ಅ.28 ರಂದು ರಾಜ್ಯಾದ್ಯಂತ ಏಕಕಾಲದಲ್ಲಿ ಕನ್ನಡ ಗೀತೆಗಳ ಗಾಯನ : ಸಚಿವ ವಿ. ಸುನೀಲ್ ಕುಮಾರ್

Source: S.O. News Service | Published on 26th October 2021, 7:06 PM | Coastal News | Don't Miss |

ಉಡುಪಿ: ಅಕ್ಟೋಬರ್ 28ರಂದು ಬೆಳಗ್ಗೆ 11 ಗಂಟೆಗೆ ರಾಜ್ಯಾದ್ಯಂತ ಏಕಕಾಲದಲ್ಲಿ ಕನ್ನಡದ ಶ್ರೇಷ್ಠತೆಯನ್ನು ಸಾರುವ ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಈ ಗೀತೆಗಳನ್ನು ಹಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಸೂಚನೆ ನೀಡಿದರು.

ಅವರು ಇಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಸೂಚನೆಗಳನ್ನು ನೀಡಿದರು.

ಎಲ್ಲಾ ಜಿಲ್ಲೆಗಳ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದ ಸಚಿವರು, ಇದನ್ನು ಸರ್ಕಾರಿ ಕಾರ್ಯಕ್ರಮವಾಗಿ ಮಾತ್ರ ನಡೆಸದೇ ಎಲ್ಲಾ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅಭೂತಪೂರ್ವವಾಗಿ ಆಯೋಜಿಸಿ, ಎಲ್ಲಾ ಜಿಲ್ಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಆನ್ ಲೈನ್ ಮೂಲಕ ಸಹ ವೀಕ್ಷಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಿ, ಕಾರ್ಯಕ್ರಮದ ಸಂಪೂರ್ಣ ವೀಡಿಯೋ ಚಿತ್ರೀಕರಣ, ಡ್ರೋಣ್ ಚಿತ್ರೀಕರಣ, ಕಾರ್ಯಕ್ರಮದಲ್ಲಿ ಭಾಗವಹಿಸದ ಜನಸಂಖ್ಯೆಯ ಎಲ್ಲವನ್ನೂ ವ್ಯವಸ್ಥಿತ ರೀತಿಯಲ್ಲಿ ದಾಖಲೀಕರಣ ಮಾಡುವಂತೆ ಸೂಚಿಸಿದರು.

ಕಾರ್ಯಕ್ರಮ ಆಯೋಜಿಸುವಾಗ ಆರಂಭದಲ್ಲಿ ಯಾವುದೇ ಭಾಷಣ ಕಾರ್ಯಕ್ರಮ ಮಾಡಬೇಡಿ, 10.45 ಕ್ಕೆ ನಿಗಧಿತ ಜಾಗದಲ್ಲಿ ಸಮಾಪನಗೊಂಡು , ಸರಿಯಾಗಿ 11 ಗಂಟೆಗೆ ಹಾಡಲು ಆರಂಭಿಸಬೇಕು, ಈ 3 ಗೀತೆಗಳ ಜೊತೆಗೆ ಕನ್ನಡ ನಾಡು ನುಡಿಯ ಮಹತ್ವ ಇರುವ ಇತರೆ ಗೀತೆಗಳನ್ನು ಹಾಡಬಹುದಾಗಿದ್ದು, ಕೊನೆಯಲ್ಲಿ ಕನ್ನಡದ ಬಳಕೆ ಕುರಿತು ಸಂಕಲ್ಪ ಮಾಡಬೇಕು ಎಂದು ಸಚಿವರು ಹೇಳಿದರು.

ವಿಮಾನ ನಿಲ್ದಾಣ ಮುಂಭಾಗ, ಮೆಟ್ರೋದಲ್ಲಿ, ಆಟೋ ರಿಕ್ಷಾ ಸಂಘಗಳಲ್ಲಿ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ , ಮಾಲ್‌ಗಳಲ್ಲಿ, ವಸತಿ ಸಮುಚ್ಛಯಗಳಲ್ಲಿ , ರಾಜ್ಯದ ಗಡಿ ನಾಡ ಜಿಲ್ಲೆಗಳಲ್ಲಿ ಮತ್ತು ಗಡಿ ಭಾಗದಲ್ಲಿ ವಿಶೇಷವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಚಿವರು ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಶ್ರೀ ಕೃಷ್ಣ ಮಠದ ಮುಂಭಾಗ, ಮಲ್ಪೆ ಸೀ ವಾಕ್ , ಮಲ್ಪೆ ಸಮುದ್ರದಲ್ಲಿ ದೋಣಿಯಲ್ಲಿ, ಕಾಪು ಲೈಟ್ ಹೌಸ್, ಪಡುಬಿದ್ರಿ ಬ್ಲೂ ಫ್ಲಾಗ್ ಬೀಚ್, ಕೊಲ್ಲೂರು ದೇವಾಲಯ ಮುಂಭಾಗ, ಕಾರ್ಕಳ ಗೊಮ್ಮಟ ಬೆಟ್ಟದ ಬಳಿ ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು, ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳು, ಕೈಗಾರಿಕೆಗಳು, ವೈದ್ಯಕೀಯ ಮತ್ತು ಇಂಜಿನಿಯರಿAಗ್ ಕಾಲೇಜಿನಲ್ಲಿ ಹಾಗೂ ಎಲ್ಲಾ ಪಂಚಾಯತ್‌ಗಳು, ಜಿಲ್ಲೆಯಲ್ಲಿರುವ ರಾಷ್ಟಿçÃಕೃತ ಬ್ಯಾಂಕ್‌ಗಳ ಪ್ರಾದೇಶಿಕ ಕಚೇರಿಗಳಲ್ಲಿ, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿಯೂ ಸಹ ಕಾರ್ಯಕ್ರಮ ಆಯೋಜಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Read These Next

ಭಟ್ಕಳ: ರಾಜ್ಯದ ವಿವಿದೆಡೆ ಮುಂದುವರೆದ ಮಳೆ; ಟೊಮ್ಯಾಟೋ ದರ ಮತ್ತೆ ಗಗನಕ್ಕೆ; ಮಹಾರಾಷ್ಟ್ರದತ್ತ ಮಾರಾಟಗಾರರು

ರಾಜ್ಯದಲ್ಲಿ ಮುಂದುವರೆದ ಮಳೆ ಕೃಷಿಕನ ಬದುಕಿನ ಮೇಲೆ ಬರೆ ಎಳೆಯುವಂತೆ ಮಾಡಿದೆ. ನಿರಂತರ ಮಳೆಯಿಂದಾಗಿ ವಿಶೇಷವಾಗಿ ಟೊಮ್ಯಾಟೋ ಬೆಳೆ ...

ಭಟ್ಕಳ: ಓಮೈಕ್ರಾನ್ ತಡೆಗೆ ಭಟ್ಕಳದಲ್ಲಿ ಚೆಕ್‍ಪೋಸ್ಟ್ ಕಾರ್ಯಾರಂಭ; ಸೋಡಿಗದ್ದೆ ಕ್ರಾಸ್, ಕುಂಟವಾಣಿಯಲ್ಲಿ ತಪಾಸಣೆ

ಕೊರೊನಾ ರೂಪಾಂತರಿ ಓಮೈಕ್ರಾನ್ ಸೋಂಕು ತಡೆಗೆ ಸರಕಾರ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿರುವಂತೆಯೇ, ಜಿಲ್ಲೆಯ ಗಡಿ ಪ್ರದೇಶವಾದ ...

ಸಂತ ಫ್ರಾನ್ಸಿಸ್ ಸ್ಮರಣಾರ್ಥ ಮುಂಡಳ್ಳಿ ಚರ್ಚನಿಂದ ಭಟ್ಕಳ ಬಂದರ್ ದೀಪಸ್ತಂಭದವರೆಗೆ ಕ್ರೈಸ್ತರ ಮೆರವಣಿಗೆ

.ಶ.1552ರಲ್ಲಿ ಇಹಲೋಕ ತ್ಯಜಿಸಿದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಮೃತ ದೇಹವನ್ನು ಭಟ್ಕಳ ಬಂದರಿನಲ್ಲಿ ಕೆಲ ಕಾಲ ಇರಿಸಿ ನಂತರ ಗೋವಾಗೆ ...

ಸಂತ ಫ್ರಾನ್ಸಿಸ್ ಸ್ಮರಣಾರ್ಥ ಮುಂಡಳ್ಳಿ ಚರ್ಚನಿಂದ ಭಟ್ಕಳ ಬಂದರ್ ದೀಪಸ್ತಂಭದವರೆಗೆ ಕ್ರೈಸ್ತರ ಮೆರವಣಿಗೆ

.ಶ.1552ರಲ್ಲಿ ಇಹಲೋಕ ತ್ಯಜಿಸಿದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಮೃತ ದೇಹವನ್ನು ಭಟ್ಕಳ ಬಂದರಿನಲ್ಲಿ ಕೆಲ ಕಾಲ ಇರಿಸಿ ನಂತರ ಗೋವಾಗೆ ...

ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಕರ್ತವ್ಯ ನಿರ್ವಹಿಸಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ : ಡಿಸೆಂಬರ್ 10 ರಂದು ನಡೆಯುವ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರಗಳ ವಿಧಾನಪರಿಷತ್ ಚುನಾವಣೆಯಲ್ಲಿ ಮುಕ್ತ, ಪಾರದರ್ಶಕ ಹಾಗೂ ...

ಮನೆ ಮನೆಗೆ ಲಸಿಕಾ ಮಿತ್ರ : ಜಿಲ್ಲೆಯಲ್ಲಿ ಹೆಚ್ಚಳವಾಯಿತು ಲಸಿಕೆ ಪಡೆಯುವವರ ಸಂಖ್ಯೆ

ಉಡುಪಿ : ಕೋವಿಡ್ ನಿಂದ ಗರಿಷ್ಠ ಸುರಕ್ಷತೆ ಪಡೆಯಲು 2 ಡೋಸ್ ಲಸಿಕೆಯನ್ನು ಪಡೆಯುವುದು ಅಗತ್ಯವಾಗಿದ್ದು, ಈಗಾಗಲೇ ಮೊದಲನೇ ಡೋಸ್ ಪಡೆದವರು ...