4 ವರ್ಷದ ಬಾಲಕಿಗೆ ಹಾವು ಕಡಿತ ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡಿ ಪಾಣಾಪಾಯದಿಂದ ಪಾರು ಮಾಡಿದ ಡಾ.ಸುರಕ್ಷಿತ ಶೆಟ್ಟಿ

Source: sonews | By MV Bhatkal | Published on 1st September 2021, 6:34 PM | Coastal News | Don't Miss |

ಭಟ್ಕಳ:ವಿಷಪೂರಿತ ಹಾವು ಕಡಿದ 4 ವರ್ಷದ ಬಾಲಕಿಗೆ ಚಿಕಿತ್ಸೆ ನೀಡಿದ ತಾಲ್ಲೂಕು ಆಸ್ಪತ್ರೆಯ ಮಕ್ಕಳ ವೈದ್ಯ ಸುರಕ್ಷಿತ ಶೆಟ್ಟಿ ತಮ್ಮ ಕರ್ತವ್ಯ ಪ್ರಜ್ಞೆಯಿಂದ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ತಾಲ್ಲೂಕಿನ ಶಿರಾಲಿ ಗ್ರಾಮ ಪಂಚಾಯ್ತಿ ಗುಡಿಹಿತ್ತಲ ಗ್ರಾಮದ ನಿತೀಕ್ಷಾ ರಾಜೇಶ ನಾಯ್ಕ ಎಂಬ 4 ವರ್ಷದ ಬಾಲಕಿಗೆ  ಮನೆಯಂಗಳದಲ್ಲಿ ಆಟ ಆಡುವಾಗ ನಾಗರ ಹಾವು ಕಡಿದಿತ್ತು. ಹಾವು ಕಡಿದ ಅರ್ಧ ಗಂಟೆಯ ನಂತರ ಪೋಷಕರು ಬಾಲಕಿಯನ್ನು ಆಸ್ಪತ್ರೆಗೆ ಕರೆತಂದಿದ್ದರು.  ಆಸ್ಪತ್ರೆಯ ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಅವರ ಕರೆಯ ಮೇರೆಗೆ ತಕ್ಷಣ ಆಸ್ಪತ್ರೆಗೆ ಧಾವಿಸಿದ ವೈದ್ಯ ಸುರಕ್ಷಿತ ಶೆಟ್ಟಿ ಸೂಕ್ತ ಸಮಯದಲ್ಲಿ ಬಾಲಕಿಗೆ ಚಿಕಿತ್ಸೆ ನೀಡಿ ಬದುಕುಳಿಸಿದ್ದಾರೆ.
ಈ ಸಂದರ್ಭದಲ್ಲಿ ವೈದ್ಯ ಸುರಕ್ಷಿತ ಶೆಟ್ಟಿ ಮಾತನಾಡಿ
ಹಾವು ಕಡಿತಕ್ಕೊಳಗಾದ ಮಗುವನ್ನು ನೋಡಿದ ವೇಳೆ ಹಾವು ಕಚ್ಚಿದ ಸ್ಥಳದಲ್ಲಿ ಉತುಕೊಂಡಿದ್ದು ಹಾಗೂ ಕಾಲಿನ ಚರ್ಮ ಕಪ್ಪಾಗಿದ್ದು ಗಮನಿಸಿದ ವೇಳೆ ಕೇಲವು ಪರೀಕ್ಷೆ ನಡೆಸಿದಾಗ ರಕ್ತ ಹೆಪ್ಪುಗಟ್ಟುವಿಕೆ ಆಗಿರುದನ್ನು ಗಮನಿಸಿ 20 ಆಂಟಿ ಸ್ನೇಕ್ ವಿನೋಮಾ ಇಂಜೆಕ್ಷ ನೀಡಿ ಐಸಿಯುಗೆ ಶಿಫ್ಟ್ ಮಾಡಿದ್ದು ಮಗು ಈಗ ಚೇತರಿಕೊಳ್ಳುತ್ತಿದ್ದಾಳೆ ಎಂದರು
ಈ ವೇಳೆ  ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಮಾತನಾಡಿದ ಒಂದು ವಾರದಲ್ಲಿ ಮೂರನೇ ಕೇಸ್ ಆಗಿದ್ದು ಇದು  ಮೊದಲೆಲ್ಲ ನಮ್ಮ ಆಸ್ಪತ್ರೆಯಲ್ಲಿ
ಐಸಿಯು,ವೆಂಟಿಲೇಟರ್ ಇಲ್ಲಾದ ಕಾರಣ ಹಾವು ಕಡಿತಕ್ಕೆ ಒಳಗಾದ ಯಾವುದೇ ರೋಗಿಗಳು ಬಂದಿದ್ದರು ಇಲ್ಲಿ ಚಿಕಿತ್ಸೆ ನೀಡಿ ಸೂಕ್ತ ಚಿಕಿತ್ಸೆಗಾಗಿ ಕುಂದಾಪುರ ಕ್ಕೆ ಸ್ವಿಫ್ಟ್ ಮಾಡುತ್ತಿದ್ದು ಇವಾಗ ಐಸಿಯು,ವೆಂಟಿಲೇಟರ್  ಲಭ್ಯವಿದ್ದ ಕಾರಣ ನಮ್ಮ
ವೈದ್ಯರಿಗೆ ಬಂದಂತಹ ರೋಗಿಗಳಿಗೆ ಚಿಕಿತ್ಸೆ ನೀಡಲು ತುಂಬಾ ಅನುಕೂಲವಾಗಿತ್ತು  ಹಾವು ಕಡಿತ ಕ್ಕೊಳಗಾದ ಬಾಲಕಿ ಗಂಭೀರ ಸ್ಥಿತಿಯಲ್ಲಿ ‌ಇದು  ಕಮ್ಮಿವಧಿಯಲ್ಲಿ ಚಿಕಿತ್ಸೆಯ ಅವಶ್ಯಕತೆ ಇತ್ತು ರಜಾ ಅವದಿಯಲ್ಲಿ ತಕ್ಷಣಕ್ಕೆ ನಮ್ಮ ಆಸ್ಪತ್ರೆಯ  ಮಕ್ಕಳ ತಜ್ಞೆ ಡಾ ಸುರಕ್ಷಿತ ಶೆಟ್ಟಿ ಬಾಲಕಿಗೆ ಸೂಕ್ತ ಸಮಯಕ್ಕೆ  ಚಿಕಿತ್ಸೆ ನೀಡದ ಪರಿಣಾಮ ಬಾಲಕಿಯ ತಂದೆ,ತಾಯಿ ಅದ್ರಷ್ಟ ಹಾಗೂ ವೈದ್ಯ ಸುರಕ್ಷಿತ ಶೆಟ್ಟಿ ಅವರ ಸತತ ಪರಿಶ್ರಮದಿಂದ  ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದರು.


ಈ ಬಗ್ಗೆ  ರಾಜೇಶ ನಾಯ್ಕ ಬಾಲಕಿ ತಂದೆ ಮಾತನಾಡಿ ನಮ್ಮ ಮಗಳು ಮನೆಯ ಆವರಣದಲ್ಲಿ ಆಟ ಆಡುವಾಗ ಪಕ್ಕದಲ್ಲಿ ಇದ್ದ ತೇಗಿನ ಚಿಪ್ಪು ಚೀಲದಲ್ಲಿ ಇದ ನಾಗರ ಹಾವು ಕಡಿದು ತಕ್ಷಣವೇ ನಮ್ಮ ಗಮನಕ್ಕೆ ಬಂದಿದ್ದು ಭಟ್ಕಳ ಆಸ್ಪತ್ರೆಗೆ ಕರೆ ತಂದು ಅತ್ಯಂತ ಗಂಭೀರ  ಸ್ಥಿತಿಯಲ್ಲಿದ್ದ ನನ್ನ ಮಗಳನ್ನು ಸಮಯಕ್ಕೆ ಸರಿಯಾಗಿ ಡಾ ಸುರಕ್ಷಿತ ಶೆಟ್ಟಿ ಹಾಗೂ ಸೂಕ್ತ ಚಿಕಿತ್ಸೆ ನೀಡ ತಾಲೂಕು ಆಸ್ಪತ್ರೆ ವೈದ್ಯರ ಕಾರ್ಯ ಸ್ತುತ್ಯಾರ್ಹವಾಗಿದೆ ಎಂದರು.
ಹಾವು ಕಡಿದು ಅರೆಪ್ರಜ್ಞಾವಸ್ಥಿತಿಯಲ್ಲಿದ್ದ ಬಾಲಕಿಗೆ ವೈದ್ಯ ಸುರಕ್ಷಿತ ಶೇಟ್ಟಿ 20 ಆಂಟಿ ಸ್ನೇಕ್ ವಿನೋಮಾ ಇಂಜೆಕ್ಷನ್ ನೀಡಿದ ದೇಹದಲ್ಲಿ ವಿಷ ಏರದಂತೆ ತಡೆದರು. ಸದ್ಯ ಬಾಲಕಿ ಸರ್ಕಾರಿ ಆಸ್ಪತ್ರೆಯ ಐಸಿಯು ವಾರ್ಡನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾಳೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...