ಕೋಚ್ ಆಗಿ ಕಾರ್ಯನಿರ್ವಹಿಸಿದ್ದು ತೃಪ್ತಿದಾಯಕ: ಅನಿಲ್ ಕುಂಬ್ಳೆ

Source: ANI | Published on 22nd July 2020, 7:28 PM | Sports News | Don't Miss |

ನವದೆಹಲಿ: ಭಾರತ ಕ್ರಿಕೆಟ್ ತಂಡಕ್ಕೆ ತಾವು ಕೋಚ್ ಆಗಿ ಮಾಡಿದ ಕಾರ್ಯವು ತೃಪ್ತಿಕರವಾಗಿತ್ತು ಆದರೆ ನಿರ್ಗಮನ ಬೇರೆ ರೀತಿಯಲ್ಲಿ ಆಗಬೇಕಿತ್ತು ಎಂದು ಕ್ರಿಕೆಟಿಗ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
2017ರ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯ ನಂತರ ನಾಯಕ ವಿರಾಟ್ ಕೊಹ್ಲಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಕುಂಬ್ಳೆ ಕೋಚ್ ಹುದ್ದೆ ತೊರೆದಿದ್ದರು. 
ಒಂದು ವರ್ಷದ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಕೆಲವು ಮಹತ್ವದ ಕಾಣಿಕೆಗಳನ್ನು ಕ್ರಿಕೆಟ್‌ಗೆ ನೀಡಿದ ತೃಪ್ತಿ ನನಗಿದೆ.  ಅದರಿಂದಾಗಿ ಯಾವುದೇ ಕೊರಗು  ಇಲ್ಲ. ಅಲ್ಲಿಂದ ನಿರ್ಗಮಿಸಿದ್ದು ಕೂಡ ಖುಷಿಯ ಸಂಗತಿಯೇ ಆಗಿತ್ತು‘ ಎಂದು  ಕುಂಬ್ಳೆ ಜಿಂಬಾಬ್ವೆ ಕ್ರಿಕೆಟಿಗ ಪಾಮೀ ಎಂಬಾಂಗ್ವಾ ಅವರೊಂದಿಗೆ ಆನ್‌ಲೈನ್ ಸಂವಾದದಲ್ಲಿ ಹೇಳಿದ್ದಾರೆ.
ನಿರ್ಗಮನವು ವಿಭಿನ್ನವಾಗಿರಬೇಕಿತ್ತು. ಆದರೆ ಒಬ್ಬ ಕೋಚ್ ಆಗಿದ್ದವರಿಗೆ ತಮ್ಮ ಸ್ಥಾನದಿಂದ ಯಾವಾಗ ಹೊರನಡೆಯಬೇಕು ಎಂಬ ಅರಿವು ಇರಬೇಕು. ಅದು ಚಲನಶೀಲತೆಯ ದ್ಯೋತಕ. ಆ ಒಂದು ವರ್ಷದಲ್ಲಿ ನಾನು ಮಹತ್ವದ ಪಾತ್ರ ವಹಿಸಿದ್ದೆ ಎಂಬುದು ಸಂತಸದ ವಿಷಯ‘ ಎಂದು 49 ವರ್ಷದ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

Read These Next

ಮೊದಲ ಬಾರಿ ಟ್ವೆಂಟಿ-20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯ; ವಾರ್ನರ್, ಮಾರ್ಷ್ ಅಬ್ಬರದ ಬ್ಯಾಟಿಂಗ್

ಆಲ್‌ರೌಂಡರ್ ಮಿಚೆಲ್ ಮಾರ್ಷ್ (ಔಟಾಗದೆ 77, 50 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (53, 38 ಎಸೆತ, 4 ...

ಐತಿಹಾಸಿಕ ಸ್ವರ್ಣ ಗೆದ್ದ ಸುಮಿತ್, ಅವನಿ; ಭಾರತಕ್ಕೆ ಒಂದೇ ದಿನ 2 ಚಿನ್ನ ಸಹಿತ ಐದು ಪದಕ

ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಅಂಟಿಲ್ ಎಫ್64 ಸ್ಪರ್ಧೆಯಲ್ಲಿ 68.55 ಮೀ.ದೂರಕ್ಕೆ * ಜಾವಲಿನ್ ಎಸೆದು ತನ್ನದೇ ವಿಶ್ವ ...

ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಇಲ್ಲ. ನೈಟ್ ಕರ್ಪ್ಯೂ ಮುಂದುವರಿಕೆ. ಎಚ್ಚರ ತಪ್ಪದಂತೆ ಜನತೆಗೆ ಸರ್ಕಾರದ ಮನವಿ

ಬೆಂಗಳೂರು : ಕೋವಿಡ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿಧಿಸಿದ್ದ ವೀಕೆಂಡ್ ಕರ್ಪ್ಯೂವನ್ನ ರಾಜ್ಯ ಸರ್ಕಸರವರದ್ದು ಮಾಡಿದೆ.

ಅಬಕಾರಿ ದಾಳಿ: ಅಕ್ರಮ ಮದ್ಯ ವಶ

ಶಿವಮೊಗ್ಗ : ತೀರ್ಥಹಳ್ಳಿಯ ಇಂದಿರಾನಗರ, ತಾಲೂಕಿನ ಮಾರಿಗುಣಿ, ತಲ್ಲೂರು ಅಂಗಡಿ ಕೈಮರ ಗ್ರಾಮಗಳಲ್ಲಿ ಅಬಕಾರಿ ಇಲಾಖೆಯ ಆಯುಕ್ತರು ಹಾಗೂ ...

ಕೋವಿಡ್ ತಜ್ಞರ ಸಮಿತಿ ಸಭೆ. ಎರಡು ಲಸಿಕೆ ಪಡೆದವರಿಗೆ ಗಂಭೀರ ರೋಗ ಲಕ್ಷಣ ಸಾಧ್ಯತೆ ಅತಿ ಕಡಿಮೆ

ಶಿವಮೊಗ್ಗ : ಕೋವಿಡ್ ಮೂರನೇ ಅಲೆಯಲ್ಲಿ ಹಲವೆಡೆ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದರೂ, ಆತಂಕಪಡದೇ ಶಾಲಾ ...