'ಅಗ್ನಿಪಥ್' ಯೋಜನೆಗೆ ಭಾರತ ಭಾರೀ ಬೆಲೆ ತೆರಬೇಕಾಗುತ್ತದೆ; ಸಿಯಾಚಿನ್ ಹೀರೋ ಆತಂಕ

Source: Vb | By I.G. Bhatkali | Published on 25th June 2022, 12:36 AM | National News | Don't Miss |

ಹೊಸದಿಲ್ಲಿ: ಸೇನೆಯನ್ನು ನಾಶಗೊಳಿಸುವ ಹಾಗೂ ಪಾಕಿಸ್ತಾನ, ಚೀನಾಕ್ಕೆ ಪ್ರಯೋಜನವಾಗುವ ಅಪಥ್ ಯೋಜನೆಗೆ ದೇಶ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತ ಸೇನಾ ದಂತ ಕಥೆ, ಗೌರವ ಕ್ಯಾಪ್ಟನ್ `ಬಾನಾ ಸಿಂಗ್ ಅವರು ಹೇಳಿದ್ದಾರೆ.

ನಾಲ್ಕು ವರ್ಷಗಳ ಗುತ್ತಿಗೆಯ ಅಗ್ನಿಪ‌ ಯೋಜನೆ ಭಾರತೀಯ ಸೇನೆಯನ್ನು ಹಾಳುಗೆಡವಲಿದೆ ಹಾಗೂ ಧ್ವಂಸಗೊಳಿಸಲಿದೆ. ಇದನ್ನು ಯಾವುದೇ ರೀತಿಯಲ್ಲಿ ಅನುಷ್ಠಾನಗೊಳಿಸಬಾರದು” ಎಂದು ಸಿಂಗ್ ಹೇಳಿದ್ದಾರೆ. ಸಿಂಗ್ ಅವರು ಸೇನೆಯಲ್ಲಿ ಸುಬೇದಾರ್ ಮೇಜರ್ ಆಗಿ ನಿವೃತ್ತಿ ಹೊಂದಿದ್ದರು. ನಂತರ ಅವರಿಗೆ ಗೌರವ ಕ್ಯಾಪ್ಟನ್‌ ಹುದ್ದೆ ನೀಡಲಾಗಿತ್ತು.

ಸಿಂಗ್ ತನ್ನ ಟ್ವಿಟರ್ ಹ್ಯಾಂಡಲ್ ನಲ್ಲಿ 'ಅಗ್ನಿಪಥ್' "ಯೋಜನೆಯನ್ನು ಟೀಕಿಸಿ ಟೀಟ್ ಮಾಡಿರುವುದು ಸಾಮಾಜಿಕ ಮಾಧ್ಯಮದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಿತ್ತು. "ನನಗೆ ಫೋನ್ ಕರೆಗಳು ಬರಲು ಆರಂಭಿಸಿದ ಬಳಿಕ ಅದನ್ನು ತೆಗೆದು ಹಾಕಿದ'' ಎ೦ದು ಅವರು ಹೇಳಿದ್ದಾರೆ. "ಆದರೆ, ನಾನು ನನ್ನ ಮನಸ್ಸಿನಲ್ಲಿರುವುದನ್ನು ಹೇಳುತ್ತೇನೆ. ನಾನು ಯಾವಾಗಲೂ ಸೇನೆಯ ಪರವಾಗಿ ಹಾಗೂ ಅದರ ಕಲ್ಯಾಣದ ಪರವಾಗಿ ಮಾತನಾಡುತ್ತೇನೆ' ಹೇಳಿದ್ದಾರೆ. ಎಂದು ಅವರು ಹೇಳಿದ್ದಾರೆ.

ಸಿಯಾಚಿನ್ ಹೀರೋ ಎಂದು ಜನಪ್ರಿಯರಾಗಿರುವ ಸಿಂಗ್ ಅವರು 1987 ಜೂನ್‌ನಲ್ಲಿ 21,000 ಅಡಿ ಎತ್ತರದಲ್ಲಿರುವ ಪಾಕಿಸ್ತಾನದ ಖೈಡ್ ಎ ಅಝಂ ಪೋಸ್ಟ್ ಮೇಲೆ ದಾಳಿ ನಡೆಸಿದ ಪಡೆಯ ನೇತೃತ ವಹಿಸಿದ್ದರು. ಈ ದಾಳಿಯಲ್ಲಿ 6 ಪಾಕಿಸ್ತಾನಿ ಯೋಧರು ಮೃತಪಟ್ಟಿದ್ದರು. ಈ ದಾಳಿಯಲ್ಲಿ ವ್ಯೂಹಾತಕ ಠಾಣೆಯನ್ನು ವಶ ಪಡಿಸಿ ಕೊಳ್ಳಲಾಗಿತ್ತು. ಆನಂತರ ಈ ಠಾಣೆಗೆ 'ಬಾನಾ ಪೋಸ್ಟ್ ನಾಮಕರಣ ಎಂದು ಮರು ಮಾಡಲಾಗಿತ್ತು. ಇದಕ್ಕಾಗಿ ಅವರು 1988ರಲ್ಲಿ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಪರಮ ವೀರ ಚಕ್ರ ಸ್ವೀಕರಿಸಿದ್ದರು.

ಸೇನೆಯ ಎಲ್ಲ ಪಾಲುದಾರರು ಹಾಗೂ ಕಣಕ್ಕಿಳಿದು ಯುದ್ಧ ಮಾಡಿ ಅನುಭವವಿರುವ ಹಿರಿಯರೊಂದಿಗೆ ಸಮಾಲೋಚನೆ ನಡೆಸದೆ ಇಂತಹ ಮೂಲಭೂತ ನಿರ್ಧಾರ ಗಳನ್ನು ತೆಗೆದುಕೊಳ್ಳಬಾರದು. ಇದು ಹಿಂದೆಂದೂ ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ.

ತಾನು ನಿರ್ಧಾರ ತೆಗೆದುಕೊಂಡಿದ್ದೇನೆ. ಹಾಗಾಗಿ ಇದು ಸರಿಯಾಗಿದೆ ಮತ್ತು ಅದನ್ನು ಕಾರ್ಯಗತಗೊಳಿಸಬೇಕಾಗಿದೆ ಎಂಬ ನಿಲುವು ಸರ್ವಾಧಿಕಾರದಂತೆ ಎಂದು ಅವರು ತಿಳಿಸಿದ್ದಾರೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...