ಜಾತಿ ಧರ್ಮ ಹೆಸರಿನಲ್ಲಿ ರಾಜಕೀಯ ನಡೆಯುತ್ತಿರುವುದು ದುರದೃಷ್ಟಕರ : ನಾಡೋಜ ಕೆ.ಎಸ್.ನಿಸಾರಅಹ್ಮದ

Source: sonews | By Staff Correspondent | Published on 3rd February 2018, 11:53 PM | Coastal News | Don't Miss |

ಮುಂಡಗೋಡ : ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಕೆಯ ಭಾಷೆಯಾಗಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕಷ್ಟವಾಗುತ್ತಿದೆ ಎಂದು ನಾಡೋಜ, ಕದಂಬ ಪ್ರಶಸ್ತಿ ಪುರಸ್ಕøತ ನಿಸಾರ ಅಹ್ಮದ ಹೇಳಿದರು.
ಅವರು ಬನವಾಸಿಯಲ್ಲಿ ಕದಂಬೋತ್ಸವದ ಜ್ಯೋತಿ ಬೆಳಗಿಸಿ ಮಾತನಾಡುತ್ತಿದ್ದರು. ಜಗತ್ತಿನ 200 ಪ್ರಾಚಿನ ಭಾಷೆಗಳಲ್ಲಿ ಕನ್ನಡಕ್ಕೆ 19 ನೇ ಸ್ಥಾನವಿದೆ. ಅಷ್ಟು ಪ್ರಾಚಿನತೆ ಹೊಂದಿರುವ ಕನ್ನಡ ಭಾಷೆ ಶ್ರೀಮಂತ ಭಾಷೆ ಎಂದರು. 
ಆದಿಕೇಶ್ವರನ ದೇವಸ್ಥಾನದಲ್ಲಿ ದರ್ಶನ ಪಡೆದು ಎಷ್ಟು ಸಂತೋಷವೆನಿಸಿದೆಯೋ  ಅಷ್ಟೆ ಸಂತೋಷ ಈ ವೇದಿಕೆಯನ್ನು ನೋಡಿ ನನಗೆ ಸಂತೋಷ ವೆನಿಸುತ್ತಿದೆ ಎಂದರು
ಬೆಂಗಳೂರನಲ್ಲಿ ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಸಾಗಬೇಕಾಗಿದೆ. ಇಲ್ಲಿ ಎಲ್ಲರೂ ಕನ್ನಡವನ್ನು ಮಾತನಾಡುತ್ತಾರೆ ಆದರೆ ಬೆಂಗಳೂರನಲ್ಲಿ ಕನ್ನಡ ಭಾಷೆಗಿಂತ ಬೇರೆ ಭಾಷೆಗಳಲ್ಲಿ ಸಂಭಾಷಿಸುವುದು ಹೆಚ್ಚು ಎಂದರು. ತಮಗೆ 11 ವರ್ಷಗಳ ಹಿಂದೆ ಕೈ ಜಾರಿಹೋಗಿದ್ದ ಪಂಪ ಪ್ರಶಸ್ತಿಯು ಇಂದು ಪಂಪನ ನಾಡಿನಲ್ಲಿ  ಪ್ರಶಸ್ತಿ ಸ್ವೀಕರಿಸಲಿಕ್ಕೆ ತುಂಬಾ ಸಂತೋಷವೆನಿಸುತ್ತಿದೆ ಎಂದರು. ಯಾರಿಗೆ ಯಾವಾಗ ಪ್ರಶಸ್ತಿ ಸೀಗಬೇಕೊ ಆವಾಗ ಸೀಗುತ್ತಿದೆ ಎಂದರು
ಇತ್ತಿಚ್ಚಿನ ದಿನಗಳಲ್ಲಿ ಜಾತಿ ಧರ್ಮ ಹೆಸರಿನಲ್ಲಿ ರಾಜಕೀಯಗಳು ನಡೆಯುತ್ತಿರುವುದು ದುರದೃಷ್ಟಕರ ಎಂದರು. ಕಳೆದ ಮೂರು ತಿಂಗಳುಗಳಲ್ಲಿ ನನಗೆ ಆದೃಷ್ಟದ ದಿನಗಳು ವಿಶ್ವವಿಖ್ಯಾತ ದಸರಾಮಹೋತ್ಸವ ಉದ್ಘಾಟನೆ ಮಾಡಿದ್ದು ಹಾಗೂ ಪಂಪ ಪ್ರಶಸ್ತಿ ಪಡೆಯುತ್ತಿರುವುದು ನಾನು ಎಂದು ಮರೆಯಲಾರದ ದಿನಗಳು ಎಂದರು. ಪ್ರಶಸ್ತಿ ಪಡೆಯಲು ಕಾರಣಭೂತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಯ್ಕೆ ಮಂಡಳಿ ಸದಸ್ಯರಿಗೆ ಧನ್ಯವಾದ ತಿಳಿಸಿದರು
ಇದೇ ಸಂದರ್ಭದಲ್ಲಿ ಕದಂಬೋತ್ಸವದ ಮೇಲುಸ್ತುವಾರಿ ವಹಿಸಿಕೊಂಡ ಜಿಲ್ಲಾಧಿಕಾರಿ ಎಸ್.ಎಸ್.ನಕುಲ ಹಾಗೂ ಶಿರಸಿ ತಹಶಿಲ್ದಾರ ರವರಿಗೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿದಕ್ಕೆ ನಿಸಾರ ಅಹ್ಮದ ತುಂಬಕಂಠದಿಂದ ಹೋಗಳಿದರು
ವಾರ್ತಾಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಗೈರಿನಲ್ಲಿ ಭಾರಿ ಮತ್ತು ಮಾಧ್ಯಮ ಕೈಗಾರಿಕೆ ಹಾಗೂ ಉತ್ತರಕನ್ನಡ ಜಿಲ್ಲೆ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕದಂಬ ಪ್ರಶಸ್ತಿಯನ್ನು ಪ್ರದಾನ ಮಾಡಿದರು ಪ್ರಶಸ್ತಿ ಜತೆ ಐದು ಲಕ್ಷ ರೂ ನಗದು ನೀಡಿದರು.
 ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೆರ, ಯಲ್ಲಾಪುರ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ ಶಿರಸಿ ಕ್ಷೇತ್ರ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ,  ಭಟ್ಕಳ ಶಾಸಕ ಮಂಕಾಳ ವೈದ್ಯ ಜಿಲ್ಲಾಧಿಕಾರಿ ನಕುಲ, ಶಿರಸಿ ಉಪವಿಭಾಗಧಿಕಾರಿ ರಾಜೂ ಮೊಗೇರ, ಶಿರಸಿ ತಹಶೀಲ್ದಾರ ಪಟ್ಟೆದ,  ಜಿ.ಪಂ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಎಲ್.ಟಿ.ಪಾಟೀಲ,  ಶಿರಸಿ ತಾ.ಪಂ  ಅಧ್ಯಕ್ಷೆ ಶ್ರೀಲತಾ ಕಾಳೆರಮನೆ , ಬನವಾಸಿ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಸಿ.ಎಮ್‍ನಾಯಕ ಕನ್ನಡ ಮತ್ತು ಸಂಸ್ಕøತಿ ನಿರ್ದೇಶಕ ಎನ್.ಆರ್.ವಿಶುಕುಮಾರ, ಜಿ.ಪಂ ಸದಸ್ಯರಾದ ಜಿ.ಎನ್.ಹೆಗಡೆ.ರೂಪಾ ನಾಯಕ, ಬಸವರಾಜ ದೊಡ್ಡಮನಿ ಬನವಾಸಿ ಗ್ರಾ.ಪಂ ಅಧ್ಯಕ್ಷೆ ಗಣೇಶ ಸಣ್ಣಲಿಂಗಣ್ಣವರ ಹಾಗೂ ಜಿಲ್ಲೆಯಿಂದ ಆಗಮಿಸಿದ ಜನಪ್ರತಿನಿಧಿಗಳು ಸೇರಿದಂತೆ ಬನವಾಸಿ ಹೋಬಳಿಯ ಗ್ರಾಮಸ್ಥರು ಉಪಸ್ಥಿತರಿದ್ದರು
 

Read These Next

ಕಾರವಾರ: ಹಣ, ಉಡುಗೊರೆ ಹಂಚಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಿ : ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿ ಕುಮಾರ್

ಮತದಾರರಿಗೆ ಹಣ, ಉಡುಗೊರೆ ಮತ್ತಿತರ ಆಮಿಷಗಳನ್ನು ಒಡ್ಡುವುದರ ಕುರಿತಂತೆ ತೀವ್ರ ನಿಗಾ ವಹಿಸಬೇಕು, ಈ ಕುರಿತಂತೆ ದೂರುಗಳು ಬಂದ ...

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...