುತಾಲಿಕ  ಹಿಂದೂ ಬಾಂಧವರನ್ನು ಉದ್ದೇಶಿಸಿ ಮಾತನಾಡಿ ಅಯೋಧ್ಯೆದಲ್ಲಿ ಶ್ರೀ ರಾಮನ ದೇವಸ್ಥಾನ ನಿರ್ಮಾಣ ಬಗ್ಗೆ ಮಾತನಾಡಿ ಐತಿಹಾಸಿಕ ಹಂತಕ್ಕೆ ತಲುಪಿದ್ದೇವೆ ಅಂತ ತಿಳಿಸಿದರು. ಅಗಸ್ಟ 5 ಇಡೀ  ಜಗತ್ತಿಗೆ ನಾವು ಸಾಧನೆ ಮಾಡಿ ತೋರಿಸುವ ಸುಧಿನ.500 ವರ್ಷಗಳ ಹೋರಾಟ, 70 ಯುದ್ಧ, 3 ಲಕ್ಷ ಜನರ ಬಲಿದಾನ ಮಾಡಿದರೂ, ಸ್ವತಂತ್ರದ ನಂತರವೂ ಹೋರಾಟ ಮುಂದುವರೆದಿದ್ದು ಆವಾಗಿನ ಬಲಿದಾನ ನಿರಂತರ ಹೋರಾಟಕ್ಕೆ ಫಲ ಸಿಗುತ್ತಿದೆ.ಎರಡನೇ ಸರ್ದಾರ್ ವಲಬಾಯಿ ಪಟೇಲ್ ಎನಿಸಿರುವ ನರೇಂದ್ರ ಮೋದಿ ಹಸ್ತದಿಂದ ಈ ಕಾರ್ಯ ಆಗುತ್ತಿರುವುದು ಇನ್ನು ಆನಂದದ ಸಂಗತಿ. 1982 ರಲ್ಲಿ ಅಶೋಕ್ ಜಿ ಸಿಂಘಾಲ್  ಅಂತಾರಾಷ್ಟ್ರೀಯ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರ ನೇತೃತ್ವದಲ್ಲಿ 32 ಜನ ಪೂಜ್ಯರು ರಾಷ್ಟ್ರಪತಿಗಳ ಹತ್ತಿರ ಹೋಗಿ ಈ  ದೇಶದಲ್ಲಿ ಒಂದು ಸಾವಿರ ವರ್ಷದಲ್ಲಿ ಲಕ್ಷಾಂತರ ದೇವಾಲಯಗಳು ಒಡೆದು ಮಸೀದಿ ನಿರ್ಮಾಣ ಮಾಡಿದ್ದೂ ಅದರಲ್ಲಿ 30.000 ದೇವಸ್ಥಾನದ ಪಟ್ಟಿಯನ್ನು ರಾಷ್ಟಪತಿಯ ಹತ್ತಿರ ನೀಡಿ ನಮಗೆ 30.000 ದೇವಸ್ಥಾನ ಬೇಡಾ, ಕೇವಲ ಮೂರೇ ಮೂರು ದೇವಸ್ಥಾನ ಅಯ್ಯೋಧ್ಯ,ಮಧುರಾ, ಕಾಶಿ ಈಗಾಗಲೇ ಮಸೀದಿ ಆಗಿದೆ, ಅದನ್ನು ಕೊಡಬೇಕು ಅಂತಾ ತಿಳಿಸಿದರು.
ದುರ್ದೈವ ರಾಷ್ಟ್ರಪತಿಗಳು, ಕಾಂಗ್ರೆಸ್,ಮುಸ್ಲಿಂ ಸಮುದಾಯದವರು ಒಪ್ಪಲಿಲ್ಲ.ಅನಿವಾರ್ಯವಾಗಿ 1984 ರಿಂದ ಹೋರಾಟ ಆರಂಭವಾಗಿ 1992 ರಲ್ಲಿ ಒಂದು ಹಂತ ತಲ್ಲುಪಿದ್ದು,ಅಶೋಕ ಸಿಂಘಾಲ ಕರೆಗೆ ಕೋರ್ಟಿನ ವಿಳಂಬದಿಂದ ಪರಿಣಾಮ ತಾಳ್ಮೆಗೆಟ್ಟಿದ ಹಿಂದುಗಳು ಸಿಡ್ಡಿದೆದ್ದು 7 ಲಕ್ಷ ಕರಸೇವಕರು 500 ವರ್ಷದ ಕಳಂಕವನ್ನು ಕೆಡಗಲು ನುಗ್ಗಿದರು.ಆಗ ಪಿ.ವಿ.ನರಸಿಂಹರಾವ್ ರವರು ಪ್ರಧಾನ ಮಂತ್ರಿಗಳಾಗಿದ್ದವರು ಗೋಲಿಬಾರ್ ಗೆ ಆದೇಶ ನೀಡಿದರು ಮೇಜರ ರವರು ಗೋಲಿಬಾರ್ ಮಾಡಲು ಒಪ್ಪದೇ ನಮ್ಮಗೆ ಪಾಕಿಸ್ತಾನ,ಚೀನಾದ ಮೇಲೆ ಯುದ್ದ ಮಾಡಲು ಗೊತ್ತಿದೆ ಹೊರತು ನಮ್ಮ ದೇಶದ ರಾಮ‌ ಭಕ್ತರ ಮೇಲಲ್ಲಾ ಅಂತಾ ಗೋಲಿಬಾರ ಮಾಡದೇ ಸರ್ಕಾರದ ಆದೇಶವನ್ನು ಕಿಸೆಯಲ್ಲಿಟ್ಟರು.ಲಾಠಿಚಾರ್ಜ ಮಾಡಲು ಪೋಲಿಸರು ಒಪ್ಪಲಿಲ್ಲ.ಅಂತಾ ಪ್ರಚಂಡ ಭಾವನಾತ್ಮಕ ಭಕ್ತಿ ಎಲ್ಲರಲ್ಲೂ ಇತ್ತು.ನವಂಬರ 10, 2019 ರಲ್ಲಿ ಪಂಚ ಪೀಠವು(ಒಬ್ಬರೂ ಮುಸ್ಲಿಂ ನ್ಯಾಯಾಧೀಶರು ಸೇರಿ ಒಟ್ಟು 5 ನ್ಯಾಯಾಧೀಶರು) ಒಮ್ಮತದ ತೀರ್ಪು ನೀಡಿ ದೇವಸ್ಥಾನ ಇರುವ ಬಗ್ಗೆ ಒಪ್ಪಿಕೊಂಡು,500 ವರ್ಷಗಳ ವಿವಾದಕ್ಕೆ ಅಂತ್ಯ ನೀಡಿದರು,ದೇವಸ್ಥಾನ ನಿರ್ಮಾಣ ಆರಂಭವಾಗಿದೆ.ಅದರಲ್ಲಿ ನಾವು ಕೈ ಜೋಡಿಸಬೇಕಂತ ಕರ್ನಾಟಕದಿಂದ ಹನುಮಂತನ ಜನ್ಮಸ್ಥಳವಾದ ಅಂಜಾನಾದ್ರಿಯಿಂದ ಶಿಲೆ(ಬೆಳ್ಳಿಯ ಲೇಪನ),ಶ್ರೀರಾಮ‌ ತಪಸ್ಸು ಮಾಡಿದ ಚಕ್ರತಿರ್ಥದಿಂದ ಜಲ,ಅಂಜಾನಾದ್ರಿ ಪರ್ವತದಿಂದ ಮಣ್ಣನ್ನು ಪೇಜಾವರ ಮಠದ ಮೂಲಕ ಅಯೋಧ್ಯೆಕ್ಕೆ ಕಳುಹಿಸಲಾಗುತ್ತಿದೆ.
ಇಡೀ ದೇಶದಲ್ಲಿ ರಾಮನ ದೇಶದಲ್ಲಿ ಸ್ವತಂತ್ರ ನಂತರ ಹೋರಾಟ ಮಾಡಬೇಕಾಗಿ ಬಂದಿದ್ದು ನಮ್ಮ ದೌರ್ಬಲ್ಯ. ನಮ್ಮ ತ್ಯಾಗ,ಬಲಿದಾನದ ಬಗ್ಗೆ ಕೋರ್ಟ್ ಹೇಳಬೇಕಾ?ನಮ್ಮ ದೇಶದವನಲ್ಲದ ಅಫ್ಘಾನಿಸ್ತಾನದ ಬಾಬರ ಪರವಾಗಿ ಮುಸ್ಲಿಂ ರು ನಿಂತು ಕೊಂಡಿದ್ದು ಅಕ್ಷ್ಯಮ್ಯ ಅಪರಾಧ,ಭಾರತೀಯ ಮುಸ್ಲಿಂ ರು, ಭಾರತೀಯ ಮಕ್ಕಳು ಬಾಬರ ಪರವಾಗಿ‌ ನಿಂತುಕೊಂಡಿದ್ದರಿಂದ ಎಂತಹ ಅನಾಹುತವಾಯಿತು.ಕಾಂಗ್ರೆಸ್ ದುಷ್ಟತನ್ನದಿಂದ 70 ವರ್ಷ ಎಳೆದುಕೊಂಡು ಬಂತು,ಕೋರ್ಟ್ ತೀರ್ಪು ನೀಡಲು 70 ವರ್ಷ ಬೇಕಾಗಿರುವುದು ಇದಕ್ಕೆ ನಮ್ಮ ಹಿಂದೂ ಸಮಾಜದವರ (ಹೋರಾಟ ಮಾಡುವ ಮನೋಭಾವ ಇಲ್ಲದಿರುವುದು) ದೌರ್ಬಲ್ಯವೇ ಕಾರಣ.ರಾಮ ಹುಟ್ಟಿದ್ದು ಅಯೋಧ್ಯೆ ಯಲ್ಲಿ ಅಂತಾ ರಾಮಾಯಣದಲ್ಲಿ ಒಂದು ಸಾವಿರ ಬಾರಿ‌ ಉಲ್ಲೇಖ ಮಾಡಲಾಗಿದೆ.100 ಕೋಟಿ ಜನ ಹೇಳುತ್ತಿದ್ದಾರೆ ಇದಕ್ಕಿಂತ ಸಾಕ್ಷಿ ಬೇಕಾ?ಮುಂದಿನ ದಿನಗಳಲ್ಲಿ ಹಿಂದೂಗಳು ನಮ್ಮಲ್ಲಿಯ ದೌರ್ಬಲ್ಯ ವನ್ನು ತೊಡೆದುಹಾಕಿ  ಗುಲಾಮರಾಗಿರುವುದನ್ನು ಬಿಟ್ಟು ಎದೆತಟ್ಟಿ ನಿಲ್ಲಬೇಕು.ನಮ್ಮ ಊರಿನ ದೇವಾಲಯ, ಗೋಮಾತೆ,ಯಾವುದೇ ವಿಷಯದಲ್ಲಿ ಕೊನೆ ಮುಟ್ಟುವವರೆಗೆ  ನಮ್ಮ ಹೋರಾಟ ಬಿಡಬಾರದು ಅಂತಾ ಈ ಹೋರಾಟದ ತೀರ್ಪು ಆದರ್ಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಜಯಂತ ನಾಯ್ಕ,ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಶೀಧರ ಮೊಗೇರ್,ಮತ್ತು ಶ್ರೀರಾಮ ಸೇನೆಯ ಕಾರ್ಯಕರ್ತರಾದ ಉದಯ ಮೊಗೇರ್,ರಾಜು‌ ನಾಯ್ಕ, ಕೇಶವ ನಾಯ್ಕ,ಹಿರಿಯರಾದ ಎ.ಎನ್.ಪೈ. ಉಪಸ್ಥಿತರಿದ್ದರು.

Read These Next

ಸೌದಿ ಅರೇಬಿಯಾದ ತಾಯಿಫ್‌ನಲ್ಲಿ ಕಾರು ಅಪಘಾತ ಉಡುಪಿ ಜಿಲ್ಲೆಯ ಯುವಕನ ಸಾವು ಮತ್ತೊಬ್ಬ  ಗಂಭೀರ

ಭಟ್ಕಳ:  ಸೌದಿ ಅರೇಬಿಯಾದ ತಾಯಿಫ್‌ ಎಂಬಲ್ಲಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ  ಉಡುಪಿ ಜಿಲ್ಲೆಯ ಗಂಗೋಳಿ ನಿವಾಸಿಗಳಾದ ಮುಹಮ್ಮದ್ ...